AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ಬೆಲೆ ಬಾಳುವ ಕಾರುಗಳ ಒಡೆಯನಾಗಿದ್ದರೂ ಕೋಟಿಗಟ್ಟಲೇ ಸಾಲ ಹೊಂದಿರುವ ಬಳ್ಳಾರಿ ಬಿಜೆ‍ಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ

G Somashekara Reddy Assets Details: ಸೋಮಶೇಖರ ರೆಡ್ಡಿ ಹೆಸರಲ್ಲಿ 30.01 ಕೋಟಿ ರೂ ಸಾಲ ಇದೆ. ಅವರ ಪತ್ನಿಯ ಹೆಸರಲ್ಲಿ 3.32 ಕೋಟಿ ರೂ. ಸಾಲವಿದೆ.

ದುಬಾರಿ ಬೆಲೆ ಬಾಳುವ ಕಾರುಗಳ ಒಡೆಯನಾಗಿದ್ದರೂ ಕೋಟಿಗಟ್ಟಲೇ ಸಾಲ ಹೊಂದಿರುವ ಬಳ್ಳಾರಿ ಬಿಜೆ‍ಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ
ಜಿ. ಸೋಮಶೇಖರ್ ರೆಡ್ಡಿ
ಆಯೇಷಾ ಬಾನು
|

Updated on:Apr 16, 2023 | 11:40 AM

Share

ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಜಿ. ಸೋಮಶೇಖರ್ ರೆಡ್ಡಿ( G Somashekara Reddy) ಅವರು ಶನಿವಾರ(ಏಪ್ರಿಲ್ 15) ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಾಮಪತ್ರದಲ್ಲಿ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದು ಕೋಟ್ಯಾಧಿಪತಿ ಸೋಮಶೇಖರ್ ರೆಡ್ಡಿ ಅವರು ಕೋಟಿಗಟ್ಟಲೇ ಸಾಲ ಹೊಂದಿದ್ದಾರೆ.

ಸೋಮಶೇಖರ್ ರೆಡ್ಡಿ ಹೆಸರಿನಲ್ಲಿದೆ 16,16,94,374 ಮೌಲ್ಯದ ಸ್ಥಿರಾಸ್ತಿ. ಹಾಗೂ ಪತ್ನಿ ವಿಜಯಮ್ಮ ಹೆಸರಿನಲ್ಲಿದೆ 1,06,80,425 ಮೌಲ್ಯದ ಸ್ಥಿರಾಸ್ತಿ. ಹಿರಿಯ ಪುತ್ರ ಜಿ.ರಾಜಸಂದೀಪ ರೆಡ್ಡಿ ಹೆಸರಲ್ಲಿ 1,98,60,054 ಸ್ಥಿರಾಸ್ತಿ ಇದೆ. ಎರಡನೇ ಮಗ ಜಿ.ಶ್ರವಣ್‌ ಕುಮಾರ್ ರೆಡ್ಡಿ ಹೆಸರಿನಲ್ಲಿರುವ ಸ್ಥಿರಾಸ್ತಿ 2,72,05,405 ರೂ. ಇದೆ.

ಸೋಮಶೇಖರ ರೆಡ್ಡಿ ಹೆಸರಿನಲ್ಲಿ ಒಟ್ಟು ಚರಾಸ್ತಿ 30.90 ಕೋಟಿ ರೂಪಾಯಿ ಇದೆ. ಪತ್ನಿ ಹೆಸರಿನಲ್ಲಿ 10.95 ಕೋಟಿ ರೂ, ಮೊದಲ ಮಗನ ಹೆಸರಿನಲ್ಲಿ 95 ಲಕ್ಷ ರೂ, ಎರಡನೇ ಮನಗ ಹೆಸರಿನಲ್ಲಿ 75 ಲಕ್ಷ ರೂ. ಇದೆ.

ಸೋಮಶೇಖರ್ ರೆಡ್ಡಿ ಹೆಸರಲ್ಲಿದೆ ಕೋಟಿಗಟ್ಟಲೇ ಸಾಲ

ಸೋಮಶೇಖರ ರೆಡ್ಡಿ ಹೆಸರಲ್ಲಿ 30.01 ಕೋಟಿ ರೂ ಸಾಲ ಇದೆ. ಅವರ ಪತ್ನಿಯ ಹೆಸರಲ್ಲಿ 3.32 ಕೋಟಿ ರೂ. ಸಾಲವಿದೆ. ಮೊದಲ ಮಗನ ಹೆಸರಿನಲ್ಲಿ 2.19 ಕೋಟಿ ರೂ. ಹಾಗೂ ಎರಡನೇ ಮಗನ ಹೆಸರಿನಲ್ಲಿ 1.95 ಕೋಟಿ ರೂ. ಸಾಲ ಇದೆ.

ಸೋಮಶೇಖರ ರೆಡ್ಡಿ ಅವರು 5.68 ಲಕ್ಷ ರೂ ನಗದು ಹೊಂದಿದ್ದು, ಪತ್ನಿ ವಿಜಯಮ್ಮ 3.14 ಲಕ್ಷ ರೂ. ಮಗ ರಾಜ ಸಂದೀಪ ರೆಡ್ಡಿ ಬಳಿ 92,971 ರೂ., ಎರಡನೇ ಮಗ ಶ್ರವಣ್‌ಕುಮಾರ್ ಬಳಿ 72,500 ರೂ. ಇದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Karnataka Assembly Election: ರೆಡ್ಡಿಗೆ ನುಂಗಲಾರದ ತುತ್ತಾಯಿತು ಗಂಗಾವತಿ ಕ್ಷೇತ್ರ; ಕಾಂಗ್ರೆಸ್ ಅಭ್ಯರ್ಥಿ ಎದುರು ಮಂಕಾದ್ರಾ ಗಣಿಧಣಿ?

ಇನ್ನು ಸೋಮಶೇಖರ ರೆಡ್ಡಿ ಬಳಿ 1.45 ಕೋಟಿ ರೂ. ಮೌಲ್ಯದ 2 ಕೆಜಿ 558 ಗ್ರಾಂ ಚಿನ್ನಾಭರಣ, 13.77 ಲಕ್ಷ ರೂ. ಮೌಲ್ಯದ 17 ಕೆ.ಜಿ, 218 ಗ್ರಾಂ ಬೆಳ್ಳಿ ಆಭರಣಗಳಿವೆ. ಇನ್ನೂ ಅವರ ಪತ್ನಿ ಬಳಿ 1 ಕೋಟಿ ರೂ. ಮೌಲ್ಯದ 1 ಕೆ.ಜಿ 756 ಗ್ರಾಂ ಚಿನ್ನಾಭರಣ, ಇಬ್ಬರು ಮಕ್ಕಳ ಬಳಿ ತಲಾ 6.83 ಲಕ್ಷ ರೂ.120 ಗ್ರಾಂ ಚಿನ್ನಾಭರಣ ಇದೆ.

ಸೋಮಶೇಖರ ರೆಡ್ಡಿ ದುಬಾರಿ ಬೆಲೆಬಾಳುವ ಕಾರುಗಳ ಒಡೆಯ

ಸೋಮಶೇಖರ ರೆಡ್ಡಿ ಅವರ ಬಳಿ ದುಬಾರಿ ಬೆಲೆಬಾಳುವ ಕಾರುಗಳಿವೆ. 18.75 ಲಕ್ಷ ರೂ. ಮೌಲ್ಯದ ಟಯೋಟ ಇನೋವಾ ಕಾರು, 21.17 ಲಕ್ಷ ರೂ. ಮೌಲ್ಯದ ಕಿಯಾ ಕಾರು, 37.73 ಲಕ್ಷ ರೂ. ಮೌಲ್ಯದ ಟಯೋಟ ಫಾರ್ಚೂನರ್ ಕಾರು, 1.03 ಕೋಟಿ ರೂ. ವೋಲ್ವೋ ಕಾರು ಇದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:40 am, Sun, 16 April 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್