ಕೆಲವೊಂದು ಬಾರಿ ನಾನಾ ಕಾರಣಗಳಿಂದ ಪೋಷಕರಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣವನ್ನು ಇಟ್ಟುಕೊಂಡು ಶಿಕ್ಷಕರು ಅಥವಾ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅವಮಾನ ಮಾಡುವಂತಿಲ್ಲ. ಆದ್ರೆ ಇಲ್ಲೊಂದು ಖಾಸಗಿ ಶಾಲೆಯಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೋಷಕರು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಒಬ್ಬ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ನಿಂದ ಹೊರ ಹಾಕಿ ಬಿಸಿಲಲ್ಲಿ ಕೂರಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಸ್ಕೂಲ್ ಮ್ಯಾನೇಜರ್ ಸುಮಾರು 100 ಮುಗ್ಧ ವಿದ್ಯಾರ್ಥಿಗಳನ್ನು ಗೇಟ್ ಒಳಗೆ ಬರಲು ಬಿಡದೆ ಬಿಸಿಲಲ್ಲಿ ಕೂರಿಸಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಮಾಡುವ ಮೂಲಕ ಶುಲ್ಕ ಕಟ್ಟುವಂತೆ ಒತ್ತಡ ಹೇರಿ ಮಕ್ಕಳಿಗೆ ಅವಮಾನವನ್ನೂ ಮಾಡಿದ್ದಾನೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಶಾಲಾ ನಿರೀಕ್ಷಕರು ತನಿಖೆಗೆ ಆದೇಶಿಸಿದ್ದಾರೆ.
#सिद्धार्थनगर
शर्मनाक घटना😡
विद्यालय की मान्यता समाप्त होना चाहिए👉स्कूल प्रबंधक की तानाशाही का वीडियो वायरल, फीस जमा नहीं होने पर बच्चों को अपमानित किया,
👉सैकड़ों बच्चों को रोड पर बैठाकर वीडियो बनाया, श्यामराजी हाईस्कूल के प्रबंधक ने वीडियो वायरल किया,#Siddharthnagar… pic.twitter.com/PcvAeaefT1
— बेसिक शिक्षा: सूचना और सामग्री (@Info_4Education) October 1, 2024
Info_4Education ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಕ್ಕಳು ಶಾಲೆಗೆ ಗೇಟ್ ಹೊರಗಡೆ ಬಿಸಿಲಿನಲ್ಲಿ ತಲೆ ತಗ್ಗಿಸಿ ಕುಳಿತಿರುವಂತಹ ದೃಶ್ಯವನ್ನು ಕಾಣಬಹುದು. ಶುಲ್ಕವನ್ನು ಕಟ್ಟುವವರೆಗೆ ನಿಮ್ಮ ಮಕ್ಕಳನ್ನು ಶಾಲೆಯ ಗೇಟ್ ಒಳಗೆ ಬಿಡುವುದಿಲ್ಲ ಎಂದು ಪೋಷಕರಿಗೆ ಈಗಾಗಲೇ ತಿಳಿಸಲಾಗಿದೆ, ಆದ್ರೆ ಅವರು ಇನ್ನೂ ಫೀಸ್ ಕಟ್ಟಿಲ್ಲ ಅದಕ್ಕಾಗಿ ಇವರನ್ನೆಲ್ಲಾ ಹೊರ ಹಾಕಿದ್ದೇನೆ ಎಂದು ಮ್ಯಾನೇಜರ್ ವಿಡಿಯೋ ಮಾಡುತ್ತಾ ದರ್ಪದ ಮಾತುಗಳನ್ನಾಡಿದ್ದಾನೆ.
ಇದನ್ನೂ ಓದಿ: ತಂದೆಯೇ ತನ್ನ ಮಗಳನ್ನು ಮದುವೆಯಾಗುವ ಅನಿಷ್ಠ ಸಂಪ್ರದಾಯ, ಎಂಥಾ ವಿಚಿತ್ರ ಪದ್ಧತಿ ನೋಡಿ…
ಅಕ್ಟೋಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಶುಲ್ಕ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬಹುದಿತ್ತಲ್ವಾʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ