ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲ: ನಳಿನ್ ಕುಮಾರ್ ಕಟೀಲ್
ಪಕ್ಷದ ಹಿರಿಯ ನಾಯಕರು ಜಗದೀಶ್ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಅವರಿಗೆ ಎಲ್ಲ ಗೌರವ ಪಕ್ಷ ಕೊಟ್ಟಿತ್ತು. ಎಲ್ಲ ಜವಾಬ್ದಾರಿಗಳನ್ನೂ ಕೊಟ್ಟಿತ್ತು. ಶೆಟ್ಟರ್ ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಗೆ (BJP) ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರುತ್ತಾರೆ ಎಂಬ ವಂದತಿಗಳು ಕೇಳಿಬರುತ್ತಿವೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ ಪಕ್ಷದ ಹಿರಿಯ ನಾಯಕರು ಜಗದೀಶ್ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಅವರಿಗೆ ಎಲ್ಲ ಗೌರವ ಪಕ್ಷ ಕೊಟ್ಟಿತ್ತು. ಎಲ್ಲ ಜವಾಬ್ದಾರಿಗಳನ್ನೂ ಕೊಟ್ಟಿತ್ತು. ಶೆಟ್ಟರ್ ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲ. ಅವರು ನಮ್ಮಲ್ಲೇ ಉಳಿದುಕೊಳ್ಳುತ್ತಾರೆ ಅಂತ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಮ್ಮಲ್ಲಿ ಸಮುದಾಯದ ಪ್ರಶ್ನೆ ಬರಲ್ಲ. ಎಲ್ಲ ಸಮುದಾಯ ಗುರುತಿಸಿ ಟಿಕೆಟ್ ಕೊಡಲಾಗಿದೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯದಡಿ ಸ್ಥಾನಮಾನ ಕೊಡಲಾಗಿದೆ. ಲಿಂಗಾಯತರನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದ್ದು ನಮ್ಮ ಪಕ್ಷ ಮಾತ್ರ ಎಂದು ಹೇಳಿದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದ್ರೆ ಶಕ್ತಿ ಬರುತ್ತೆ; ಕಾಂಗ್ರೆಸ್ಗೆ ಬರುವಂತೆ ಆಹ್ವಾನ ಕೊಟ್ಟ ಹರಿಪ್ರಸಾದ್
ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೈತಪ್ಪಲು ಕಾರಣವೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಜಗದೀಶ್ ಶೆಟ್ಟರ್ ಮುಂದುವರೆಸಿಕೊಂಡು ಹೋದರೇ ಚೆನ್ನಾಗಿ ಇರುತ್ತಿತ್ತು. ನಮ್ಮ ಚುನಾವಣೆ ತಂತ್ರ ರೂಪಿಸುತ್ತವೆ. ಪಕ್ಷ ಗೆಲ್ಲತ್ತೆ. ಬದಲಾವಣೆ ತರುವಂತಹ ಕಾಲ ಇದು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿದೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು. ಆದ್ರೆ, ಟಿಕೆಟ್ ನಿರಾಕರಿಸಿರುವುದು ಮೇಲಿನ ತೀರ್ಮಾನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Sun, 16 April 23