ಎಮ್ಮೆ ಖರೀದಿಸಲು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆಯಾಗಲು ಹೋಗಿ ಅತ್ತೆ-ಮಾವನ ಕೈಗೆ ಸಿಕ್ಕಿ ಬಿದ್ದ ಮಹಿಳೆ

ಈ ಸಮಾಜದಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳ ಸುದ್ದಿಗಳನ್ನು ಕೇಳಿದರೆ ತಲೆ ಗಿರ್‌ ಎನ್ನುತ್ತೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸಾಮೂಹಿಕ ವಿವಾಹ ಯೋಜನೆಯಲ್ಲಿ ಸಿಗುವ ನಗದು ಮತ್ತು ಉಡುಗೊರೆಯ ಆಸೆಗೆ ಮಹಿಳೆಯೊಬ್ಬಳು ತನ್ನ ಮೊದಲ ಗಂಡನಿಗೆ ಡಿವೋರ್ಸ್‌ ನೀಡದೆ ಎರಡನೇ ಮದುವೆಗೆ ಯತ್ನಿಸಿದ್ದಾಳೆ. ಸಿಕ್ಕ ಹಣದಲ್ಲಿ ಎಮ್ಮೆ ಕೊಳ್ಳಬಹುದೆಂದು ಎರಡನೇ ಮದುವೆಗೆ ಯತ್ನಿಸಿ ಆಕೆ ತನ್ನ ಅತ್ತೆ ಮಾವನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಎಮ್ಮೆ ಖರೀದಿಸಲು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎರಡನೇ ಮದುವೆಯಾಗಲು ಹೋಗಿ ಅತ್ತೆ-ಮಾವನ ಕೈಗೆ ಸಿಕ್ಕಿ ಬಿದ್ದ ಮಹಿಳೆ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2025 | 11:58 AM

ಮದುವೆಯ ದುಂದು ವೆಚ್ಚಗಳನ್ನು ಹಾಗೂ ತಪ್ಪಿಸಲು ಹಾಗೂ ಬಡ, ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗವುದನ್ನು ತಪ್ಪಿಸಲು ಸರ್ಕಾರಗಳು ಸಾಮೂಹಿಕ ವಿವಾಹ ಯೋಜನೆಗಳನ್ನು ಜಾರಿಗೊಳಿಸಿವೆ. ಅಷ್ಟೇ ಅಲ್ಲದೆ ವಧುವರರಿಗೆ ನಗದು ಸಹಾಯದೊಂದಿಗೆ ಒಂದಷ್ಟು ಉಡುಗೊರೆಯನ್ನು ಸಹ ನೀಡುತ್ತದೆ. ಹೀಗೆ ಸಾಮೂಹಿಕ ವಿವಾಹ ಯೋಜನೆಯಲ್ಲಿ ಸಿಗುವ ನಗದು ಮತ್ತು ಉಡುಗೊರೆಯ ಆಸೆಗೆ ಇಲ್ಲೊಬ್ಬಳು ಮಹಿಳೆ ತನ್ನ ಮೊದಲ ಗಂಡನಿಗೆ ಡಿವೋರ್ಸ್‌ ನೀಡದೆ ಎರಡನೇ ಮದುವೆಗೆ ಯತ್ನಿಸಿದ್ದಾಳೆ. ಸಿಕ್ಕ ಹಣದಲ್ಲಿ ಎಮ್ಮೆ ಕೊಳ್ಳಬಹುದೆಂದು ಎರಡನೇ ಮದುವೆಗೆ ಯತ್ನಿಸಿ ಆಕೆ ತನ್ನ ಅತ್ತೆ ಮಾವನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಹನ್ಸ್‌ಪುರ ಜಿಲ್ಲೆಯಲ್ಲಿ ನಡೆದಿದ್ದು, ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹೈ ವೋಲ್ಟೇಜ್‌ ನಾಟಕ ನಡೆದಿದೆ. ಹೌದು ಮಹಿಳೆಯೊಬ್ಬಳು ಎಮ್ಮೆ ಖರೀದಿಸಲು ಹಾಗೂ ಯೋಜನೆಯ ಲಾಭ ಪಡೆಯಲು ಮೊದಲ ಗಂಡನಿಗೆ ಡಿವೋರ್ಸ್‌ ನೀಡದೆ ಎರಡನೇ ಮದುವೆಗೆ ಯತ್ನಿಸಿದ್ದು, ಆಕೆಯ ಅತ್ತೆ ಮಾವ ಸ್ಥಳಕ್ಕಾಗಮಿಸಿ ಮದುವೆಯನ್ನು ನಿಲ್ಲಿಸಿದ್ದಾರೆ.

ಆಸ್ಮಾ ಎಂಬಾಕೆ ಡಿವೋರ್ಸ್‌ ನೀಡದೆ ಎರಡನೇ ಮದುವೆಯಾಗಲು ಹೋಗಿ ಪಜೀತಿಗೆ ಸಿಳುಕಿದ್ದಾಳೆ. ಆಕೆ ಮೂರು ವರ್ಷಗಳ ಹಿಂದೆ ನೂರ್‌ ಮೊಹಮ್ಮದ್‌ ಎಂಬಾತನನ್ನು ವಿವಾಹವಾಗಿದ್ದಳು. ಆದ್ರೆ ಇವರಿಬ್ಬರ ಅಷ್ಟೇನೂ ಹೊಂದಾಣಿಕೆ ಇಲ್ಲದಿದ್ದ ಕಾರಣ ಆಕೆ ತನ್ನ ತವರು ಮನೆಯಲ್ಲಿ ವಾಸವಿದ್ದಳು. ಅಷ್ಟೇ ಅಲ್ಲದೆ ಇವರಿಬ್ಬರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಆದ್ರೆ ಡಿವೋರ್ಸ್‌ ಸಿಗುವ ಮುಂಚೆಯೇ ಆಕೆ ಎರಡನೇ ಮದುವೆಯಾಗಲು ಹೋಗಿದ್ದಾಳೆ.

ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯ ಬಗ್ಗೆ ತಿಳಿದ ಆಸ್ಮಾ ಈ ಯೋಜನೆಯಿಂದ ಸಿಗುವ 35 ಸಾವಿರ ರೂ. ಹಣ, ಬಟ್ಟೆ, ಬೆಳ್ಳಿ ಕಾಲುಂಗುರ ಇನ್ನಿತ್ಯಾದಿ ಉಡುಗೊರೆಯ ಲಾಭ ಪಡೆಯಬೇಕು ಮತ್ತು ಬಂದ ಹಣದಿಂದ ಎಮ್ಮೆ ಖರೀದಿಸಬೇಕೆಂದು ತನ್ನ ಸಂಬಂಧಿ ಜಾಬರ್‌ ಅಹ್ಮದ್‌ ಎಂಬಾತನನ್ನು ಮದುವೆಯಾಗಲು ಹೋಗಿದ್ದಾಳೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ; ಕೋಪದಿಂದ ಮದುವೆಯೇ ಬೇಡವೆಂದ ವಧು!

ಈ ಸಂದರ್ಭದಲ್ಲಿ ಆಸ್ಮಾಳ ಮೊದಲ ಗಂಡನ ತಂದೆ-ತಾಯಿ ವಿವಾಹ ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಮದುವೆ ನಿಲ್ಲಿಸಿದ್ದಾರೆ. ಮತ್ತು ಯೋಜನೆಯ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪೊಲೀಸರು ಆಸ್ಮಾಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ