ಕ್ಲಾಸ್​ ಬಂಕ್ ಮಾಡಿ ಶಾಲೆಯಲ್ಲೇ ಫೇಶಿಯಲ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿದ ಮುಖ್ಯ ಶಿಕ್ಷಕಿ

ತರಗತಿಗೆ ಹೋಗದೆ ಗುಟ್ಟಾಗಿ ಶಾಲೆಯ ಅಡುಗೆ ಮನೆಯಲ್ಲಿ ಕುಳಿತು ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದನ್ನು ವಿಡಿಯೋ ಮಾಡಿ ಪ್ರಶ್ನಿಸಲು ಹೋದ ಶಿಕ್ಷಕಿಯನ್ನು ಥಳಿಸಿ ಕೈಗೆ ಕಚ್ಚಿ ಗಾಯಗೊಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಉನ್ನಾವೋನಲ್ಲಿ ನಡೆದಿದೆ.

ಕ್ಲಾಸ್​ ಬಂಕ್ ಮಾಡಿ ಶಾಲೆಯಲ್ಲೇ ಫೇಶಿಯಲ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿದ ಮುಖ್ಯ ಶಿಕ್ಷಕಿ
Follow us
ನಯನಾ ರಾಜೀವ್
|

Updated on: Apr 19, 2024 | 11:41 AM

ಶಾಲೆಯ ಮುಖ್ಯಶಿಕ್ಷಕಿ(Teacher)ಯೊಬ್ಬರು ಕ್ಲಾಸ್​ ಬಂಕ್​ ಮಾಡಿ ಶಾಲೆಯ ಆವರಣದಲ್ಲೇ ಫೇಶಿಯಲ್​ ಮಾಡಿಸಿಕೊಂಡು ಈಗ ಪೇಚಿಗೆ ಸಿಲುಕಿದ್ದಾರೆ. ಉತ್ತರ ಪ್ರದೇಶ(Uttar Pradesh)ದ ಉನ್ನಾವೋದಲ್ಲಿ ಈ ಘಟನೆ ನಡೆದಿದೆ. ಮುಖ್ಯಶಿಕ್ಷಕಿ ಕ್ಯಾಂಪಸ್​ನಲ್ಲಿ ಫೇಶಿಯಲ್ ಮಾಡಿಸಿಕೊಳ್ಳುವುದನ್ನು ಸಹ ಶಿಕ್ಷಕಿಯೊಬ್ಬರು ವಿಡಿಯೋ ಮಾಡಿದ್ದಾರೆ, ಈ ವಿಷಯ ತಿಳಿಯುತ್ತಿದ್ದಂತೆ ಆ ಶಿಕ್ಷಕಿ ಮೇಲೆ ಮುಖ್ಯಶಿಕ್ಷಕಿ ಇಟ್ಟಿಗೆಯಿಂದ ಹೊಡೆದು, ಕೈ ಕಚ್ಚಿ ಹಲ್ಲೆ ನಡೆಸಿದ್ದಾರೆ.

ಸಂಗೀತಾ ಸಿಂಗ್ ಅವರು ತರಗತಿಯನ್ನು ತೆಗೆದುಕೊಳ್ಳುವ ಬದಲು ಉನ್ನಾವೊದ ದಾದಾಮೌ ಪ್ರಾಥಮಿಕ ಶಾಲೆಯ ಅಡುಗೆಮನೆಯೊಳಗೆ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದರು. ಮತ್ತೊಬ್ಬ ಶಿಕ್ಷಕಿ ಅನಮ್ ಖಾನ್ ಅವರು ಇದನ್ನು ಪತ್ತೆಹಚ್ಚಿದ್ದಾರೆ.ಖಾನ್ ಚಿತ್ರೀಕರಿಸಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊಬೈಲ್​ ನೋಡಿದ ತಕ್ಷಣ ಎಚ್ಚೆತ್ತ ಮುಖ್ಯಶಿಕ್ಷಕಿ ನಾನು ಏನಾದರೂ ಮಾಡುತ್ತೇನೆ ಅದನ್ನು ಕೇಳಲು ನೀನ್ಯಾರು ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಲ್ಲನ್ನು ಎತ್ತಿಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಬ್ಲಾಕ್ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಖಾಸಗಿ ಕಂಪನಿ ಕೆಲಸ ಬಿಟ್ಟು ಹಂದಿ ಸಾಕಾಣಿಕೆಯಿಂದ ಯಶಸ್ಸು ಕಂಡ 26ರ ಯುವತಿ

ಸಂಗೀತಾ ಸಿಂಗ್ ವಿರುದ್ಧ ಅನಮ್ ಖಾನ್ ಬಿಘಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಿಕ್ಷಕರಿಂದ ದೂರು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಘಾಪುರ ವೃತ್ತಾಧಿಕಾರಿ ಮಾಯಾ ರೈ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ