ದೇಶಾದ್ಯಂತ ಕೊವಿಡ್19 ವ್ಯಾಪಕವಾಗಿ ಹರಡುತ್ತಿದೆ. ಹಳ್ಳಿಗಳಲ್ಲಿ ಯಾರಿಗೆ ನೋಡಿದರೂ ಜ್ವರ, ನೆಗಡಿ, ಕೆಮ್ಮು. ಹೀಗಿರುವಾಗ ಜನರು ನೀರಿನ ಶಾಖ ತೆಗೆದುಕೊಳ್ಳುವುದು ಅಥವಾ ಸ್ಟೀಮ್ ತೆಗೆದುಕೊಳ್ಳುವುದರ ಮೂಲಕ ಕೊಂಚ ಆರಾಮ ಪಡೆಯುತ್ತಿದ್ದಾರೆ. ನಾವೆಲ್ಲ ಅಂಗಡಿಗಳಲ್ಲಿ ಸಿಗುವ ಸ್ಟೀಮ್ ಪಾತ್ರೆಗಳಲ್ಲಿ ಶಾಖ ತೆಗೆದುಕೊಳ್ಳುತ್ತೇವೆ. ಇಲ್ಲವೇ ಸ್ಟೀಲ್ ಪಾತ್ರೆಯಲ್ಲಿ ನೀರು ಕಾಯಿಸಿ ಸ್ಟೀಮ್ ತೆಗೆದುಕೊಳ್ಳುತ್ತೇವೆ. ಆದರೆ ಇಲ್ಲೋರ್ವರು ಕುಕ್ಕರ್ನಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ. ದೇಸೀ ಶೈಲಿಯಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಿರುವ ವಿಧಾನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯಾವ ವಿಡಿಯೋ ಯಾವಾಗ ಹೇಗೆ ವೈರಲ್ ಆಗುತ್ತೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಸಮಸ್ಯೆಗಳಿಂದ ಹೊರಬರಲು ಜನರು ಒಂದೆಲ್ಲಾ ಒಂದು ಪರಿಹಾರ ಕ್ರಮವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವೊಂದಿಷ್ಟು ಪ್ರಯೋನಕಾರಿಯಾಗಿದ್ದರೆ ಇನ್ನೊಂದಿಷ್ಟು ತಮಾಷೆಯಾಗಿಬಿಡುತ್ತದೆ.
ನೀರಿನ ಉಗಿಯನ್ನು ತೆಗೆದುಕೊಳ್ಳುವುದು ಮೊದಲಿನಿಂದಲೂ ರೂಢಿಯಲ್ಲಿರುವಂಥದ್ದು. ಮೊದಲೆಲ್ಲಾ ಶೀತ ಅಥವಾ ತಲೆಭಾರ ಎನಿಸಿದರೆ ಸ್ಟೀಮ್ ತೆಗುಕೊಳ್ಳುತ್ತಿದ್ದೆವು. ಮೂಗು ಕಟ್ಟುವಿಕೆ, ತಲೆಭಾರದಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಕಾರಿಯಾಗಿತ್ತು. ಆದರೆ ಇದೀಗ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ರೋಗದ ಲಕ್ಷಣವಾದ ಜ್ವರ, ನೆಗಡಿಯಂತಹ ಸಮಸ್ಯೆಗಳು ಕಾಡತೊಡಗಿದವು. ಹೀರುವಾಗಿ ಮನೆಯಲ್ಲಿಯೇ ಗಿಡಮೂಲಕೆಗಳನ್ನು ಬಳಸಿ ಕಷಾಯ ಜತೆಗೆ ಸ್ಟೀಮ್ ತೆಗೆದುಕೊಳ್ಳುವುದರ ಮೂಲಕ ಜನರು ಕೊಂಚ ಆರಾಮ ಪಡೆಯುತ್ತಿದ್ದಾರೆ.
ವ್ಯಕ್ತಿ ಕುಕ್ಕರ್ ಬಳಸಿ ಹೇಗೆ ಸ್ಟೀಮ್ ತೆಗೆದುಕೊಳ್ಳುತ್ತಾನೆ ಎಂಬುದನ್ನು ವಿಡಿಯೋ ತೋರಿಸುತ್ತದೆ. ಕುಕ್ಕರ್ ಶಿಳ್ಳೆಯ ಬದಲಿಗೆ ಉದ್ದನೇಯ ಪೈಪ್ಅನ್ನು ಜೋಡಿಸುತ್ತಾರೆ. ಪೈಪ್ನ ತುದಿಯಲ್ಲಿ ಕೊಳವೆಯೊಂದನ್ನು ಜೋಡಿಸಿದ್ದಾರೆ. ಕುಕ್ಕರ್ ಪಾತ್ರೆಯಲ್ಲಿ ನೀರು ಹಾಕ್ಕಿ ಕಾಯಿಸಲು ಇಟ್ಟಿದ್ದಾನೆ. ನೀರು ಕಾದಂತೆಯೇ ಪೈಪ್ ಮೂಲಕ ನೀರಿನ ಉಗಿ ಬರುತ್ತಿದೆ. ನಿಂತಲ್ಲಿಯೇ ವ್ಯಕ್ತಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಪತಿ ಅಭಿಷೇಕ್ ಎದುರಲ್ಲೇ ಐಶ್ವರ್ಯಾ ರೈಗೆ ಅಪರಿಚಿತ ವ್ಯಕ್ತಿಯ ಮದುವೆ ಪ್ರಪೋಸ್; ವಿಡಿಯೋ ವೈರಲ್
Viral Video: ಈ ನಾಯಿ ನಿಜವಾಗಿಯೂ ಯೋಗಾಸನ ಮಾಡುತ್ತಿದೆ! ವಿಡಿಯೋ ಆಯ್ತು ವೈರಲ್