ಕೊಲಂಬಿಯಾದಲ್ಲಿ ಅತ್ಯಂತ ಅಪರೂಪದ ‘ಅರ್ಧ-ಹೆಣ್ಣು, ಅರ್ಧ-ಗಂಡು’ ಪಕ್ಷಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು 100 ವರ್ಷಗಳ ಹಿಂದೆ ಈ ಜಾತಿಯಲ್ಲಿ ಒಮ್ಮೆ ಮಾತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಇಂಡಿಪೆಂಡೆಂಟ್ ವರದಿಯ ಪ್ರಕಾರ , ಅಪರೂಪದ ಹಕ್ಕಿ ತನ್ನ ದೇಹದ ಅರ್ಧಭಾಗದಲ್ಲಿ ಪುರುಷ ಬಣ್ಣಗಳನ್ನು ಹೊಂದಿದ್ದು, ಇನ್ನೊಂದು ಅರ್ಧಭಾಗದಲ್ಲಿ ಹೆಣ್ಣು ಗರಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಗುಣಲಕ್ಷಣಗಳನ್ನು ಇರುವುದನ್ನು ನೋಡಿರುತ್ತೇವೆ. ಆದರೆ ಪ್ರಕ್ಷಿಗಳಲ್ಲಿಯೂ ಕೂಡ ಈರೀತಿಯ ಲಕ್ಷಣ ಕಂಡುಬಂದಿದ್ದು, ಇದೀಗಾ ವಿಜ್ಞಾನ ಲೋಕದಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಸದ್ಯ ಕೊಲಂಬಿಯಾದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಅಪರೂಪದ ಪಕ್ಷಿಯ ಪೋಟೋ ಸೋಶಿಯಲ್ ವೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಪಕ್ಷಿಯಲ್ಲಿ ದೇಹದ ಒಂದು ಭಾಗವು ಗಂಡು ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡಿದೆ. ಇನ್ನೊಂದು ಬದಿಯಲ್ಲಿ ಸ್ತ್ರೀ ಪುಕ್ಕ ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಫಿನೋಟೈಪಿಕ್ ಸ್ತ್ರೀಯಾಗಿ ಕಂಡುಬಂದಿದ್ದು ವಿಜ್ಞಾನ ಲೋಕದಲ್ಲಿ ಬೆರಗು ಮೂಡಿಸಿದೆ.
ಇದನ್ನೂ ಓದಿ: ಶ್ರೀಮಂತನಾಗುವುದು ಹೇಗೆಂದು ಪುಸ್ತಕ ಬರೆದ ಲೇಖಕನ ಬಳಿ 10,000 ಕೋಟಿ ರೂ ಸಾಲ; ಆದರೆ, ಬೇರೆ ಇದೆ ಟ್ವಿಸ್ಟ್
ಕೊಲಂಬಿಯಾದ ಮನಿಜೆಲ್ಸ್ ಬಳಿಯ ನಿಸರ್ಗ ಮೀಸಲು ಪ್ರದೇಶದಲ್ಲಿನ ಒಂದು ಸಣ್ಣ ಜಮೀನಿನಲ್ಲಿ ಗಮನಾರ್ಹವಾದ ವೈಜ್ಞಾನಿಕ ಆವಿಷ್ಕಾರದಲ್ಲಿ ಸಂಶೋಧಕರ ತಂಡದ ಭಾಗವಾಗಿದ್ದ ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು ಹಸಿರು ಹನಿಕ್ರೀಪರ್ ಪಕ್ಷಿ ಎಂದು ಗುರುತಿಸಲಾದ ಈ ಪಕ್ಷಿಯನ್ನು ಮೊದಲು ಗುರುತಿಸಿದರು. ಒಟಾಗೋ ಯೂನಿವರ್ಸಿಟಿ ಅಪರೂಪದ ಪಕ್ಷಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ