ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಇಲಿಗಳ ಕಾಟ ಇದ್ದೇ ಇರುತ್ತದೆ. ಇವುಗಳ ಕಾಟ ತಡೆಯಲಾರದೆ ಇಲಿ ಪಾಷಾಣ ಇಟ್ಟು ಇಲಿಗಳನ್ನು ಸಾಯಿಸಿಬಿಡುತ್ತಾರೆ. ಹೀಗೆ ಇಲಿಯನ್ನು ಕೊಂದು ಕೇಸ್, ಕೋರ್ಟ್ ಎಂದು ಪಜೀತಿಗೆ ಸಿಲುಕಿದ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲಿಯನ್ನು ಸಾಯಿಸಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಹೌದು ಈ ಮಹಿಳೆ ಜೀವಂತ ಇಲಿಯನ್ನು ದಾರಕ್ಕೆ ಕಟ್ಟಿ ಅದನ್ನು ಬೀದಿ ನಾಯಿಗೆ ತಿನ್ನಿಸಿದ್ದು, ಇದರಿಂದ ಕೋಪಗೊಂಡ ಪ್ರಾಣಿಪ್ರಿಯರೊಬ್ಬರು ಇಲಿಯನ್ನು ಕೊಂದ ಹೆಂಗಸಿನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದ್ದು, ಕ್ರೂರವಾಗಿ ಇಲಿಯನ್ನು ಸಾಯಿಸಿದ ಮಹಿಳೆಯ ವಿರುದ್ಧ ಪ್ರಾಣಿಪ್ರಿಯರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಮಹಿಳೆ ಜೀವಂತ ಇಲಿಯನ್ನು ಹಿಡಿದು, ಅದರ ಬಾಲವನ್ನು ದಾರಕ್ಕೆ ಕಟ್ಟಿ ನಂತರ ಅದನ್ನು ಬೀದಿನಾಯಿಗೆ ತಿನ್ನಿಸಿದ್ದಾರೆ. ಈ ದೃಶ್ಯವನ್ನು ಯಾರೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಪ್ರಾಣಿ ಪ್ರಿಯ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತ ವಿಕೇಂದ್ರ ಶರ್ಮಾ ಅವರ ಕಣ್ಣಿಗೆ ಬಿದ್ದಿದ್ದು, ಮಹಿಳೆಯ ಈ ವರ್ತನೆಯಿಂದ ಕೋಪಗೊಂಡ ಅವರು ಬದೌನ್ ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಅಲ್ಲದೆ ಆಕೆ ಪ್ರತಿದಿನ ಹೀಗೆ ಇಲಿಗಳನ್ನು ಸಾಯಿಸಿ ನಾಯಿಗೆ ತಿನ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಮೊದಲು ಈ ದೂರನ್ನು ಸ್ವೀಕರಿಸದ ಪೊಲೀಸರು ನಂತರ ವಿಕೇಂದ್ರ ಅವರು ತೋರಿಸಿದ ಸಾಕ್ಷಿಯ ಆಧಾರದ ಮೇಲೆ ಮುಗ್ಧ ಜೀವಿಯ ಮೇಲೆ ಕ್ರೌರ್ಯ ತೋರಿ ಅದನ್ನು ಸಾಯಿಸಿದ ಆ ಮಹಿಳೆಯ ವಿರುದ್ಧ ಸೆಕ್ಷನ್ 325 ಮತ್ತು ಸೆಕ್ಷನ್ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. “ದೂರು ಸ್ವೀಕರಿಸಲಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿದೆ. ಮಹಿಳೆ ಪತ್ತೆಯಾದ ತಕ್ಷಣ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಕೊತ್ವಾಲಿ ಠಾಣೆಯ ಇನ್ಸ್‌ಪೆಕ್ಟರ್ ರಾಕೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
यूपी के बदायूं में एक महिला ने चूहे को कुत्ते को खिला दिया फिर क्या था कुछ लोगों की भावनाएं आहत हो गई पुलिस में रिपोर्ट लिखवा दिया पुलिस ने भी बड़ी मुस्तैदी से कार्यवाही शुरू कर दी।
अब सवाल ये है अगर किसी महिला को गौवंश बीच सड़क पर सींग मारकर घायल कर देता तो पुलिस इतनी त्वरित… pic.twitter.com/Upm0vSQa5s— Delip Mandal (@dilip_mandal_IN) September 10, 2024
ದಿಲೀಪ್ (Delip Mandal) ಎಂಬವರು ಈ ಕುರಿತ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಜೀವಂತ ಇಲಿಯನ್ನು ಹಿಡಿದು ಅದರ ಬಾಲವನ್ನು ಹಗ್ಗದಿಂದ ಕಟ್ಟಿ ಅದನ್ನು ಹಿಂಸಿಸಿ ನಾಯಿಗೆ ತಿನ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮೊಬೈಲ್ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಂಗಿಲ್ಲ, ವಿದ್ಯಾರ್ಥಿಗಳ ಫೋನ್ ಪುಡಿ ಪುಡಿ ಮಾಡಿದ ಮದರಸ ಗುರು
ಇಲಿಯನ್ನು ಕೊಂದ ಕಾರಣಕ್ಕೆ ಬದೌನ್‌ನಲ್ಲಿ ದಾಖಲಾದ ಎರಡನೇ ಎಫ್.ಐ.ಆರ್ ಇದಾಗಿದೆ. ಈ ಹಿಂದೆ 2022 ರ ನವೆಂಬರ್ ತಿಂಗಳಲ್ಲಿ ಇಲಿಯ ಬಾಲವನ್ನು ಇಟ್ಟಿಗೆಗೆ ಕಟ್ಟಿ ಚರಂಡಿಯಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಇದೇ ರೀತಿ ದೂರು ದಾಖಲಿಸಲಾಗಿತ್ತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ