Viral Video : ಪೊಲೀಸ್ ಆಂಟೀ, ನಿಮ್ಮ ಲಾಠಿ ನನಗೆ ಬೇಕು ಅಂದ್ರೆ ಬೇಕು ಅಷ್ಟೆ!

| Updated By: ಶ್ರೀದೇವಿ ಕಳಸದ

Updated on: Sep 05, 2022 | 11:32 AM

Little Girl in Mumbai : ರಾತ್ರಿಯಾಗಿದೆ. ಮುಂಬೈನ ಮಹಿಳಾ ಪೊಲೀಸ್​ ತಮ್ಮಪಾಡಿಗೆ ತಾವು ಕರ್ತವ್ಯ ನಿರತರಾಗಿದ್ದಾರೆ. 21ತಿಂಗಳ ಈ ಹೆಣ್ಣುಮಗು, ತನಗೆ ಲಾಠಿ ಬೇಕು ಎಂದು ದುಂಬಾಲುಬಿದ್ದಿದೆ. ಎಂಟು ಮಿಲಿಯನ್ ನೆಟ್ಟಿಗರು ಈ ಮುದ್ದಾದ ವಿಡಿಯೋಗೆ ಫಿದಾ!

Viral Video : ಪೊಲೀಸ್ ಆಂಟೀ, ನಿಮ್ಮ ಲಾಠಿ ನನಗೆ ಬೇಕು ಅಂದ್ರೆ ಬೇಕು ಅಷ್ಟೆ!
ಕೋಲು ಬೇಕು!
Follow us on

Viral Video : ಪೊಲೀಸ್​ ಎಂದರೆ ಮಕ್ಕಳಲ್ಲಿ ಭಯಹುಟ್ಟಿಸಿದ ಪೋಷಕರು ಸಾಕಷ್ಟಿದ್ದಾರೆ. ಹಾಗೆಯೇ ಪೊಲೀಸ್​ ಎಂದರೆ ಫ್ರೆಂಡ್​ ಎಂದು ಪ್ರೀತಿಯಿಂದ ಅವರೊಂದಿಗೆ ಒಡನಾಟ ಹುಟ್ಟಿಸಿದ ಪೋಷಕರೂ ನಮ್ಮ ನಡುವೆ ಇದ್ದಾರೆ. ಆದರೆ ಕೆಲ ಮಕ್ಕಳು ತಾವಾಗಿಯೇ ಪೊಲೀಸರನ್ನು ಸ್ನೇಹಿತರನ್ನಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ! ಅದು ಬಹಳ ವಿಶೇಷ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮುಂಬೈನಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಕೈಯಲ್ಲಿರುವ ಲಾಠಿ ತನಗೆ ಬೇಕೇ ಬೇಕೆಂದು ಈ ಹೆಣ್ಣುಮಗು ಹಠ ಹಿಡಿದಿದೆ. 8 ಮಿಲಿಯನ್​ ವೀಕ್ಷಣೆಗೆ ಒಳಗಾಗಿರುವ ಈ ವಿಡಿಯೋ ಬಹಳ ಮುದ್ದಾಗಿದೆ.

 

ಇನ್​ಸ್ಟಾಗ್ರಾಮ್​ನಲ್ಲಿ ಕನಿಷ್ಕಾ ಬಿಷ್ಣೋಯ್ ಎಂಬ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕನಿಷ್ಕಾಗೆ 21 ತಿಂಗಳು. ಲಾಠಿಯನ್ನು ಆಟಿಕೆ ಎಂದುಕೊಂಡಿದೆಯೋ ಏನೋ. ತನಗದು ಬೇಕು ಎಂದು ಕೇಳುವ ರೀತಿಗೆ ಪೊಲೀಸ್​ ಅದು ನಿನಗೆ ಯಾಕೆ ಬೇಕು, ಯಾರಿಗೆ ಹೊಡೆಯಲು ಬೇಕು ಎಂದು ತಮಾಷೆ ಮಾಡಿದ್ದಾರೆ. ಅಮ್ಮನಿಗಾ? ಎಂದಾಗ ಅಸ್ಪಷ್ಟವಾಗಿ ಹೂಂ ಎಂದ ಹಾಗಿದೆ.

ದಿನಗಟ್ಟಲೆ ನಿಂತು ಜಂಜಾಟದಲ್ಲಿ ಕಳೆದುಹೋಗುವ ಪೊಲೀಸ್​ ಮುಖದಲ್ಲಿ ಹೀಗೆ ಈ ಮುದ್ದುಕೂಸು ನಗುತರಿಸಿದೆ. ಸಾಕಷ್ಟು ನೆಟ್ಟಿಗರು ಈ ವಿಡಿಯೋ ಮೆಚ್ಚಿ ಕೊಂಡಾಡಿದ್ದಾರೆ. ಮತ್ತೆ ಮತ್ತೆ ನೋಡಿ ನಗುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 11:24 am, Mon, 5 September 22