Video: ರೆಸ್ಟೋರೆಂಟ್‌ನ ವೆಜ್ ಬಿರಿಯಾನಿಯಲ್ಲಿ ಪತ್ತೆಯಾಯ್ತು ಮೂಳೆ, ಇದರ ಅಸಲಿ ವಿಚಾರ ಬೇರೇನೇ ಇದೇ ನೋಡಿ

ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳನ್ನು ನೋಡಿದಾಗ ಎಂತಹ ಜನರು ಇರ್ತಾರೆ ಎಂದೆನಿಸುತ್ತದೆ. ಈ ಸ್ಟೋರಿ ಓದಿದ ಮೇಲೆ ನಿಮಗೆ ಈ ರೀತಿ ಅನಿಸಲೂ ಬಹುದು. ಹೌದು, ಸಾಮಾನ್ಯವಾಗಿ ಜೇಬಲ್ಲಿ ಒಂದು ರೂಪಾಯಿ ಕಡಿಮೆಯಿದ್ರೂ ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳಿಗೆ ಹೋಗಲು ನಾವು ಹಿಂದೆ ಮುಂದೆ ನೋಡ್ತೇವೆ. ಆದರೆ ಇಲ್ಲೊಂದು ಯುವಕರು ಗುಂಪೊಂದು ರೆಸ್ಟೋರೆಂಟ್‌ನಲ್ಲಿ ಬಿಲ್ ಪಾವತಿಸದಿರಲು ಖತರ್ನಾಕ್ ಪ್ಲ್ಯಾನ್ ಮಾಡಿ ಕೊನೆಗೆ ಸಿಕ್ಕಿ ಬಿದ್ದಿದೆ.

Video: ರೆಸ್ಟೋರೆಂಟ್‌ನ ವೆಜ್ ಬಿರಿಯಾನಿಯಲ್ಲಿ ಪತ್ತೆಯಾಯ್ತು ಮೂಳೆ, ಇದರ ಅಸಲಿ ವಿಚಾರ ಬೇರೇನೇ ಇದೇ ನೋಡಿ
ವೈರಲ್‌ ವಿಡಿಯೋ
Image Credit source: Twitter

Updated on: Aug 06, 2025 | 6:16 PM

ಉತ್ತರ ಪ್ರದೇಶ, ಆಗಸ್ಟ್ 06: ಸಾಮಾನ್ಯವಾಗಿ ನಮ್ಮ ಜೇಬಲ್ಲಿ ಒಂದು ರೂಪಾಯಿ ಕಡಿಮೆಯಿದ್ರು ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳಿಗೆ ಹೋಗೋದು ಬಿಡಿ, ಸಣ್ಣ ಪುಟ್ಟ ಅಂಗಡಿಗಳಲ್ಲಿ ಏನನ್ನಾದರೂ ಖರೀದಿಸಲು ಹಿಂದೇಟು ಹಾಕ್ತೇವೆ. ಒಂದು ವೇಳೆ ಖರೀದಿ ಮಾಡುವ ಮುನ್ನ ಬೆಲೆ ಕೇಳಿ, ಅಷ್ಟು ಹಣ ಇಲ್ಲದಿದ್ರೆ ಅಲ್ಲಿಂದ ವಾಪಾಸ್ ಬರ್ತೇನೆ. ಆದರೆ ಇಲ್ಲೊಂದು ಸ್ನೇಹಿತರ ಗುಂಪೊಂದು ರೆಸ್ಟೋರೆಂಟ್‌ಗೆ (restaurant’s) ತೆರಳಿ ಬಿರಿಯಾನಿ ಆರ್ಡರ್ ಮಾಡಿದೆ. ಕೊನೆಗೆ ಬಿಲ್ ಪಾವತಿ ಮಾಡುವುದನ್ನು ತಪ್ಪಿಸಲು ವೆಜ್ ಬಿರಿಯಾನಿಯಲ್ಲಿ ಮೂಳೆ ಸಿಕ್ಕಿದೆ ಎಂದು ನಾಟಕ ಶುರು ಮಾಡಿದೆ. ಉತ್ತರ ಪ್ರದೇಶದ ಗೋರಖ್ ಪುರದಲ್ಲಿರುವ (Gorakhpur of Uttar Pradesh) ಕಂಟೋನ್ಮೆಂಟ್ ಪೊಲೀಸ್ ಠಾಣೆ ಪ್ರದೇಶದ ಶಾಸ್ತ್ರಿ ಚೌಕದಲ್ಲಿರುವ ಬಿರಿಯಾನಿ ಬೇ ರೆಸ್ಟೋರೆಂಟ್‌ನಲ್ಲಿ ಜುಲೈ 31 ರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಏನಿದು ಘಟನೆ? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಏನಿದು ಘಟನೆ?

ಇದನ್ನೂ ಓದಿ
ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ
ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ
ಫ್ರೆಂಡ್‌ಶಿಪ್‌ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ
ಅಮ್ಮ ಕಣ್ಣು ದಿಟ್ಟಿಸಿ ನೋಡಿದ್ದೇ ತಡ, ಪೂಲ್‌ನಿಂದ ಓಡೋಡಿ ಬಂದ ಮರಿ ಹಿಪ್ಪೋ

ರೆಸ್ಟೋರೆಂಟ್‌ಗೆ ಊಟ ಮಾಡಲು ಯುವಕರ ಗುಂಪೊಂದು ಬಂದಿದೆ. ಈ ವೇಳೆಯಲ್ಲಿ ಕೆಲವರು ನಾನ್‌ವೆಜ್ ಬಿರಿಯಾನಿ ಆರ್ಡರ್ ಮಾಡಿದರೆ, ಇನ್ನು ಕೆಲವರು ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಊಟ ಮುಗಿಯುತ್ತಿದ್ದಂತೆ ಯುವಕರು ಹೈಡ್ರಾಮಾ ಶುರು ಮಾಡಿದ್ದಾರೆ. ವೆಜ್ ಬಿರಿಯಾನಿಯಲ್ಲಿ ಮೂಳೆ ಪತ್ತೆ ಆಗಿದೆ ಎಂದು ಗಲಾಟೆ ಶುರು ಮಾಡಿದ್ದಾರೆ. ಶ್ರಾವಣ ಮಾಸದಲ್ಲಿ ತಮಗೆ ನಾನ್‌ವೆಜ್ ನೀಡಲಾಗುತ್ತಿದೆ ಎಂದು ರೊಚ್ಚಿಗೆದ್ದಿದ್ದು, ಈ ಮೂಲಕ ಬಿಲ್ ಪಾವತಿಸುವುದನ್ನು ತಪ್ಪಿಸಲು ಈ ರೀತಿ ಪ್ಲ್ಯಾನ್ ಮಾಡಿದ್ದಾರೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಹೋಟೆಲ್ ಮ್ಯಾನೇಜರ್ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವೇಳೆ ಸ್ಥಳಕ್ಕೆ ಆಗಮಿಸಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಪರಿಶೀಲನೆ ನಡೆಸಿದಾಗ ಅಸಲಿ ವಿಚಾರ ಹೊರ ಬಿದ್ದಿದೆ. ಹೌದು, ಹೋಟೆಲ್ ಮ್ಯಾನೇಜರ್ ಸಿಸಿಟಿವಿ ನೋಡಿದಾಗ ಕೆಲ ಯುವಕರೇ ವೆಜ್‌ ಬಿರಿಯಾನಿ ಪ್ಲೇಟ್‌ಗೆ ಮೂಳೆಯ ತುಂಡನ್ನು ಹಾಕಿರುವ ಅಸಲಿ ಸತ್ಯ ಬಯಲಾಗಿದೆ. ಈ ಘಟನೆಯ ಬಳಿಕ ಈ ಯುವಕರು ಬಿಲ್ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ಈ ಮೂಳೆಯನ್ನು ವೆಜ್ ಬಿರಿಯಾನಿ ಪ್ಲೇಟ್‌ಗೆ ಹಾಕಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕ ರವಿಕರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ

@gharkekalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಒಬ್ಬ ಯುವಕನು ಮೂಳೆಯನ್ನು ಹಸ್ತಾಂತರಿಸುತ್ತಿರುವುದನ್ನು ನೋಡಬಹುದು. ಹೀಗೆ ವೆಜ್ ಬಿರಿಯಾನಿ ಇರುವ ಪ್ಲೇಟ್‌ಗೆ ಮೂಳೆಯ ತುಂಡನ್ನು ಹಾಕುವುದು ಈ ವಿಡಿಯೋದಲ್ಲಿದೆ.

ಇದನ್ನೂ ಓದಿ:Video: ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ವರ್ಷದಲ್ಲಿ 2 ಬಾರಿ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿದೇಶಿ ಉದ್ಯಮಿ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇಂತಹ ಜನರು ಉತ್ತರ ಪ್ರದೇಶಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ಇದು ಕೇವಲ ವಂಚನೆಯಲ್ಲ, ನಂಬಿಕೆ ದ್ರೋಹ..ಬಿಲ್ ಪಾವತಿಸುವುದನ್ನು ತಪ್ಪಿಸಲು ಈ ಯುವಕರು ಇಷ್ಟೊಂದು ಕೆಳ ಮಟ್ಟಕ್ಕೆ ಇಳಿಯುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ರೆಸ್ಟೋರೆಂಟ್ ಮಾಲೀಕರು ಹಾಗೂ ಮ್ಯಾನೇಜರ್ ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಈ ಯುವಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ