ರೀಲ್ಸ್ ರೀಲ್ಸ್ ರೀಲ್ಸ್… ಈಗಂತೂ ಎಲ್ಲಿ ನೋಡಿದ್ರೂ ರೀಲ್ಸ್ ವಿಡಿಯೋಗಳದ್ದೇ ಹವಾ. ಅದರಲ್ಲೂ ಕೆಲ ರೀಲ್ಸ್ ಹುಚ್ಚರು ಚಿತ್ರ ವಿಚಿತ್ರ ರೀಲ್ಸ್ ವಿಡಿಯೋ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ವಿಡಿಯೋ ಮಾಡುವ, ಪ್ರಾಣಕ್ಕೆ ಅಪಾಯ ತಂದೊಡ್ಡುವ ರೀಲ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದವರು ಹಲವರಿದ್ದಾರೆ. ಇಲ್ಲೊಬ್ಬಳು ಮಹಿಳೆ ಕೂಡಾ ಲೈಕ್ಸ್ ವೀವ್ಸ್‌ಗಾಗಿ ತೆರೆದ ಬಾವಿಯ ಅಂಚಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಡೇಂಜರಸ್ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಗುವನ್ನು ಅಪಾಯಕ್ಕೆ ತಳ್ಳಿದ ಆ ಮಹಿಳೆಯ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
RawAndRealMan ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಬರೀ ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿರುವ ದೃಶ್ಯವನ್ನು ಕಾಣಬಹುದು.
Family court in custody case: Only mother can love child more. Even more than father.
Le mother:#ParentalAlienation pic.twitter.com/mc1kl5ziFj— Raw and Real Man (@RawAndRealMan) September 18, 2024
ಇದನ್ನೂ ಓದಿ: ಬೀದಿ ಬೀದಿ ಚಿಂದಿ ಆಯುತ್ತಾ ತಿಂಗಳಿಗೆ 1.5 ಲಕ್ಷ ರೂ. ಸಂಪಾದಿಸುತ್ತಾನೆ ಈ ವ್ಯಕ್ತಿ
ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೆಕರು ಇದೆಲ್ಲಾ ಎಂಥಾ ಹುಚ್ಚಾಟ ಎಂದು ಗರಂ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ