ಈ ಪರ್ವತದ ಸಿಂಹ ಯಾಕೆ ಹೀಗೆ ಪೊದೆಯ ಹಿಂದೆ ಅಡಗಿತು? ನೆಟ್ಟಿಗರಲ್ಲಿ ಉಂಟಾದ ಗೊಂದಲ

| Updated By: ಶ್ರೀದೇವಿ ಕಳಸದ

Updated on: Sep 30, 2022 | 3:45 PM

Mountain Lion : ಕಾಡುಪ್ರಾಣಿಗಳು ಮನುಷ್ಯನೊಂದಿಗೆ ಸಂಘರ್ಷಕ್ಕೆ ಇಳಿಯಲು ಬಯಸುವುದಿಲ್ಲ. ಪ್ರಚೋದಿಸಿದರೆ ಮಾತ್ರ ಬಿಡುವುದಿಲ್ಲ ಎನ್ನುತ್ತಾರೆ ಐಪಿಎಸ್ ಅಧಿಕಾರಿ ಸುಸಾಂತ ನಂದಾ, ಅದಕ್ಕೆ ಪ್ರತಿಯಾಗಿ ನೆಟ್ಟಿಗರೊಬ್ಬರ ಪ್ರತಿಕ್ರಿಯೆ ಏನಿದೆ ಓದಿ. ಹಾಗೇ ಈ ವಿಡಿಯೋ ನೋಡಿ.

ಈ ಪರ್ವತದ ಸಿಂಹ ಯಾಕೆ ಹೀಗೆ ಪೊದೆಯ ಹಿಂದೆ ಅಡಗಿತು? ನೆಟ್ಟಿಗರಲ್ಲಿ ಉಂಟಾದ ಗೊಂದಲ
ಪೊದೆಯ ಬಳಿ ಅಡಗಿಕೊಂಡಿರುವ ಮೌಂಟೇನ್ ಲಯನ್
Follow us on

Viral Video : ಸಿಂಹ ಎಂದರೆ ಯಾರಿಗೆ ಭಯವಿಲ್ಲ? ಅದು ಮನೆಯ ಅಂಗಳದಲ್ಲಿ ಬಂದರೆ ಹೇಗಿರಬೇಡ? ಈ ವಿಡಿಯೋ ಗಮನಿಸಿ.  ಮನೆಯೊಂದರ ಅಂಗಳದಲ್ಲಿ ಪರ್ವತದ ಸಿಂಹ ಓಡಾಡಿಕೊಂಡಿದೆ. ರಸ್ತೆಯಲ್ಲಿ ಒಬ್ಬ ಮಹಿಳೆ ಜಾಗಿಂಗ್ ಮಾಡಿಕೊಂಡು ಹೋಗುತ್ತಿದ್ದಾರೆ. ಅವರನ್ನು ನೋಡಿದ ಪರ್ವತದ ಸಿಂಹ ಆಕ್ರಮಣ ಮಾಡಬೇಕಿತ್ತಲ್ಲವೆ? ಬದಲಾಗಿ ಪೊದೆಯ ಹಿಂದೆ ಅಡಗಿ ಕುಳಿತಿದೆ.  ಯಾಕೆ ಹೀಗೆ ಸುಮ್ಮನೆ ಅಡಗಿ ಕುಳಿತಿದೆ? ಅಚ್ಚರಿ ಉಂಟಾಗುತ್ತಿದೆಯಾ?  ಐಪಿಎಸ್​ ಅಧಿಕಾರಿ ಸುಸಾಂತ ನಂದಾ ಗುರುವಾರ ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಇದಕ್ಕೊಂದು ಆಸಕ್ತಿಕರವಾದ ನೋಟ್ ಕೂಡ ಬರೆದಿದ್ದಾರೆ.

‘ವಿಡಿಯೋದಲ್ಲಿರುವ ಸ್ಥಳ ಯಾವುದೆಂದು ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಕಾಡುಪ್ರಾಣಿಗಳು ಮನುಷ್ಯರೊಂದಿಗಿನ ಸಂಘರ್ಷವನ್ನು ತಪ್ಪಿಸಲು ಬಯಸುತ್ತವೆ. ಅಕಸ್ಮಾತ್​ ಅವುಗಳ ಜೀವಕ್ಕೆ ಅಪಾಯವಿದೆ ಎಂಬುದು ತಿಳಿದರೆ ಮಾತ್ರ ಪ್ರತಿಕ್ರಿಯಿಸುತ್ತವೆ. ಇಲ್ಲವಾದಲ್ಲಿ ತಮ್ಮ ಪಾಡಿಗೆ ತಾವು ಸುಮ್ಮನಿರುತ್ತವೆ. ಸಂಘರ್ಷವನ್ನು ತಪ್ಪಿಸಲು ಈ ಪರ್ವತದ ಸಿಂಹ. ಜಾಗಿಂಗ್ ಮಾಡುವ ಮಹಿಳೆ ದಾಟಿ ಹೋಗುವ ತನಕ ಪೊದೆಯಲ್ಲಿ ಅಡಗಿ ಕುಳಿತಿದೆ’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

​ Wild animals will avoid conflict with humans in a majority of situations. They react only when threatened…

ಈ ವಿಡಿಯೋ ಅನ್ನು 14,000 ಕ್ಕೂ ಹೆಚ್ಚು ನೆಟ್ಟಿಗರು ನೋಡಿದ್ದಾರೆ. ಸುಮಾರು 2,000 ಜನರು ಇಷ್ಟಪಟ್ಟಿದ್ದಾರೆ. 300ಕ್ಕೂ ಹೆಚ್ಚು ಖಾತೆದಾರರು ರೀಟ್ವೀಟ್ ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ಧಾರೆ.

ನಿಮ್ಮ ಈ ನೋಟ್​ ಅನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದು. ಸಾಕಷ್ಟು ಕಾಡುಪ್ರಾಣಿಗಳು ಮನುಷ್ಯರೊಂದಿಗೆ ಘರ್ಷಣೆಗಿಳಿಯುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ ಸಿಂಹ, ಹುಲಿಗಳು  ಬೇಟೆಗಾಗಿ ಹೊಂಚುಹಾಕುತ್ತಾ ಅಡಗಿ ಕುಳಿತುಕೊಳ್ಳುತ್ತವೆ. ನಂತರ ಆಕ್ರಮಣಗೈಯಲು ಅವಕಾಶಕ್ಕಾಗಿ ಕಾಯುತ್ತವೆ.’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ದೃಶ್ಯ ಅದ್ಭುತವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ನಿಮಗೇನು ಅನ್ನಿಸಿತು ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ