AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯಯ್ಯೋ.. ಟಿವಿಯಲ್ಲಿ ರೊಮ್ಯಾಂಟಿಕ್ ದೃಶ್ಯ ಕಂಡು ನಾಚಿಕೆಯಿಂದ ಕಣ್ಣು ಮುಚ್ಚಿದ ಶ್ವಾನ

ಸಾಮಾನ್ಯವಾಗಿ ಟಿವಿಯಲ್ಲಿ ಸಿನೆಮಾ ಅಥವಾ ಧಾರಾವಾಹಿ ನೋಡುತ್ತಿರುವಾಗ ಅದ್ರಲ್ಲಿ ರೊಮ್ಯಾಂಟಿಕ್ ದೃಶ್ಯ ಏನಾದ್ರೂ ಬಂದ್ರೆ, ಅದನ್ನು ನೋಡಿದಾಗ ಮನುಷ್ಯರಾದ ನಮಗೆಯೇ ಸ್ವಲ್ವ ಮುಜುಗರ ಮತ್ತು ನಾಚಿಕೆಯಾಗುತ್ತೆ. ಆದರೆ, ಇದರಿಂದ ಪ್ರಾಣಿಗಳು ಕೂಡ ಹೊರತಾಗಿಲ್ಲ ಮುದ್ದಿನ ನಾಯಿಯೇ ಸಾಕ್ಷಿ. ರೊಮ್ಯಾಂಟಿಕ್ ದೃಶ್ಯ ಪ್ರಸಾರವಾಗುತ್ತಿದ್ದಂತೆ ಶ್ವಾನದ ರಿಯಾಕ್ಷನ್ ಹೇಗಿತ್ತು ಎಂಬುದನ್ನು ನೀವೇ ನೋಡಿ.

ಅಯ್ಯಯ್ಯೋ.. ಟಿವಿಯಲ್ಲಿ ರೊಮ್ಯಾಂಟಿಕ್ ದೃಶ್ಯ ಕಂಡು ನಾಚಿಕೆಯಿಂದ ಕಣ್ಣು ಮುಚ್ಚಿದ ಶ್ವಾನ
ಟಿವಿಯಲ್ಲಿ ರೊಮ್ಯಾಂಟಿಕ್ ದೃಶ್ಯ ಕಂಡು ನಾಚಿಕೆಯಿಂದ ಕಣ್ಣು ಮುಚ್ಚಿದ ಶ್ವಾನ
ಮಾಲಾಶ್ರೀ ಅಂಚನ್​
| Updated By: Rakesh Nayak Manchi|

Updated on:Jan 15, 2024 | 5:54 PM

Share

ಸಾಮಾನ್ಯವಾಗಿ ಟಿವಿಯಲ್ಲಿ ಸಿನೆಮಾ ಅಥವಾ ಧಾರಾವಾಹಿ ನೋಡುತ್ತಿರುವಾಗ ಅದರಲ್ಲಿ ರೊಮ್ಯಾಂಟಿಕ್ ದೃಶ್ಯ ಬಂದಾಗ ನಮಗೆಯೇ ಸ್ವಲ್ವ ಮುಜುಗರ ಮತ್ತು ನಾಚಿಕೆಯಾಗುತ್ತದೆ ಅಲ್ವಾ. ಅದೇ ರೀತಿ ಇಲ್ಲೊಂದು ಶ್ವಾನಕ್ಕೂ ಕೂಡಾ ರೊಮ್ಯಾಂಟಿಕ್ ದೃಶ್ಯವನ್ನು ನೋಡಿದಾಕ್ಷಣ ಮುಜುಗರವಾಗುತ್ತೆಯಂತೆ. ಇದಕ್ಕೆ ಸಂಬಂಧಿಸಿದ ಫನ್ನಿ ವಿಡಿಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral Video) ಆಗಿದ್ದು, “ಯಾಕ್ರೀ ಮಗುವಿಗೆ ಮುಜುಗರ ಉಂಟು ಮಾಡುತ್ತೀರಾ” ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಶ್ವಾನಗಳನ್ನು ಸಾಕಲು ಇಷ್ಟಪಡುತ್ತಾರೆ. ವಿಶೇಷವೇನೆಂದರೆ ಈ ಸಾಕು ನಾಯಿಗಳು ಕೆಲವೊಮ್ಮೆ ನಮ್ಮಂತೆಯೇ ವರ್ತಿಸುತ್ತವೆ. ಟಿ.ವಿಯಲ್ಲಿ ಕಾರ್ಟೂನ್ ನೋಡುವುದಿರಲಿ, ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದಿರಲಿ, ಮಾಲೀಕನೊಂದಿಗೆ ವ್ಯಾಯಾಮ ಮಾಡುವುದಿರಲಿ… ಈ ರೀತಿ ಕೆಲವೊಮ್ಮೆ ಮನುಷ್ಯರಂತೆಯೇ ವರ್ತಿಸುತ್ತವೆ.

ಈ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಸಾಮಾನ್ಯವಾಗಿ ಮನುಷ್ಯರಾದ ನಾವುಗಳೇ ಟಿ.ವಿಯಲ್ಲಿ ರೊಮ್ಯಾಂಟಿಕ್ ದೃಶ್ಯವನ್ನು ನೋಡಿದಾಗ ಸ್ವಲ್ಪ ಮುಜುಗರ ಪಟ್ಟುಕೊಳ್ಳುತ್ತೇವೆ. ಅದೇ ರೀತಿ ಇಲ್ಲೊಂದು ಶ್ವಾನ ಕೂಡಾ ರೊಮ್ಯಾಂಟಿಕ್ ದೃಶ್ಯವನ್ನು ನೋಡಿ, ನಾಚಿ ಕಣ್ಣು ಮುಚ್ಚಿಕೊಂಡಿದೆ. ಈ ಹಾಸ್ಯಮಯ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ಫೇಸ್ಬುಕ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಶ್ವಾನವೊಂದು ಟಿವಿಯಲ್ಲಿ ರೊಮ್ಯಾಂಟಿಕ್ ದೃಶ್ಯವನ್ನು ನೋಡಿ, ಮುಜುಗರ ಪಟ್ಟುಕೊಂಡು ಕಣ್ಣು ಮುಚ್ಚಿಕೊಂಡು ಕುಳಿತಿರುವ ತಮಾಷೆಯ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಹಸ್ಕಿ ನಾಯಿ ಟಿವಿಯಲ್ಲಿ ಯಾವುದೋ ಕೊರಿಯನ್ ಸೀರೀಸ್ ನೋಡುತ್ತಿತ್ತು. ಆ ವೇಳೆಯಲ್ಲಿ ರೋಮ್ಯಾಂಟಿಕ್ ದೃಶ್ಯವೊಂದು ಪ್ಲೇ ಆಗುತ್ತೆ. ಇದನ್ನು ನೋಡಿದ ಶ್ವಾನ ಮುಜುಗರಕ್ಕೊಳಗಾಗಿ ಶಾಂತಂ ಪಾಪಂ.. ಶಾಂತಂ ಪಾಪಂ… ನನ್ನ ಕಣ್ಣಿಂದ ಈ ದೃಶ್ಯವನೆಲ್ಲಾ ನೋಡಲು ಸಾಧ್ಯವಿಲ್ಲ ಎನ್ನುತ್ತಾ ಸ್ವಲ್ಪ ಈ ಕಡೆ ಬಂದು ತನ್ನ ಕಾಲಿನಿಂದ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ಕೆಲ ದಿನಗಳ ಹಿಂದೆ ಫೇಸ್ಬುಕ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 36 ಸಾವಿರಕ್ಕೂ ಅಧಿಕ ಲೈಕ್​ಗಳನ್ನು ಪಡೆದುಕೊಂಡಿದೆ. ಫನ್ನಿ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಬಾಕ್ಸ್​ನಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಒಬ್ಬ ಬಳಕೆದಾರರು “ನಮ್ ಮಗುವಿಗೆ ಯಾಕ್ರಿ ಈ ರೀತಿ ಹಿಂಸೆ ನೀಡ್ತೀರಾ” ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಅಯ್ಯಯ್ಯೋ ಶ್ವಾನಕ್ಕೆ ಮುಜುಗರ ಆಯಿತೇನೋ” ಎಂದು ಹೇಳಿದ್ದಾರೆ. ಇನ್ನೂ ಕೆಲವರು ಶ್ವಾನ ತುಂಬಾ ಮುದ್ದಾಗಿ ನಟನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 15 January 24