Viral: ಕೋಳಿ ಸಾಗಾಟದ ಪಿಕಪ್‌ ಟ್ರಕ್‌ ಪಲ್ಟಿ; ವಾಹನದಿಂದ ಬಿದ್ದ ಕೋಳಿಗಳಿಗಾಗಿ ಮುಗಿಬಿದ್ದ ಚಿಕನ್‌ ಪ್ರಿಯರು

ಮದ್ಯ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿ ಅದರಿಂದ ಬಿದ್ದ ಮದ್ಯದ ಬಾಟಲಿಗಾಗಿ ಕುಡುಕರು ಮುಗಿಬಿದ್ದ ಘಟನೆಯ ಸುದ್ದಿಯ ಬಗ್ಗೆ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಚಿಕನ್‌ ಪ್ರಿಯರು ವಾಹನದಿಂದ ಬಿದ್ದ ಕೋಳಿಗಳನ್ನು ಕೊಂಡೊಯ್ದಿದ್ದಾರೆ. ಕೋಳಿ ಸಾಗಾಟದ ಪಿಕಪ್‌ ಟ್ರಕ್‌ ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ವಾಹನದಿಂದ ಬಿದ್ದ ಕೋಳಿಗಳನ್ನು ಕೊಂಡೊಯ್ಯುಲು ಜನ ಮುಗಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಕೋಳಿ ಸಾಗಾಟದ ಪಿಕಪ್‌ ಟ್ರಕ್‌ ಪಲ್ಟಿ; ವಾಹನದಿಂದ ಬಿದ್ದ ಕೋಳಿಗಳಿಗಾಗಿ ಮುಗಿಬಿದ್ದ ಚಿಕನ್‌ ಪ್ರಿಯರು
ವೈರಲ್ ವಿಡಿಯೋ
Edited By:

Updated on: Feb 17, 2025 | 8:15 AM

ಯಾವುದಾದ್ರೂ ವಸ್ತು ಬಿಟ್ಟಿ ಅಥವಾ ಧರ್ಮಕ್ಕೆ ಸಿಕ್ರೆ ನನ್ಗೂ ಇರ್ಲಿ, ನನ್‌ ಮನೆಯವರಿಗೂ ಇರ್ಲಿ ಅಂತ ಜನ ನಾ ಮುಂದು ತಾ ಮುಂದು ಎನ್ನುತ್ತಾ ಅದನ್ನು ಮುಗಿಬಿದ್ದು ಕೊಂಡೊಯ್ಯುತ್ತಾರೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ವಾಹನದಿಂದ ಬಿದ್ದ ಕೋಳಿಗಳನ್ನು ಜನ ಮುಗಿಬಿದ್ದು ಕೊಂಡೊಯ್ದಿದ್ದಾರೆ. ಕೋಳಿ ಸಾಗಾಟದ ಪಿಕಪ್‌ ಟ್ರಕ್‌ ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ವಾಹನದಿಂದ ಬಿದ್ದ ಕೋಳಿಗಳನ್ನು ಕೊಂಡೊಯ್ಯುಲು ಚಿಕನ್‌ ಪ್ರಿಯರು ಮುಗಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಕನ್ನೌಜ್‌ ಎಂಬಲ್ಲಿ ನಡೆದಿದ್ದು, ಚಾಲಕ ನಿದ್ದೆಗೆ ಜಾರಿದ ಕಾರಣ ಕನೌಜ್‌ ಎಕ್ಸ್‌ಪ್ರೆಸ್‌ವೇಯಲ್ಲಿ ಕೋಳಿ ಸಾಗಾಟದ ವಾಹನ ಪಲ್ಟಿ ಹೊಡೆದಿದೆ. ಅಪಘಾತದಿಂದಾಗಿ ವಾಹನದಿಂದ ಕೋಳಿಗಳು ಬಿದಿದ್ದು, ಬಿದ್ದ ಕೋಳಿಗಳನ್ನು ಲೂಟಿ ಹೊಡೆಯಲು ಸ್ಥಳಿಯರು ನಾ ಮುಂದು ತಾ ಮುಂದು ಎನ್ನುತ್ತಾ ಮುಗಿಬಿದ್ದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಟ್ರಕ್‌ ಚಾಲಕ ಸೇರಿದಂತೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ದಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:


ಈ ಕುರಿತ ವಿಡಿಯೋವನ್ನು ians_indian ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋ ಜನ ಕೋಳಿಗಳನ್ನು ಕೊಂಡೊಯ್ಯಲು ಮುಗಿಬಿದ್ದಿರುವ ದೃಶ್ಯವನ್ನು ಕಾಣಬಹುದು. ಜನ ಗುಂಪು ಗುಂಪಾಗಿ ಬಂದು ಬಿದ್ದ ಕೋಳಿಗಳನ್ನೆಲ್ಲಾ ಕೊಂಡೊಯ್ದಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ, ಟ್ರಕ್‌ ಚಾಲಕ ಸೇರಿದಂತೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರದೊಯ್ದಿದ್ದಾರೆ.

ಇದನ್ನೂ ಓದಿ; 84 ವರ್ಷಗಳ ದಾಂಪತ್ಯ ಜೀವನ, 13 ಮಕ್ಕಳು, 100 ಕ್ಕೂ ಹೆಚ್ಚು ಮೊಮ್ಮಕ್ಕಳು; ವಿಶ್ವ ದಾಖಲೆ ಬರೆದ ಜೋಡಿ

ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರಿಗೆಲ್ಲಾ ನೈತಿಕತೆಯೇ ಇಲ್ಲವೇʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಂಚನೆ ಪ್ರಕರಣದಡಿ ಅವರೆಲ್ಲರನ್ನೂ ಒಂದು ತಿಂಗಳ ಕಾಲ ಜೈಲಿನಲ್ಲಿಡಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಲ್ಲಿ ಏನ್‌ ನಡಿತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ