ಸಾಮಾಜಿಕ ಜಾಲತಾಣಗಳ ಜಂಜಾಟದಲ್ಲಿ ನೂರಾರು ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿರುತ್ತವೆ. ಹಲವಾರು ವಿಡಿಯೋಗಳು ತಮ್ಮ ಪಾಡಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದುಹೋಗುತ್ತಿರುತ್ತದೆ. ಒಂದರ ಹಿಂದೆ ಒಂದರಂತೆ ಬಂದು ಹೋಗುತ್ತದೆ. ಆದರೆ, ಇಲ್ಲೊಂದು ವಿಶೇಷ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ತಿಂಗಳ ಹಿಂದೆ ವೈರಲ್ ಆಗಿತ್ತು. ಒಂದು ವಿಚಿತ್ರ ಆಕೃತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಅದು ದೆವ್ವದ್ದು, ಏಲಿಯನ್ ಇತ್ಯಾದಿ ಎಂದು ಜನರು ಆಡಿಕೊಂಡಿದ್ದರು. ನೋಡುಗರು ಈ ಚಿತ್ರಣ ನೋಡಿ ಒಂದು ಕ್ಷಣಕ್ಕೆ ಗಾಬರಿಗೊಳ್ಳುವಂತೆ ಆಗಿತ್ತು.
ಕೆಲವರು ಈ ವಿಡಿಯೋವನ್ನು ನೋಡಿ ಆಕೃತಿಯ ಬಗ್ಗೆ ವಿವಿಧ ಅಭಿಪ್ರಾಯ ತಾಳಿದ್ದರು. ಕೆಲವೊಬ್ಬರು ಇದನ್ನು ದೆವ್ವ ಎಂದು ಅಂದುಕೊಂಡಿದ್ದರು. ಇನ್ನೂ ಕೆಲವರು ಈ ಆಕೃತಿಯನ್ನು ಏಲಿಯನ್ ಎಂದು ಕರೆದಿದ್ದರು. ಕೆಲವರು ಅದು ದೆವ್ವ, ಭೂತ ಏನೂ ಅಲ್ಲ ಎಂದು ಯಾರೋ ಮನುಷ್ಯರೇ ನಡೆದುಕೊಂಡು ಹೋಗುತ್ತಿರುವುದು ಎಂದಿದ್ದರು. ಒಬ್ಬೊಬ್ಬರು ಅವರ ಅನುಭವ, ಆಲೋಚನೆಗಳಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರು.
ಆದರೆ, ಈ ವಿಡಿಯೋ ದೆವ್ವದ್ದೂ ಅಲ್ಲ, ಏಲಿಯನ್ ಕೂಡ ಅಲ್ಲ. ಹಾಗೆ ಅಂದುಕೊಂಡಿದ್ದು ತಪ್ಪು ಎಂದು ಈಗ ಹೇಳಲಾಗುತ್ತಿದೆ. ಸ್ಥಳೀಯ ವಾಹಿನಿಯೊಂದು ಇಬ್ಬರು ಬೈಕ್ ಸವಾರರು ಶೂಟ್ ಮಾಡಿರುವ ವಿಡಿಯೋ ಹರಿಬಿಟ್ಟಿದ್ದನ್ನು ಪ್ರಸಾರ ಮಾಡಿತ್ತು. ಬಳಿಕ, ಬಹುತೇಕ ರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಇದನ್ನು ಸುದ್ದಿ ಮಾಡಿದ್ದವು.
This Video is from #hazaribagh #Jharkhand claiming Creature shown in this Video is an #Alien & viral with speed, no one claiming it to be fake or false but much real??
Have they really arrived or just Rumours?#aliens #ViralVideo pic.twitter.com/RpSZip6lEO— Invincible AG (@crazyme_ag) May 30, 2021
ಆದರೆ, ಈಗ ತಿಳಿದುಬಂದಿರುವಂತೆ ಅದು ಒಬ್ಬಾಕೆ ಮಹಿಳೆ ನಡೆದುಕೊಂಡು ಹೋಗುತ್ತಿರುವುದರದ್ದಾಗಿದೆ. ಆಕೆ ಸರಿಯಾಗಿ ಬಟ್ಟೆ ತೊಟ್ಟುಕೊಳ್ಳದೆ ಹೋಗಿರುವುದು ಈ ಭಯಕ್ಕೆ ಕಾರಣವಾಗಿದೆ. ಆಲ್ಟ್ ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್ನಲ್ಲಿ ಈ ವಿಚಾರ ಬಹಿರಂಗವಾಗಿದೆ. ಟೈಮ್ಸ್ ನೌ ನ್ಯೂಸ್ ಸಹಿತ ಈ ಸ್ಪಷ್ಟೀಕರಣ ವಿಚಾರ ವರದಿ ಮಾಡಿದೆ.
ವಿಡಿಯೋದಲ್ಲೇ ಕೇಳಿರುವಂತೆ ವಿಡಿಯೋ ಮಾಡಿದಾತ, ಹುಡುಗಿ ಹೀಗೆ ನಡೆದುಹೋಗುತ್ತಿದ್ಧಾಳೆ ಎಂದೇ ಕೂಗಿದ್ದಾನೆ. ಜೊತೆಗೆ, ಆತನ ನಂತರ ಅಲ್ಲಿ ಆಕೆಯನ್ನು ಕಂಡವರೂ ಅದು ಹುಡುಗಿ/ ಮಹಿಳೆ ಎಂದೇ ಖಚಿತಪಡಿಸಿದ್ದಾರೆ. ಜಾರ್ಖಂಡ್ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರು ಸೆರೈಕೆಲಾ ಎಂಬಲ್ಲಿಂದ ಖಾರ್ಸವಾನ್ ಎಂಬ ಕಡೆಯಿಂದ ವಾಪಸ್ ಆಗುತ್ತಿರುವಾಗ ಈ ದೃಶ್ಯ ಸೆರೆಯಾಗಿದೆ.
ಇದೀಗ, ಸೆರೈಕೆಲಾ ಸಬ್ ಇನ್ಸ್ಪೆಕ್ಟರ್ ಮೊಹಮ್ಮದ್ ನೌಶದ್ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಮಹಿಳೆ ಅಥವಾ ಯುವತಿ ಯಾಕೆ ಹಾಗೆ ನಡೆದುಹೋಗುತ್ತಿದ್ದಳು. ಯಾಕೆ ಬಟ್ಟೆ ತೊಟ್ಟಿರಲಿಲ್ಲ. ಏನಾಗಿತ್ತು ಎಂದು ತನಿಖೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: Viral Video: ಕಡುಕತ್ತಲಿನಲ್ಲಿ ಸೇತುವೆ ಮೇಲೆ ಕಂಡುಬಂದ ಆಕೃತಿ ಏನು? ವಿಡಿಯೋ ನೋಡಿ ಗಾಬರಿಗೊಂಡ ನೆಟ್ಟಿಗರು
ಶೀತ, ಕಿವಿ ಬ್ಲಾಕ್ ಆಗಿದೆ ಎಂದು ವೈದ್ಯರ ಬಳಿ ಹೋದಾಗ ಕಿವಿಯೊಳಗೆ ಸಿಕ್ಕಿದ್ದು 22 ವರ್ಷ ಹಳೆಯ ವಸ್ತು!
Published On - 10:43 pm, Sat, 3 July 21