Viral Video: ಐದು ಜನ ಒಟ್ಟಿಗೆ ಪ್ರಯಾಣಿಸಬಹುದಾದ ಈ ಸೈಕಲ್​​ ಹೇಗಿದೆ ನೋಡಿ

|

Updated on: Mar 22, 2024 | 3:57 PM

ವೀಡಿಯೊದಲ್ಲಿ ಯುವಕನೊಬ್ಬ ವಿಶಿಷ್ಟವಾದ ಉದ್ದನೆಯ ಐದು ಆಸನಗಳ ಸೈಕಲನ್ನು ತಯಾರಿಸಿರುವುದನ್ನು ಕಾಣಬಹುದು. ಕಬ್ಬಿಣದ ರಾಡ್ ಸಹಾಯದಿಂದ ಈ ಸೈಕಲ್ ತಯಾರಿಸಲಾಗಿದೆ. ವಿಶಿಷ್ಟ ವಿನ್ಯಾಸ ಸೈಕಲನ್​​​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಐದು ಜನ ಒಟ್ಟಿಗೆ ಪ್ರಯಾಣಿಸಬಹುದಾದ ಈ ಸೈಕಲ್​​ ಹೇಗಿದೆ ನೋಡಿ
5 Seater Cycle
Image Credit source: instagram
Follow us on

ಸಾಮಾನ್ಯವಾಗಿ ನೀವು ಇಬ್ಬರು ಕುಳಿತುಕೊಂಡು ಹೋಗುವ ಸೈಕಲ್​​ ಅನ್ನು ನೋಡಿರುತ್ತೀರಿ. ಆದರೆ ಎಂದಾದರೂ 5ಜನ ಒಟ್ಟಿಗೆ ಪ್ರಯಾಣಿಸಬಹುದಾದ ಸೈಕಲ್​​ ಅನ್ನು ಎಂದಾದರೂ ನೋಡಿದ್ದೀರಾ? ಇದೀಗ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೈಕಲ್​ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಇದನ್ನು ನೋಡಿದರೆ ಇದು ಸೈಕಲ್ಲೋ ಅಥವಾ ರೈಲೋ? ಅಂತ ನಿಮಗೆ ಡೌಟ್​​ ಬರುವುದಂತೂ ಖಂಡಿತಾ.

ವೀಡಿಯೊದಲ್ಲಿ ಯುವಕನೊಬ್ಬ ವಿಶಿಷ್ಟವಾದ ಉದ್ದನೆಯ ಐದು ಆಸನಗಳ ಸೈಕಲನ್ನು ತಯಾರಿಸಿರುವುದನ್ನು ಕಾಣಬಹುದು. ಕಬ್ಬಿಣದ ರಾಡ್ ಸಹಾಯದಿಂದ ಈ ಸೈಕಲ್ ತಯಾರಿಸಲಾಗಿದ್ದು, ಇದು ಮೂರು ದೊಡ್ಡ ಆಸನಗಳು, ಒಂದು ಸಣ್ಣ ಆಸನ, ಒಂದು ಆಸನ ಕುರ್ಚಿಯ ರೀತಿಯ ಆಸನವನ್ನು ತಯಾರಿಸಲಾಗಿದೆ. ಸದ್ಯ ಈ ವಿಶಿಷ್ಟ ವಿನ್ಯಾಸ ಸೈಕಲನ್​​​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಹರಿದು ಸಾವು

ಈ ವೀಡಿಯೊವನ್ನು @bapu_zamidar_short ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನೇಕ ನೆಟ್ಟಿಗರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. “ಹಿಂಭಾಗದಲ್ಲಿ ಇನ್ನೊಂದು ಆಸನವನ್ನು ಇರಿಸಿ” ಎಂದು ಹಾಸ್ಯಸ್ಪದವಾಗಿ ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ