ವೈಟ್ ರೈಸ್ಗೆ ಸೂಪರ್ ಕಾಂಬಿನೇಶನ್ ಎಂದರೆ ಅದು ಬೇಳೆ ಸಾರು. 10 ರಿಂದ 15 ನಿಮಿಷಗಳಲ್ಲಿ ತಯಾರಿಸಲಾಗುವ ಬೇಳೆ ಸಾರನ್ನು ಕಡಿಮೆ ಅಂದರೆ ವಾರದಲ್ಲಿ 2ರಿಂದ 3ಸಲವಾದರೂ ಮಾಡುವುದುಂಟು. ಹೊರಗಡೆ ಹೋಟೆಲ್ಗಳಲ್ಲಿ ಅನ್ನದೊಂದಿಗೆ ಸಿಗುವ ಈ ದಾಲ್ಗೆ 10 ರಿಂದ 20 ರೂಪಾಯಿ ಇರಬಹುದು. ಆದರೆ ಎಂದಾದರೂ 25 ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ಬೇಳೆ ಸಾರಿನ ಬಗ್ಗೆ ಕೇಳಿದ್ದೀರಾ? ದುಬೈನ ಐಷಾರಾಮಿ ರೆಸ್ಟೋರೆಂಟ್ ಒಂದರಲ್ಲಿ 1 ಕಪ್ ಬೇಳೆ ಸಾರು ಸವಿಯಲು 25 ಸಾವಿರ ರೂಪಾಯಿ ಪಾವತಿಸಬೇಕು. ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ ಗೊತ್ತಾ?
ಈ ಬೇಳೆ ಸಾರನ್ನು’24 ಕ್ಯಾರೆಟ್ ಗೋಲ್ಡ್ ದಾಲ್ ಫ್ರೈ’ ಎಂದು ಕರೆಯಲಾಗುತ್ತದೆ. ಈ ಖಾದ್ಯ ದುಬೈನಲ್ಲಿ ಸಾಕಷ್ಟು ಐಷಾರಾಮಿ ಹೋಟೆಲ್ನಲ್ಲಿ ಲಭ್ಯವಿದೆ. ಇದು ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ದಾಲ್ ಆಗಿದ್ದು, ಇದರ ವಿಶೇಷತೆ ಏನೆಂದರೆ ಮೇಲ್ಭಾಗಕ್ಕೆ ಚಿನ್ನವನ್ನು ಕರಗಿಸಿ ಸುರಿಯಲಾಗುತ್ತದೆ. ಆದ್ದರಿಂದ 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ.
ಇದನ್ನೂ ಓದಿ: ವೇಯ್ಟರ್ಗಳಿಗೆ ಬರೋಬ್ಬರಿ 20 ಲಕ್ಷ ರೂ. ಟಿಪ್ಸ್ ಕೊಟ್ಟ ವ್ಯಕ್ತಿ; ಬಿಲ್ ಫೋಟೋ ವೈರಲ್
ಈ ವೈರಲ್ ವೀಡಿಯೊವನ್ನು mr.random4090 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್ಗಳನ್ನು ಪೋಸ್ಟ್ನಲ್ಲಿ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ