Viral: ಕಂಠ ಪೂರ್ತಿ ಕುಡಿದು ಬಂದ ವರ; ನಮ್ಗೆ ಮದುವೆ ಬೇಡ 2.8 ಲಕ್ಷ ಪರಿಹಾರ ಕೊಡಿ ಎಂದು ಪಟ್ಟು ಹಿಡಿದು ಕುಳಿತ ವಧುವಿನ ಕುಟುಂಬ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2024 | 2:22 PM

ಸಣ್ಣಪುಟ್ಟ ಕಾರಣಗಳಿಗೆ ಮದುವೆಗಳು ಮುರಿದು ಬೀಳುವಂತಹ ಸುದ್ದಿಗಳು ಆಗಾಗ್ಗೆ ಕೇಳಿರುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮದುವೆ ಮನೆಗೆ ವರ ಕುಡಿದು ಬಂದನೆಂದು ಕೋಪಗೊಂಡ ವಧುವಿನ ಕುಟುಂಬ ಮದುವೆ ಮುರಿದದ್ದು ಮಾತ್ರವಲ್ಲದೆ, ವರ ಮತ್ತು ಆತನ ತಂದೆಯನ್ನು ಹಿಡಿದಿಟ್ಟು 2.8 ಲಕ್ಷ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Viral: ಕಂಠ ಪೂರ್ತಿ ಕುಡಿದು ಬಂದ ವರ; ನಮ್ಗೆ ಮದುವೆ ಬೇಡ 2.8 ಲಕ್ಷ ಪರಿಹಾರ ಕೊಡಿ ಎಂದು ಪಟ್ಟು ಹಿಡಿದು ಕುಳಿತ ವಧುವಿನ ಕುಟುಂಬ
ಸಾಂದರ್ಭಿಕ ಚಿತ್ರ
Follow us on

ಮದುವೆಗೆ ಸಕಲ ಸಿದ್ಧತೆ ನಡೆದು, ಶಾಸ್ತ್ರಗಳು ಆರಂಭವಾಗಿ ಕುಟುಂಬಸ್ಥರು ಹಾಗೂ ಅಥಿತಿಗಳ ಸಮ್ಮುಖದಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕ್ಷುಲ್ಲಕ ಕಾರಣಗಳಿಂದ ಮದುವೆ ಮುರಿದು ಬಿದ್ದಂತಹ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಇಲ್ಲೊಂದು ಕಡೆ ಇಂತಹದ್ದೇ ಘಟನೆ ನಡೆದಿದ್ದು, ಮದುವೆ ಮನೆಗೆ ವರ ಕುಡಿದು ಬಂದನೆಂದು ಕೋಪಗೊಂಡ ವಧುವಿನ ಕುಟುಂಬಸ್ಥರು ಮದುವೆಯನ್ನು ಮುರಿದದ್ದು ಮಾತ್ರವಲ್ಲದೆ ವರ ಹಾಗೂ ಆತನ ತಂದೆಯನ್ನು ಹಿಡಿದಿಟ್ಟುಕೊಂಡು ಮದುವೆಗಾದ ಖರ್ಚಿಗೆ ಪರಿಹಾರವಾಗಿ 2.8 ಲಕ್ಷ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮದುವೆ ಮನೆಗೆ ಬರುವಾಗ ವರ ಕುಡಿದು ಬಂದನೆಂದು ವಧು ಹಾಗೂ ಆಕೆಯ ಕುಟುಂಬಸ್ಥರು ಮದುವೆಯನ್ನು ಮುರಿದಿದ್ದಾರೆ. ಮೆರವಣಿಗೆಯ ಮೂಲಕ ವರ ವಧುವಿನ ಮನೆಗೆ ಆಗಮಿಸಿದ ಸಂದರ್ಭದಲ್ಲಿ ವಧು ವರನ ಕಣ್ಣನ್ನು ನೋಡಿ ಈತ ಪಕ್ಕಾ ಕುಡಿದು ಬಂದಿದ್ದಾನೆ ಎಂದು ಅಸಮಾಧಾನಗೊಂಡಿದ್ದಾಳೆ. ಈ ವಿಷಯವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಇದರಿಂದ ದೊಡ್ಡ ಗಲಾಟೆಯೇ ಏರ್ಪಟ್ಟು ವಧುವಿನ ಕುಟುಂಬಸ್ಥರು ಮದುವೆ ಮುರಿದಿದ್ದಾರೆ. ಅಲ್ಲದೆ ವಧುವಿನ ಕಡೆಯವರು ವರ ಹಾಗೂ ಆತನ ತಂದೆಯನ್ನು ರಾತ್ರಿಯಿಡಿ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಇಲ್ಲಿವರೆಗೆ ಆದಂತಹ ಖರ್ಚಿಗೆ ಪರಿಹಾರವಾಗಿ 2.8 ಲಕ್ಷ ರೂಪಾಯಿ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ. ನಂತರ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ಪೊಲೀಸರ ಸಮ್ಮುಖದಲ್ಲಿ ವರನ ಕುಟುಂಬಸ್ಥರು ವಧುವಿನ ಕಡೆಯವರಿಗೆ 95 ಸಾವಿರ ರೂಪಾಯಿ ಪರಿಹಾರವನ್ನು ಕೊಟ್ಟು ವರ ಹಾಗೂ ಆತನ ತಂದೆಯನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಈ ಕುರಿತ ವಿಡಿಯೋವನ್ನು NCMIndiaa ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಸಮಾಜದಲ್ಲಿ ಯಾರೇ ಮದುವೆ ನಿರಾಕರಿಸಿದರೂ ಅದಕ್ಕೆ ವರ ಮತ್ತು ಆತನ ಕುಟುಂಬದವರೇ ಹೊಣೆಗಾರರಾಗುತ್ತಾರೆ ಎಂತಹ ವಿಪರ್ಯಾಸ ನೋಡಿ” ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ವರ ಹಾಗೂ ವರನ ತಂದೆಯನ್ನು ಕೂರಿಸಿ ವಧುವಿನ ಕಡೆಯವರು ನಮಗೆ ಪರಿಹಾರವಾಗಿ 2.8 ಲಕ್ಷ ರೂ. ಕೊಡಿ ಎಂದು ವಾಗ್ವಾದ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2‌ರ ಸೌಂದರ್ಯವನ್ನು ಕಂಡು ಶಾಕ್‌ ಆದ ಜಪಾನ್‌ ಮಹಿಳೆ; ವಿಡಿಯೋ ವೈರಲ್‌

ನವೆಂಬರ್‌ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 13 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ಮಾಡಿದ ಖರ್ಚಿಗೆ ಪರಿಹಾರವಾಗಿ ವರನ ಕಡೆಯಿಂದ ಹಣ ಕೇಳುವ ಹಕ್ಕು ಅವರಿಗಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದೃಷ್ಟವಂತ ವ್ಯಕ್ತಿ, ಒಂದು ವೇಳೆ ಮದುವೆಯಾಗಿ ಡಿವೋರ್ಸ್‌ ಆಗಿದ್ರೆ ಆಕೆ ಕೋಟಿಗಟ್ಟಲೆ ಪರಿಹಾರ ಕೇಳುತ್ತಿದ್ದಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ