ಸಾಮಾನ್ಯವಾಗಿ ಪರೋಟವನ್ನು ಮೊಟ್ಟೆ , ಅಲೂಗಡ್ಡೆ, ಪನ್ನೀರ್ ಮಿಶ್ರಣದೊಂದಿಗೆ ತಯಾರಿಸಲಾಗುತ್ತದೆ. ಆದರೆ ಇಲ್ಲೊಬ್ಬರು ಪರೋಟ ಹಿಟ್ಟಿನೊಳಗೆ 500 ರೂ. ನೋಟನ್ನು ಇಟ್ಟು ಪರೋಟ ತಯಾರಿಸಿದ್ದಾರೆ. ಈ ವಿಡಿಯೋ ಇದೀಗಾ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಜಾನು ಖಾನ್ ಎಂಬ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಮಹಿಳೆಯೊಬ್ಬರು ಪರೋಟ ಹಿಟ್ಟಿನೊಳಗೆ 500 ರೂ. ನೋಟನ್ನು ಇಟ್ಟಿರುವುದು ಕಾಣಬಹುದು.
ಪರೋಟವನ್ನು ವೃತ್ತಾಕಾರದಲ್ಲಿ ತಟ್ಟಿ ಬೇಯಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ. ನಂತರ ಪರೋಟದ ಮೇಲೆ ಎಣ್ಣೆ ಸವರುವುದನ್ನು ಕಾಣಬಹುದು. ನಂತರ ಮಹಿಳೆ ಪರೋಟವನ್ನು ತೆರೆದು 500 ರೂಪಾಯಿಯ ಬದಲಿಗೆ 2000 ರೂಪಾಯಿ ನೋಟನ್ನು ತೆಗೆಯುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ನಕಲಿ ಅನಾರೋಗ್ಯ ರಜೆಗಳಿಗೆ ಬ್ರೇಕ್; ಈಗ ನಿಮ್ಮ ಧ್ವನಿಯಿಂದ ನಿಮಗೆ ಶೀತವಿದೆಯೇ ಎಂದು ಕೃತಕ ಬುದ್ಧಿಮತ್ತೆ ಕಂಡುಹಿಡಿಯಬಹುದು!
ಈ ವೈರಲ್ ವಿಡಿಯೋ ಇದೀಗಾಗಲೇ 4.7 ಮಿಲಿಯನ್ ವೀಕ್ಷಣೆ ಕಂಡಿದೆ. ಪರೋಟ ಮಾಡುವ ಈ ವಿಧಾನವನ್ನು ನೋಡಿದ ನಂತರ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ. ಈ ವಿಡಿಯೋವನ್ನು ಎಡಿಟ್ ಮಾಡಿರುವುದು ಕಂಡುಬರುತ್ತಿದೆ. ವಿಡಿಯೋ ವೀಕ್ಷಿಸಿದ ಬಳಕೆದಾರರೊಬ್ಬರು ದಯವಿಟ್ಟು ಲಕ್ಷ್ಮಿ ದೇವಿಗೆ ಈ ರೀತಿ ಅವಮಾನ ಮಾಡಬೇಡಿ. ಹಣವನ್ನು ಗೌರವದಿಂದ ಕಾಣಿರಿ ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: