Viral Video: ಪ್ರತಿದಿನ ಉಪಾಹಾರಕ್ಕಾಗಿ 110 ಹಸಿ ಮೊಟ್ಟೆ ಸೇವನೆ, ಇದು ಸೂಪರ್ ಫಿಟ್ ಎಂದ ವ್ಯಕ್ತಿ
ಉಜ್ಬೇಕಿಸ್ತಾನದ ವ್ಯಕ್ತಿಯೊಬ್ಬರು ಪ್ರತಿದಿನ 110 ಹಸಿ ಮೊಟ್ಟೆಗಳನ್ನು ಸೇವಿಸುವ ವಿಡಿಯೋ ವೈರಲ್ ಆಗಿದೆ. ಇದು ಸ್ನಾಯುಗಳನ್ನು ಬಲಪಡಿಸಿ, ಯೌವನ ಕಾಪಾಡುತ್ತದೆ ಎಂದು ಅವರು ಹೇಳುತ್ತಾರೆ. ಇಷ್ಟು ಪ್ರಮಾಣದ ಹಸಿ ಮೊಟ್ಟೆ ಸೇವನೆಯು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯೊಂದು ಭಾರೀ ಸಂಚಲನ ಮೂಡಿಸಿದೆ. ಉಜ್ಬೇಕಿಸ್ತಾನ್ ವ್ಯಕ್ತಿಯೊಬ್ಬರು ಪ್ರತಿದಿನ 110 ಹಸಿ ಮೊಟ್ಟೆಗಳನ್ನು ಸೇವನೆ (110 Raw Eggs Daily) ಮಾಡುತ್ತಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಮಾರು ವರ್ಷಗಳಿಂದ ಈ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಕ್ತಿ, ಇದೊಂದು ಸೂಪರ್ ಫಿಟ್ ಆಹಾರ ಹಾಗೂ ಅನಾರೋಗ್ಯದಿಂದ ದೂರ ಇರಲು ಉಪಕಾರಿ ಎಂದು ಹೇಳಿದ್ದಾರೆ. ಮೊಟ್ಟೆಗಳನ್ನು ಬೇಯಿಸದೆ, ಹಸಿಯಾಗಿ ಒಂದು ತಟ್ಟೆಗೆ ಹಾಕಿಕೊಂಡು ಕುಡಿಯುವ ವಿಡಿಯೋ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
“ಇದು ನನ್ನ ಸ್ನಾಯುಗಳನ್ನು ಬಲಪಡಿಸುತ್ತದೆ. ಜತೆಗೆ ತನ್ನ ತ್ರಾಣವನ್ನು ಹೆಚ್ಚಿಸಿ, 20 ವರ್ಷದ ಯುವಕ ರೀತಿ ಕಾಣುವಂತೆ ಮಾಡುತ್ತದೆ. ಇದನ್ನು ಸೇವನೆ ಮಾಡಿದ ನಂತರ ಒಂದು ದಿನವು ಅನಾರೋಗ್ಯದಿಂದ ಬಳಲಿಲ್ಲ” ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಈ ವ್ಯಕ್ತಿಯನ್ನು ‘ಎಗ್ಮ್ಯಾನ್’ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಬೇರೆ ಕಂಪನಿಗಳಿಗೆ ಸಂದರ್ಶನ ಇದೆ ಎಂದು ಸತ್ಯ ಹೇಳಿ ಕೆಲಸ ಕಳೆದುಕೊಂಡ ವ್ಯಕ್ತಿ!
ವೈರಲ್ ವಿಡಿಯೋ ಇಲ್ಲಿದೆ ನೋಡಿ:
🥚🤯Forget coffee for breakfast! A man from Uzbekistan drinks 110 raw eggs every morning
According to him, this helps build muscle, increases endurance and gives him energy for the whole day.
He claims he hasn’t been sick for several years and feels young and healthy.
Shall we… pic.twitter.com/fFTk5IXLOM
— NEXTA (@nexta_tv) November 5, 2025
ಹಸಿ ಮೊಟ್ಟೆ ಸೇವನೆ ಮಾರಕ:
ಮೊಟ್ಟೆ ಸಮೃದ್ಧವಾಗಿದ್ದರೂ , ಅವು ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ, ಆದರೆ ವೈದ್ಯರು ಹೇಳುವ ಪ್ರಕಾರ, ಪ್ರತಿದಿನ 110 ಮೊಟ್ಟೆಗಳನ್ನು ಸೇವನೆ ಮಾಡುವುದು ದೇಹಕ್ಕೆ ಮಾರಕ ಎಂದು ಹೇಳಿದ್ದಾರೆ. ಹಸಿ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯ ಹೆಚ್ಚಾಗಿದ್ದು, ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ, ಪ್ರತಿ 20,000 ಮೊಟ್ಟೆಗಳಲ್ಲಿ ಒಂದು ಸಾಲ್ಮೊನೆಲ್ಲಾ ಸೋಂಕಿಗೆ ಒಳಗಾಗಬಹುದು. ಇದರರ್ಥ ಒಬ್ಬ ವ್ಯಕ್ತಿಯು ವರ್ಷಕ್ಕೆ 40,000 ಕ್ಕೂ ಹೆಚ್ಚು ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ಅದು ದೇಹದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




