ಅಜಂಗಢ: ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಹಿರಿಯ ಪೊಲೀಸ್ ಪೇದೆಯೊಬ್ಬರು ಊಟ ಮಾಡುತ್ತಿರುವಾಗಲೇ ಬಂದು ಊಟವನ್ನು ಅರ್ಧದಲ್ಲಿ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಅಜಂಗಢಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಹಿರಿಯ ಪೊಲೀಸ್ ಪೇದೆ ಊಟ ಮಾಡುತ್ತಿರುವುದನ್ನು ಕಾಣಬಹುದು. ಅಷ್ಟೊತ್ತಿಗಾಗಲೇ ಅಲ್ಲಿ ಬಂದ ಐಪಿಎಸ್ ಅಧಿಕಾರಿ ಊಟವನ್ನು ಅರ್ಧದಲ್ಲಿ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಹೇಳುವುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವರನ್ನು ತಿನ್ನಲು ತಡೆಯುತ್ತಿಲ್ಲ. ಪೊಲೀಸ್ ಅಧಿಕಾರಿಗೆ ಊಟ ಮಾಡಲು ಅವಕಾಶವಿದೆ ಆದರೆ ಕಾರ್ಯಕ್ರಮ ಮುಗಿದ ನಂತರ ಎಂದು ಐಪಿಎಸ್ ಅಧಿಕಾರಿ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: 75 ಮನೆಗಳಿರುವ ಈ ಸಣ್ಣ ಗ್ರಾಮ 51ಕ್ಕೂ ಹೆಚ್ಚು ಐಎಎಸ್, ಐಪಿಎಸ್ ಅಧಿಕಾರಿಗಳ ತವರೂರು
#आजमगढ़: कार्यक्रम में खाना खाने लगा सिपाही तो आईपीएस शुभम अग्रवाल ने खाना छोड़कर सिपाही को ड्यूटी पर जाने को कहा,
साहब की डांट के बाद सिपाही को प्लेट रखना पड़ा वीडियो हुआ वायरल। pic.twitter.com/aGfjKaiGVy— Faiz khan (@JournalistFaiz1) February 13, 2024
ಹಿರಿಯ ಪೊಲೀಸ್ ಕಾನ್ಸ್‌ಟೇಬಲ್ ತನ್ನ ಅಧಿಕಾರಿಯ ಆದೇಶವನ್ನು ಅನುಸರಿಸಿ ಆಹಾರವನ್ನು ಅರ್ಧದಲ್ಲಿಯೇ ಬಿಸಾಕಿ ಕೈತೊಳೆದುಕೊಂಡು ಊಟ ಮಾಡದೆ ಕರ್ತವ್ಯಕ್ಕೆ ಮರಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Wed, 14 February 24