ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಯಾರೇ ಆಗಲಿ ಹೊಸತ್ತನ್ನು ಆವಿಷ್ಕರಿಸಿದರೆ ಅಂಥ ವಿಡಿಯೋ, ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಹುರಿದುಂಬಿಸುತ್ತಾರೆ. ಇದೀಗ 66 ವರ್ಷದ ಕೈಗಾರಿಕೋದ್ಯಮಿಯೊಬ್ಬರು ಹಣ್ಣು ಕೀಳಲು ತಯಾರಿಸಿದ ಸಾಧನವನ್ನು ನೋಡಿದ ಆನಂದ್ ಮಹೀಂದ್ರಾ (Anand Mahindra) ಅವರು, ಅದರ ವಿಡಿಯೋವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಣ್ಣು ಕೀಳುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: Trending: ಕೆಂಪು ತೋಳಕ್ಕೆ ಜನ್ಮ ನೀಡಿದ ‘ಬ್ರೇವ್’, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಯುಎಸ್ನ ಮೃಗಾಲಯ
ಆವಿಷ್ಕಾರದಿಂದ ಅವರು ಬೆಚ್ಚಿಬೀಳದಿದ್ದರೂ ಸರಳ ಉಪಾಯದ ಮೂಲಕ ಯಾವುದೇ ಏಟು ಬೀಳದೆ ಹಣ್ಣನ್ನು ಕೀಳುವ ಸಾಧನ ವಿಶೇಷವೆನಿಸಿದೆ. ವಿಡಿಯೋದಲ್ಲಿ ನೋಡುವಂತೆ, ಪ್ಲಾಸ್ಟಿಕ್ ಬಾಟಲ್ ಹಿಂಭಾಗವನ್ನು ನಾಲ್ಕು ಭಾಗವನ್ನಾಗಿ ಮಾಡಿ ಅದಕ್ಕೆ ಹಗ್ಗದ ಸಹಾಯದಿಂದ ಬೇಕಾದಾಗ ಹಾಗೆ ಕಟ್ಟಿ ಪೈಪ್ ಅಳವಡಿಸಿದ್ದಾರೆ. ಈ ಪೈಪ್ನ ಕೆಳಭಾಗದಲ್ಲಿ ಹಗ್ಗ ಎಳೆಯಲು ಮತ್ತೊಂದು ಸಣ್ಣ ಪೈಪ್ ಫಿಕ್ಸ್ ಮಾಡಲಾಗಿದೆ. ಇದರ ನೆರವಿನಿಂದ ಸೇಬು ಹಣ್ಣನ್ನು ಕೀಳುವುದನ್ನು ಕಾಣಬಹುದು. ಮಾತ್ರವಲ್ಲದೆ ಆ ಸಾಧನವನ್ನು ಮಾಡುವುದು ಹೇಗೆ ಎಂಬುದನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Viral Video: ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ಸೈಕಲ್ ಆಟೋ ರಿಕ್ಷಾ! ವಿಡಿಯೋ ವೈರಲ್
”ನಾನು ಉತ್ಸುಕನಾಗಿದ್ದೇನೆ ಏಕೆಂದರೆ ಈ ‘ಟಿಂಕರಿಂಗ್’ ಬೆಳೆಯುತ್ತಿರುವ ಸಂಸ್ಕೃತಿಯನ್ನು ತೋರಿಸುತ್ತದೆ. ಟಿಂಕರ್‌ಗಳು ಹೊಸತನದ ಟೈಟಾನ್ಸ್ ಆಗಬಹುದು” ಎಂದು ಅವರು ಹಂಚಿಕೊಂಡ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
Not an earth-shattering invention. But I’m enthusiastic because it shows a growing culture of ‘tinkering.’ America became a powerhouse of inventiveness because of the habit of many to experiment in their basement/garage workshops. Tinkerers can become Titans of innovation. ?????? pic.twitter.com/M0GCW33nq7
— anand mahindra (@anandmahindra) June 2, 2022
ಸರಳವಾಗಿ ಹಣ್ಣು ಕೀಳುವ ಸಾಧನವನ್ನು ನೋಡಿದ ನೆಟ್ಟಿಜನ್ಸ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಆ ವಿಡಿಯೋವನ್ನು ಹಂಚಿಕೊಂಡು ಮಾಹಿತಿ ತಿಳಿಸಿದ್ದಕ್ಕಾಗಿ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾರು ಏನು ಹೇಳಿದರು ಎಂದು ಈ ಕೆಳಗಿನ ಕಮೆಂಟ್ಗಳನ್ನು ನೋಡಿ:
Waah sir ji mast jugad hai???
— Rakesh Singh (@RakeshS40346831) June 3, 2022
Simple elegant and easy to make! A solution for every farmer! Innovations like this are very exciting for a young agri- entrepreneur like me! Wonderful to see your support @anandmahindra sir!
— Mridula (@mridulasruthi) June 2, 2022
It's sp innovative .just last week while I was plucking jamun from our tree ,I asked my son that make some JUGAD to pluck fruits n see it's been done already. Kudos to d young man ??
— Kavita (@Kavita68567595) June 3, 2022
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Fri, 3 June 22