Video Viral: ಮೊಸಳೆಗಳಿಂದ ತುಂಬಿರುವ ಕೊಳಕ್ಕೆ ಹಾರಿದ ಪುಟ್ಟ ಬಾಲಕ; ವಿಡಿಯೋ ಇಲ್ಲಿದೆ ನೋಡಿ
ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆಗಳಿಂದ ತುಂಬಿದ ಕೊಳವನ್ನು ಕಾಣಬಹುದು. ಪುಟ್ಟ ಬಾಲಕ ಬಂದು ಏನನ್ನೂ ಯೋಚಿಸದೆ ಕೊಳಕ್ಕೆ ಹಾರಿ ಮೊಸಳೆ ಮರಿಗಳ ನಡುವೆ ಈಜುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಬಾಲಕನಿಗೆ ಕಿಂಚಿತ್ತೂ ಭಯವಾಗುತ್ತಿಲ್ಲ.
ಮೊಸಳೆಗಳೇ ತುಂಬಿರುವ ಕೊಳಕ್ಕೆ ಪುಟ್ಟ ಬಾಲಕನೊಬ್ಬ ಹಾರಿ, ಮೊಸಳೆಗಳೊಂದಿಗೆ ಆರಾಮವಾಗಿ ಈಜುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಾಕ್ಷಣ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟುವುದಂತೂ ಖಂಡಿತಾ. ಮೊಸಳೆಯನ್ನು ನೀರಿನ ಅತ್ಯಂತ ಅಪಾಯಕಾರಿ ಜೀವಿ ಎಂದು ಪರಿಗಣಿಸಲಾಗಿದೆ. ಸಿಂಹವೂ ಕೂಡ ಮೊಸಳೆಯನ್ನು ಕಂಡರೆ ಹೆದರುತ್ತದೆ. ಏಕೆಂದರೆ ಅದು ಒಂದು ಬಾರಿ ಕಚ್ಚಿ ಹಿಡಿದರೆ ಅದರ ಹಿಡಿತದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಆದರೆ ಈ ಪುಟ್ಟ ಬಾಲಕನ ಧೈರ್ಯ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆಗಳಿಂದ ತುಂಬಿದ ಕೊಳವನ್ನು ಕಾಣಬಹುದು. ಪುಟ್ಟ ಬಾಲಕ ಬಂದು ಏನನ್ನೂ ಯೋಚಿಸದೆ ಕೊಳಕ್ಕೆ ಹಾರಿ ಮೊಸಳೆ ಮರಿಗಳ ನಡುವೆ ಈಜುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಬಾಲಕನಿಗೆ ಕಿಂಚಿತ್ತೂ ಭಯವಾಗುತ್ತಿಲ್ಲ ಮತ್ತು ಅವನು ಸಂತೋಷದಿಂದ ಈಜುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
खतरों के खिलाड़ी…..
बहुत भयानक pic.twitter.com/Jfo7sUWJTw
— Puran मेवाड़ी (@purankumawat76) May 21, 2024
ಇದನ್ನೂ ಓದಿ: ಮದುವೆ ದಿನ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿದ ಯುವತಿ ಸಾವು; ಏನಿದು ಸರ್ಜರಿ?
ಈ ವೀಡಿಯೊವನ್ನು @purrankumawat76 ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೇ 21ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಎರಡು ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಕಂಡು ಸಾಕಷ್ಟು ನೆಟ್ಟಿಗರು ಬಾಲಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ