AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಮೊಟ್ಟೆಯೆಂದು ಭಾವಿಸಿ ಏರ್ಪೋಡ್ ಚಾರ್ಜಿಂಗ್ ಕೇಸ್​ಗೆ ಕಾವು ಕೊಟ್ಟ ಕೋಳಿ

ಈ ಪ್ರಾಣಿ ಮತ್ತು ಪಕ್ಷಿಗಳು ಎಷ್ಟು ಮುಗ್ಧ ಜೀವಿಗಳಲ್ವಾ. ಇವುಗಳ ಮುಗ್ಧತೆಯ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಕೆಲವೊಂದು ತಮಾಷೆಯಾಗಿದ್ರೆ, ಕೆಲವೊಂದು ವಿಡಿಯೋಗಳು ಭಾವನಾತ್ಮಕವಾಗಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಮುಗ್ದ ಕೋಳಿಯೊಂದು ಇದು ತನ್ನ ಮೊಟ್ಟೆಯೇ ಇರಬಹುದೆಂದು ಭಾವಿಸಿ ಏರ್ ಪೋಡ್ ಚಾರ್ಜಿಂಗ್ ಕೇಸ್ಗೆ ಕಾವು ಕೊಟ್ಟಿದೆ.

Viral Video: ತನ್ನ ಮೊಟ್ಟೆಯೆಂದು ಭಾವಿಸಿ ಏರ್ಪೋಡ್ ಚಾರ್ಜಿಂಗ್ ಕೇಸ್​ಗೆ ಕಾವು ಕೊಟ್ಟ ಕೋಳಿ
ತನ್ನ ಮೊಟ್ಟೆಯೆಂದು ಭಾವಿಸಿ ಏರ್ಪೋಡ್ ಚಾರ್ಜಿಂಗ್ ಕೇಸ್​ಗೆ ಕಾವು ಕೊಟ್ಟ ಕೋಳಿ
ಮಾಲಾಶ್ರೀ ಅಂಚನ್​
| Edited By: Rakesh Nayak Manchi|

Updated on: Jan 15, 2024 | 7:04 PM

Share

ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ಹಾಸ್ಯಮ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲೂ ಪಕ್ಷಿ ಮತ್ತು ಪ್ರಾಣಿ ಸಾಮ್ರಾಜ್ಯದ ಕುರಿತ ತಮಾಷೆಯ ವಿಡಿಯೋಗಳು ಹೆಚ್ಚು ಮನರಂಜನಾತ್ಮಕವಾಗಿರುತ್ತವೆ. ಈಗ ಅದೇ ರೀತಿಯ ಫನ್ನಿ ವಿಡಿಯೋವೊಂದು ಹರಿದಾಡುತ್ತಿದ್ದು, ಅರೇ ಈ ಕೋಳಿ ಇದ್ಯಾಕೆ ತನ್ನ ಗೂಡನ್ನು ಬಿಟ್ಟು ಮಂಚದ ಮೇಲೆ ಕುಳಿತು ಮೊಟ್ಟೆಗಳಿಗೆ ಕಾವು ಕೊಡುತ್ತಿದೆ ಎಂದು ನೋಡಲು ಹೋದ್ರೆ, ಆ ಕೋಳಿ ಬಿಳಿ ಬಣ್ಣದ ಏರ್ಪೋಡ್ ಚಾರ್ಜಿಂಗ್ ಕೇಸ್​ಗೆ ಕಾವು ಕೊಡೋದಾ? ಈ ವೈರಲ್ ವಿಡಿಯೋವನ್ನು (Viral Video) ನೋಡಿ ಹಲವರು ಇದು ತುಂಬಾ ತಮಾಷೆಯಾಗಿದೆ ಎಂದು ಹೇಳಿದ್ರೆ, ಇನ್ನೂ ಕೆಲವರು ತಾಯಿ ಮನಸ್ಸು ಅಂದ್ರೆ ಇದೇ ಅಲ್ವಾ ಅಂತ ಹೇಳಿದ್ದಾರೆ.

ಈ ವಿಡಿಯೋವನ್ನು @gaayapadina_manasu3 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಕೋಳಿಯೊಂದು ಏರ್ ಪೋಡ್ ಚಾರ್ಜಿಂಗ್ ಕೇಸ್ಗೆ ಕಾವು ಕೊಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಒಬ್ಬ ಯುವಕ ತನ್ನ ಮನೆಯಲ್ಲಿ ಮಂಚದ ಮೇಲೆ ಬಿಳಿ ಬಣ್ಣದ ಏರ್ಪೋಡ್ ಚಾರ್ಜಿಂಗ್ ಕೇಸ್ ಅನ್ನು ಇಟ್ಟಿರುತ್ತಾನೆ. ಇದನ್ನು ನೋಡಿದಂತಹ ಕೋಳಿಯೊಂದು ಇದು ನನ್ನ ಮೊಟ್ಟೆಯೇ ಇರಬೇಕೆಂದು ಭಾವಿಸಿ, ಕಾವು ಕೊಡುತ್ತಾ ಕುಳಿತಿರುತ್ತೆ, ಆ ಯುವಕ ಬರುತ್ತಿದ್ದಂತೆಯೇ ಆ ಕೋಳಿ ಅಲ್ಲಿಂದ ಎದ್ದು ಹೋಗುವ ತಮಾಷೆಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: Viral Video: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ನೀರಿನ ಟ್ಯಾಪ್

ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 25.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 6 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದ್ರಲ್ಲಿ ತಮಾಷೆಯೇನಿದೆ, ಪಾಪ ಮುಗ್ಧ ಜೀವಿಗೆ ಏನ್ ಗೊತ್ತಾಗ್ಬೇಕು ಇದೆಲ್ಲʼ ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು ʼಆ ಕೋಳಿಗೆ ಮೊಟ್ಟೆಯಂತೆ ಇನ್ನಷ್ಟು ಏರ್ಪೋಡ್ ಗಳನ್ನು ಇಡಲು ಹೇಳಿ, ನಾನು ಅದನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತೇನೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಏರ್ ಪೋಡ್ ಅಲ್ಲ ಎಗ್ ಪೋಡ್ʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ತುಂಬಾ ತಮಾಷೆಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು  ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!