Viral Video: ವಿಮಾನ ವಿಳಂಬ; ಕೋಪಗೊಂಡು ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ

ದಟ್ಟ ಮಂಜಿನ ಹಿನ್ನೆಲೆ ವಿಮಾನಗಳ ಹಾರಾಟ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದ ಕ್ಯಾಪ್ಟನ್​ ಮೇಲೆ ಕೋಪಗೊಂಡ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೈಲೆಟ್​ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ.

Viral Video: ವಿಮಾನ ವಿಳಂಬ; ಕೋಪಗೊಂಡು ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ
Indigo Passenger Attacks pilot

Updated on: Jan 16, 2024 | 12:39 PM

ದೆಹಲಿ, ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಹಿನ್ನೆಲೆ 100 ವಿಮಾನಗಳ ಹಾರಾಟ ಹಲವೆಡೆ ವಿಳಂಬವಾಗುತ್ತಿದೆ. ತೀವ್ರ ಚಳಿಯಿಂದಾಗಿ ಗೋಚರತೆ ಅಸ್ಪಷ್ಟವಾಗಿದ್ದಕ್ಕೆ, ವಿಮಾನ ಸಂಚಾರ ವಿಳಂಬದ ಬಗ್ಗೆ ಘೋಷಣೆ ಮಾಡುತ್ತಿದ್ದ ಕ್ಯಾಪ್ಟನ್​ ಮೇಲೆ ಕೋಪಗೊಂಡ ಪ್ರಯಾಣಿಕ ಹಲ್ಲೆ ನಡೆಸಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಭಾನುವಾರ ಸಂಜೆ 7 ಗಂಟೆಗೆ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ (6ಇ 2175) ಈ ಘಟನೆ ನಡೆದಿದೆ. ಪೈಲೆಟ್​​​​ ಘೋಷಣೆ ಮಾಡುತ್ತಿದ್ದಂತೆ ಕೋಪಗೊಂಡ ಪ್ರಯಾಣಿಕ ಪೈಲೆಟ್​ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ.

ಪೈಲಟ್ ಮೇಲೆ ಹಲ್ಲೆ ನಡೆಸಿರುವ ಪ್ರಯಾಣಿಕನನ್ನು ಸಾಹಿಲ್ ಕತ್ರಿಯಾ ಎಂದು ಗುರುತಿಸಲಾಗಿದ್ದು, ಈತ ಪೈಲಟ್ ಅನೂಪ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಇಂಡಿಗೋ ವಿಮಾನದ ಸಹ ಪೈಲಟ್ ಅನುಪ್ ಕುಮಾರ್ ಅವರ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 323, 341, 290 ಮತ್ತು ಸೆಕ್ಷನ್ 22 ಏರ್ ಕ್ರಾಫ್ಟ್ ರೂಲ್ಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ವಿಮಾನ ಅಪಘಾತ, ಸ್ನೇಹಿತನ ಮೃತದೇಹ ತಿಂದು ಬದುಕುಳಿದ ವ್ಯಕ್ತಿ ಹೇಳಿದ ಕಥೆ

ಉತ್ತರ ಭಾರತದ ಹಲವೆಡೆ ಮಂಜಿನ ವಾತಾವರಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.ಇದರಿಂದಾಗಿ ಹಲವು ವಿಮಾನಗಳು ತಡವಾಗಿ ಸಂಚರಿಸುತ್ತಿದ್ದು, ಕೆಲವು ವಿಮಾನಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಇದುವರೆಗೆ 100 ವಿಮಾನಗಳು ವಿಳಂಬವಾಗಿದ್ದು, 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:25 am, Tue, 16 January 24