ಮುಂಬೈನಿಂದ, ಪಶ್ಚಿಮಬಂಗಾಳದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಭಾನುವಾರ ಸಂಜೆ ಬಹುದೊಡ್ಡ ದುರಂತದಿಂದ ಪಾರಾಗಿದೆ. ಪೈಲಟ್ಗಳ ಸಮಯಪ್ರಜ್ಞೆಯಿಂದ 188 ಮಂದಿಯ ಪ್ರಾಣ ಉಳಿದಿದೆ. ದುರ್ಗಾಪುರ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವಾಗ ಸುಂಟರಗಾಳಿಯ ಪ್ರಭಾವಕ್ಕೆ ಸಿಲುಕಿ ವಿಮಾನ ತೀವ್ರ ಕುಲುಕಾಟಕ್ಕೆ ಒಳಗಾಯಿತು. ಗಾಳಿಯಿಂದ ಸಿಕ್ಕಾಪಟೆ ಅಲುಗಾಡಿದ ವಿಮಾನದ ಒಳಗಿನ ದೃಶ್ಯದ ವಿಡಿಯೋ ವೈರಲ್ ಆಗಿದೆ. ವಿಮಾನದೊಳಗೆ ಇದ್ದ ಪ್ರಯಾಣಿಕರಿಗೆ ಸೇರಿದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕ್ಯಾಬಿನ್ ಬ್ಯಾಗೇಜ್ ಪ್ರಯಾಣಿಕರ ಮೇಲೆ ಕುಸಿದಿದೆ. ಆಕ್ಸಿಜನ್ ಮಾಸ್ಕ್ಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ತಲೆಗೆ ಗಂಭೀರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕನಿಗೆ ಬೆನ್ನುಮೂಳೆಗೆ ಹೊಡೆತ ಬಿದ್ದಿದೆ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ. ಹಾಗೇ, ಗಾಯಗೊಂಡ ಎಲ್ಲರಿಗೂ ದುರ್ಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪೈಸ್ಜೆಟ್ ವಕ್ತಾರ ಮಾಹಿತಿ ನೀಡಿದ್ದಾರೆ. ಇನ್ನು ತಲೆಗೆ ಬ್ಯಾಂಡೇಜ್ ಹಾಕಿದ್ದ ವ್ಯಕ್ತಿಯೊಬ್ಬ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾರು ಅಪಘಾತವಾಗುವ ಸಂದರ್ಭದಲ್ಲಿ ಯಾವ ಸನ್ನಿವೇಶ ಇರುತ್ತದೆಯೋ, ಅದರ ಎರಡು ಪಟ್ಟು ಭೀಕರ ಸನ್ನಿವೇಶ ವಿಮಾನದಲ್ಲಿ ಇತ್ತು ಎಂದಿದ್ದಾರೆ.
Extreme turbulence in a flight between Mumbai to Durgapur. I can feel what’s going on in the minds of passengers when oxygen masks are coming down.
Airline was SpiceJet. Again it was B737 MAX.
Never travelling in this aircraft.
But thankfully no major accident. ?#SpiceJet pic.twitter.com/j7225Ag0UZ— Yuvraj Sharma (@SharmaYuv1) May 1, 2022
ಸ್ಪೈಸ್ಜೆಟ್ನ ಬೋಯಿಂಗ್ ಬಿ737 ನ SG-945 ವಿಮಾನ ಮೇ 1ರಂದು ಮುಂಬೈನಿಂದ ದುರ್ಗಾಪುರಕ್ಕೆ ಹೋಗುತ್ತಿತ್ತು. ದುರ್ಗಾಪುರದಲ್ಲಿ ಲ್ಯಾಂಡ್ ಆಗುವ ಹೊತ್ತಿಗೆ ಗಾಳಿಯಿಂದಾಗಿ ವಿಮಾನ ಅಲುಗಾಡಲು ಶುರುವಾಯಿತು. ಈ ಘಟನೆಯಲ್ಲಿ ಸುಮಾರು 12 ಪ್ರಯಾಣಿಕರಿಗೆ ಗಾಯವಾಗಿದೆ. ಗಗನಸಖಿಯರು ಸಮಾಧಾನ ಹೇಳುತ್ತಿದ್ದರೂ, ಜನರು ತೀವ್ರ ಭಯಕ್ಕೆ ಒಳಗಾಗಿದ್ದರು.
ಇದನ್ನೂ ಓದಿ: Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?
Published On - 12:13 pm, Mon, 2 May 22