Video: ಸರ್ರನೆ ಲಿಫ್ಟ್‌ಯೊಳಗೆ ನುಗ್ಗಿದ ನಾಗರಹಾವು; ಮುಂದೇನಾಯ್ತು ನೋಡಿ

ಮನೆಯ ಮೂಲೆಯಲ್ಲಿ, ಹೆಲ್ಮೆಟ್ ಹಾಗೂ ಶೂ ಹೀಗೆ ಎಲ್ಲೆಂದರಲ್ಲಿ ನಾಗರಹಾವುಗಳು ಕಾಣಿಸಿಕೊಳ್ಳುತ್ತವೆ. ಇದೀಗ ಅಪಾರ್ಟ್ಮೆಂಟ್‌ನ ಲಿಫ್ಟ್‌ಯೊಳಗೆ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಈ ವಿಷಕಾರಿ ಕಂಡೊಡನೆ ನಿವಾಸಿಗಳು ಭಯಭೀತರಾಗಿದ್ದಾರೆ. ನಿರ್ವಹಣಾ ಸಿಬ್ಬಂದಿಯೊಬ್ಬರು ಲಿಫ್ಟ್‌ಯೊಳಗೆ ಎಂಟ್ರಿ ಕೊಟ್ಟ ನಾಗರಹಾವಿನ ರಕ್ಷಿಸಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸರ್ರನೆ ಲಿಫ್ಟ್‌ಯೊಳಗೆ ನುಗ್ಗಿದ ನಾಗರಹಾವು; ಮುಂದೇನಾಯ್ತು ನೋಡಿ
ಲಿಫ್ಟ್‌ಯೊಳಗೆ ಕಾಣಿಸಿಕೊಂಡ ನಾಗರಹಾವು
Image Credit source: Twitter

Updated on: Oct 06, 2025 | 9:13 PM

ಉತ್ತರ ಪ್ರದೇಶ, ಅಕ್ಟೋಬರ್ 06: ನಾಗರಹಾವುಗಳೆಂದರೆ ಎಲ್ಲರಿಗೂ ಭಯನೇ. ಎಷ್ಟೇ ಧೈರ್ಯವಂತರಾಗಿದ್ದರೂ ಹಾವನ್ನು ಕಂಡೊಡನೆ ಒಂದು ಮೈಲಿ ದೂರ ಓಡಿಬಿಡುತ್ತಾರೆ. ಮನೆ ಸಮೀಪ, ಜನನಿಬಿಡ ಪ್ರದೇಶಗಳಲ್ಲಿ ನಾಗರಹಾವುಗಳು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸುತ್ತವೆ. ಅದೇ ರೀತಿ ಇಲ್ಲೊಂದು  ನೋಯ್ಡಾದ ಗೋಲ್ಡನ್ ಪಾಮ್ ಸೊಸೈಟಿಯ ಅಪಾರ್ಟ್ಮೆಂಟ್‌ನ (Golden Palm Society Apartment in Noida) ಲಿಫ್ಟ್‌ಯೊಳಗೆ ನಾಗರಹಾವೊಂದು (Indian Cobra) ಬಂದು ಬುಸ್ ಗುಡುತ್ತಾ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಆ ಬಳಿಕ ನಿರ್ವಹಣಾ ಸಿಬ್ಬಂದಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದು, ರಕ್ಷಣಾ ಕಾರ್ಯದ ವಿಡಿಯೋ ಸದ್ಯ ವೈರಲ್ ಆಗಿದೆ.

ಅಪಾರ್ಟ್ಮೆಂಟ್‌ನ ಲಿಫ್ಟ್‌ಯೊಳಗೆ ಪ್ರತ್ಯಕ್ಷವಾದ ನಾಗರಹಾವು

ವರದಿಗಳ ಪ್ರಕಾರ ಭಾನುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಜನರು ಲಿಫ್ಟ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಿಫ್ಟ್‌ಯೊಳಗೆ ನಿವಾಸಿಯೊಬ್ಬರು ಇದ್ದರು ಎನ್ನಲಾಗಿದೆ. ನಾಗರಹಾವನ್ನು ಕಂದೊಡನೆ ನಿರ್ವಹಣಾ ಸಿಬ್ಬಂದಿಗೆ ವಿಷಯ ತಿಳಿಸಿದ್ದು ಸ್ಥಳಕ್ಕೆ ಧಾವಿಸಿ  ನಾಗರಹಾವನ್ನು ಹಿಡಿದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ
ಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಮಿಡಿ ನಾಗರಹಾವಿನ ರಕ್ಷಣೆ
ಟಿವಿಯೊಳಗೆ ಅವಿತು ಕುಳಿತಿದ್ದ ವಿಷಕಾರಿ ಹಾವು
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮಹೇಂದರ್ ಮಹಿ (Mahender Mahi) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ನಾಗರಹಾವೊಂದು ಬಹುಮಹಡಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಾಣಬಹುದು. ಅಪಾರ್ಟ್ಮೆಂಟ್‌ನ ನಿರ್ವಹಣಾ ಸಿಬ್ಬಂದಿಯೂ ಈ ನಾಗರಹಾವನ್ನು ಕೋಲಿನ ಸಹಾಯದಿಂದ ಕಸದ ಬುಟ್ಟಿಯೊಳಗೆ ಹಾಕುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:Video: ಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಮಿಡಿ ನಾಗರಹಾವಿನ ರಕ್ಷಣೆ, ವೈರಲ್ ಆಯ್ತು ದೃಶ್ಯ

ಅಕ್ಟೋಬರ್ 5 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ, ನಗರಪ್ರದೇಶಗಳಲ್ಲಿ ಈ ವಿಷಕಾರಿ ಹಾವುಗಳು ಕಾಣಿಸಿಕೊಳ್ಳುವುದು ಹೊಸದೇನಲ್ಲ ಎಂದಿದ್ದಾರೆ. ಮತ್ತೊಬ್ಬರು, ತಮ್ಮ ನೆಲೆಯನ್ನು ಕಳೆದುಕೊಂಡು ನಗರ ಪ್ರದೇಶಗಳತ್ತ ಈ ವಿಷಕಾರಿ ಸರ್ಪಗಳು ಬರುತ್ತವೆ. ಈ ರೀತಿಯಾಗಲು ನಾವುಗಳೇ ಕಾರಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Mon, 6 October 25