ವಿಶೇಷವಾಗಿ ಹುಡುಗರು ತಮ್ಮ ಗೆಳತಿಯನ್ನು ಮೆಚ್ಚಿಸಲು ಹಲವು ರೀತಿಯ ಸರ್ಕಸ್‌ಗಳನ್ನು ಮಾಡುತ್ತಾರೆ. ಹೆಚ್ಚಾಗಿ ದುಬಾರಿ ಉಡುಗೊರೆ, ಸರ್‌ಪ್ರೈಸ್ ಗಿಫ್ಟ್‌ಗಳನ್ನು ನೀಡುವ ಮೂಲಕ ತಮ್ಮ ಗರ್ಲ್‌ಫ್ರೆಂಡ್ ಅನ್ನು ಮೆಚ್ಚಿಸುತ್ತಾರೆ. ಆದ್ರೆ ಇಲ್ಲೊಬ್ಬ ಆಸಾಮಿ ತನ್ನ ಗೆಳತಿಯನ್ನು ಮೆಚ್ಚಿಸಲು ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ಆತ ಗರ್ಲ್‌ಫ್ರೆಂಡ್ ಅನ್ನು ಇಂಪ್ರೆಸ್ ಮಾಡುವ ಸಲುವಾಗಿ ಆಫ್ರಿಕನ್ ಸಿಂಹಗಳಿದ್ದ ಬೋನಿನೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾನೆ. ಆದರೆ ದುರಾದೃಷ್ಟವಾಶ್ ಸಿಂಹಗಳು ಆತನ ಮೇಲೆ ಅಟ್ಯಾಕ್ ಮಾಡಿವೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಉಜ್ಬೇಕಿಸ್ತಾನದ ಪಾರ್ಕೆಂಟ್‌ನಲ್ಲಿ ಡಿಸೆಂಬರ್ 17 ರಂದು ಈ ಘಟನೆ ನಡೆದಿದ್ದು, ಸಿಂಹದ ಬೋನಿನೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಫ್ ಇರಿಸ್ಕುಲೋವ್ ಎಂಬ 44 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಇಂಪ್ರೆಸ್ ಮಾಡುವ ಸಲುವಾಗಿ ಮುಂಜಾನೆ 5 ಗಂಟೆಯ ಸುಮಾರಿಗೆ ಆಫ್ರಿಕನ್ ಸಿಂಹಗಳಿದ್ದ ಬೋನಿಗೆ ಪ್ರವೇಶಿಸಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಮೇಲೆ ಸಿಂಹಗಳು ದಾಳಿ ಮಾಡಿ ಆತನನ್ನು ಬಾಗಶಃ ತಿಂದು ಹಾಕಿವೆ.
RebelwoaReason ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮೃಗಾಲಯದ ಸಿಬ್ಬಂದಿ ವಿಡಿಯೋ ಮಾಡುತ್ತಲೇ ಸಿಂಹದ ಬೋನಿನ ಬೀಗ ತೆಗೆದು ಸಿಂಬಾ ಸಿಂಬಾ… ಎನ್ನುತ್ತಾ ಪ್ರವೇಶಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಸಿಂಹಗಳು ಇದ್ದಕ್ಕಿದ್ದಂತೆ ಆತನ ಮೇಲೆರಗಿವೆ.
ಇದನ್ನೂ ಓದಿ: ಹಣದ ವಿಚಾರವಾಗಿ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬಲ್ಲವಂತೆ; ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
(Daily Mail) A shocking video shows the moment a zookeeper is fatally attacked and eaten alive by lions after going inside their cage to ‘impress his girlfriend’.
The guard, named as F. Iriskulov, 44, unknowingly caught his final moments on camera as he filmed himself entering… pic.twitter.com/lVIkisFnmG
— RebelwithoutaReason (@RebelwoaReason) December 31, 2024
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 21 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹುಚ್ಚುತನದ ಪರಮಾವಧಿʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾಕೆ ಪ್ರಾಣಿಗಳ ತಂಟೆಗೆ ಆತ ಹೋಗಿದ್ದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾವುದೇ ಕಾಡು ಪ್ರಾಣಿಗಳನ್ನು ಲಘವಾಗಿ ತೆಗೆದುಕೊಳ್ಳಬಾರದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Sat, 4 January 25