AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎತ್ತಿನ ಗಾಡಿಯನ್ನೇರಿ  ಬಂದ ನವ ಜೋಡಿ; ನೆಟ್ಟಿಗರ ಗಮನ ಸೆಳೆಯುತ್ತಿದೆ ಈ ಅಪರೂಪದ ಮದುವೆ ದಿಬ್ಬಣ

Viral Video: ಎತ್ತಿನ ಗಾಡಿಯನ್ನೇರಿ ಬಂದ ನವ ಜೋಡಿ; ನೆಟ್ಟಿಗರ ಗಮನ ಸೆಳೆಯುತ್ತಿದೆ ಈ ಅಪರೂಪದ ಮದುವೆ ದಿಬ್ಬಣ

ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Apr 05, 2024 | 7:27 PM

ಸಾಮಾನ್ಯವಾಗಿ ಮದುವೆ ದಿಬ್ಬಣದಲ್ಲಿ ಅಲಂಕೃತ ವಾಹನದಲ್ಲಿ ವಧು ವರರು ಬರುತ್ತಾರೆ. ಕೆಲವು ಕಡೆ ವರ ಕುದುರೆಯೇರಿ ಬರುವ ಸಂಪ್ರದಾಯವೂ ಇದೆ. ಆದರೆ ಇಲ್ಲೊಂದು ನವ ಜೋಡಿ ವಿಶಿಷ್ಟ ರೀತಿಯಲ್ಲಿ ಎತ್ತಿನ ಗಾಡಿ ಏರಿ ದಿಬ್ಬಣ ಹೊರಟ್ಟಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನ ಅಮೂಲ್ಯ ಕ್ಷಣವಾಗಿದ್ದು, ಈ ಕ್ಷಣವನ್ನು ಸ್ಮರಣೀಯವನ್ನಾಗಿಸಲು ಹಲವರು ತಮ್ಮ ಮದುವೆ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜನೆ ಮಾಡುತ್ತಾರೆ. ಅದರಲ್ಲಿ ದಿಬ್ಬಣದಲ್ಲಿ ವಿಭಿನ್ನವಾಗಿ ಎಂಟ್ರಿ ಕೊಡುವುದು ಕೂಡಾ ಒಂದು. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಿನ್ನ ವಿಭಿನ್ನ ಮದುವೆ ದಿಬ್ಬಣದ ವಿಡಿಯೋಗಳು ಕಾಣಸಿಗುತ್ತಿರುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಅಲಂಕೃತ ಕಾರಿನ ಬದಲಿಗೆ ವಧು-ವರರು ಎತ್ತಿನ ಗಾಡಿಯನ್ನೇರಿ ದಿಬ್ಬಣ ಹೊರಟಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನವ ಜೋಡಿಯೊಂದು ಅಲಂಕೃತ ಕಾರಿನ ಬದಲಿಗೆ ಹಿಂದಿನ ಕಾಲದ ಸಂಪ್ರದಾಯದಂತೆ ಎತ್ತಿನ ಗಾಡಿಯೇರಿ ವರನ ಮನೆಗೆ ದಿಬ್ಬಣ ಹೊರಟಿದ್ದಾರೆ. ಈ ಕುರಿತ ವಿಡಿಯೋವನ್ನು ಆಕಾಶ್ (@akash_masoom_ladka) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ

ವೈರಲ್ ವಿಡಿಯೋದಲ್ಲಿ ಅಲಂಕೃತ ಎತ್ತಿನ ಗಾಡಿಯನ್ನೇರಿ ವರ ಮತ್ತು ವಧುವಿನ ದಿಬ್ಬಣ ಹೊರಟಿರುವುದನ್ನು ಕಾಣಬಹುದು. ವಾದ್ಯ ಬ್ಯಾಂಡ್ ಸಮೇತ ಬಹಳ ಅದ್ಧೂರಿಯಾಗಿ ನವ ಜೋಡಿಯ ದಿಬ್ಬಣ ಸಾಗಿದ್ದು, ಈ ದೃಶ್ಯ ನೋಡುಗರ ಹುಬ್ಬೇರಿಸುವಂತೆ ಮಾಡಿದೆ. ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರತೀಯ ಸಂಸ್ಕೃತಿಯಂತೆ ಎತ್ತಿನ ಗಾಡಿಯಲ್ಲಿ ನವ ಜೋಡಿ ದಿಬ್ಬಣ ಹೊರಟಿದ್ದನ್ನು ಕಂಡು ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ