Viral Video : ಬಾಂಗ್ಲಾದೇಶದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಚಾವಣಿಯನ್ನು ಈ ಮಹಿಳೆ ಹತ್ತಲು ಪ್ರಯತ್ನಿಸುತ್ತಿದ್ದಾಳೆ. ಬಹುಶಃ ಆಕೆ ರೈಲಿನಲ್ಲಿ ಸೀಟು ಪಡೆಯಲು ಸಾಧ್ಯವಾಗದಿದ್ದಾಗ ಹೀಗೆ ಮಾಡಿರುವ ಸಾಧ್ಯತೆ ಇದೆ. ಈ ಕ್ಲಿಪ್ Instagram ನಲ್ಲಿ ‘fresh_outta-stockz’ ಪುಟದಲ್ಲಿ ಪೋಸ್ಟ್ ಆಗಿದೆ. ಚಾವಣಿಮೇಲೆ ಅಷ್ಟೊಂದು ಜನ ಕುಳಿತಿರುವುದನ್ನು ನೋಡಿದರೆ ಆತಂಕವಾಗುತ್ತದೆ. ಅಂಥದ್ದರಲ್ಲಿ ಈ ಮಹಿಳೆ ಕಿಟಕಿ ಸಹಾಯದಿಂದ ಮೇಲೇರಲು ಪ್ರಯತ್ನಿಸಿರುವುದನ್ನು ನೋಡಿದರೆ… ಆದರೆ ಅವಳ ಪ್ರಯತ್ನ ವಿಫಲವಾಗುವುದು ರೈಲ್ವೆ ಪೊಲೀಸ್ ಕೋಲಿನೊಂದಿಗೆ ಬಂದಾಗ!
ನೆಟ್ಟಿಗರು ಜನಸಂಖ್ಯೆಯ ಬಗ್ಗೆ, ರೈಲಿನ ಚಾವಣಿಯ ಮೇಲೆ ಕುಳಿತಿರುವವರ ಬಗ್ಗೆ, ವ್ಯವಸ್ಥೆಯ ಬಗ್ಗೆ ಕಮೆಂಟ್ ಮೂಲಕ ಚರ್ಚಿಸಿದ್ದಾರೆ. ಎಂಥ ಅವ್ಯವಸ್ಥೆ ಅಲ್ಲವಾ ಇದೆಲ್ಲ?
ಈ ವಿಡಿಯೋ 12 ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ. 3,60,000 ಲೈಕ್ಸ್ ಪಡೆದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:55 am, Fri, 26 August 22