Viral Video: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ನೀರಿನ ಟ್ಯಾಪ್

ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮನೆ, ಮನೆಯ ಗೇಟ್, ಅಂಗಡಿ ಮುಂಗಟ್ಟುಗಳಿಗೆ ಭದ್ರವಾಗಿ ಬೀಗ ಹಾಕ್ತೀವಿ ಅಲ್ವಾ. ಆದೆ ರೀತಿ ಇಲ್ಲೊಬ್ಬ ವ್ಯಕ್ತಿ ನೀರಿನ ಪೋಲನ್ನು ತಡೆಯಲು ಲಾಕ್ ಆಂಡ್ ಕೀ ಲಾಕ್ ಸಿಸ್ಟಮ್ ಇರುವ ನೀರಿನ ಟ್ಯಾಪ್ ಅನ್ನು ಬಳಕೆ ಮಾಡಿದ್ದಾರೆ. ಈ ಹೊಸ ಬಗೆಯ ನೀರಿನ ಟ್ಯಾಪ್ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನೀರಿನ ಮಿತ ಬಳಕೆಗೆ ಇದೊಂದು ಒಳ್ಳೆಯ ಐಡಿಯಾ ಎಂದು ನೆಟ್ಟಿಗರು ಹೇಳಿದ್ದಾರೆ.

Viral Video: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ನೀರಿನ ಟ್ಯಾಪ್
ಲಾಕ್ ಸಿಸ್ಟಮ್ ಇರುವ ನೀರಿನ ಟ್ಯಾಪ್
Follow us
| Updated By: Rakesh Nayak Manchi

Updated on:Jan 15, 2024 | 6:56 PM

ನಾವೆಲ್ಲರೂ ಪ್ರತಿನಿತ್ಯ ನೀರನ್ನು ಬಳಕೆ ಮಾಡುತ್ತೇವೆ. ಹೆಚ್ಚಿನವರು ಪ್ರತಿನಿತ್ಯ ನೀರನ್ನು ಪೋಲು ಮಾಡ್ತಾನೇ ಇರ್ತಾರೆ. ಕೆಲವೊಬ್ಬರೂ ಬಟ್ಟೆ ಒಗೆಯುವ ಸಂದರ್ಭದಲ್ಲಿ, ಪಾತ್ರೆ ತೊಳೆಯುವ ಸಂದರ್ಭದಲ್ಲಿ ನೀರಿನ ಟ್ಯಾಪ್ ಓಪನ್ ಮಾಡಿದ್ರೆ, ನೀರು ಪೋಲಾಗುತ್ತಿದೆ ಅಂತ ಗೊತ್ತಿದ್ರೂ ಕೂಡಾ ಟ್ಯಾಪ್ ಬಂದ್ ಮಾಡಲ್ಲ. ಅದರಲ್ಲೂ ಇನ್ನು ಕೆಲವು ಮಹಾನುಭಾವರಿದ್ದಾರೆ, ಅವ್ರು ಹೆಂಗಪ್ಪಾ ಅಂದ್ರೆ, ತಮ್ಮ ಮನೆಯಲ್ಲಿ ಮಿತ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡಿದ್ರೂ ಕೂಡ, ಬೇರೆಯವರ ಮನೆಗಳಲ್ಲಿ ಅಥವಾ ಸಾರ್ವಜನಿಕ ನಳ್ಳಿ ನೀರನ್ನು ಬೇಕು ಬೇಕಂತಲೇ ಪೋಲು ಮಾಡಿಬಿಡುತ್ತಾರೆ. ಅಂತಹವರ ಕುಚೇಷ್ಟೆಗೆ ಲಗಾಮು ಹಾಕಲೆಂದೇ ಇಲ್ಲೊಬ್ಬ ವ್ಯಕ್ತಿ ತಮ್ಮ ಮನೆಯ ನೀರಿನ ನಳ್ಳಿಗೆ ಲಾಕ್ ಆಂಡ್ ಕೀ ಲಾಕ್ ಸಿಸ್ಟಮ್ ಇರುವ ನೀರಿನ ಟ್ಯಾಪ್ ಅಳವಡಿಸಿದ್ದು, ಇದು ಹೇಗೆ ವರ್ಕ್ ಆಗುತ್ತೆ ಎಂದ್ರೆ, ಟ್ಯಾಪ್ ಅನ್ನು ಬೀಗದ ಕೈ ಹಾಕಿ ಲಾಕ್ ಓಪನ್ ಮಾಡಿದ್ರೆ ಮಾತ್ರ ನಳ್ಳಿಯಲ್ಲಿ ನೀರು ಬರುತ್ತೆ. ನೀರಿನ ಉಳಿತಾಯಕ್ಕೆ ಈ ಐಡಿಯಾ ಒಂಥರಾ ಚೆನ್ನಾಗಿದೆ ಅಲ್ವಾ.

ಈ ಲಾಕ್ ಆಂಡ್ ಕೀ ಲಾಕ್ ಟ್ಯಾಪ್ ಆನ್ಲೈನ್ ಶಾಪಿಂಗ್ ಆಪ್ ಅಮೆಜಾನ್ ಅಲ್ಲೂ ಲಭ್ಯವಿದ್ದು, ನಿಮ್ಮ ಮನೆಯಲ್ಲೂ ಮಕ್ಕಳು ಏನಾದ್ರೂ ನೀರಿನಲ್ಲಿ ಆಟವಾಡುತ್ತಾ, ನೀರನ್ನು ಪೋಲು ಮಾಡ್ತಿದ್ದಾರೆ ಅಂದ್ರೆ ನೀವು ಕೂಡಾ ನಿಮ್ಮ ಮನೆಯಲ್ಲಿ ಈ ಟ್ಯಾಪ್ ಬಳಕೆ ಮಾಡಬಹುದು.

@gags.nepal ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ನೀರಿನ ಮಿತ ಬಳಕೆಗೆ ವ್ಯಕ್ತಿಯೊಬ್ರು ಲಾಕ್ ಕೀ ಸಿಸ್ಟಮ್ ಇರುವ ಟ್ಯಾಪ್ ಬಳಕೆ ಮಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಅಯ್ಯಯ್ಯೋ.. ಟಿವಿಯಲ್ಲಿ ರೊಮ್ಯಾಂಟಿಕ್ ದೃಶ್ಯ ಕಂಡು ನಾಚಿಕೆಯಿಂದ ಕಣ್ಣು ಮುಚ್ಚಿದ ಶ್ವಾನ

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ರು ನೀರಿನ ಮಿತ ಬಳಕೆಗಾಗಿ ತಮ್ಮ ಮನೆಯ ನಳ್ಳಿಗೆ ಲಾಕ್ ಆಂಡ್ ಲಾಕ್ ಕೀ ಸಿಸ್ಟಮ್ ಇರುವ ನೀರಿನ ಟ್ಯಾಪ್ ಅಳವಡಿದ್ದು, ಕೀಲಿ ಕೈ ಸಹಾಯದಿಂದ ಟ್ಯಾಪ್ ಓಪನ್ ಮಾಡಿದ್ರೆ ಮಾತ್ರ ಆ ನಳ್ಳಿಯಲ್ಲಿ ನೀರು ಬರುತ್ತೆ. ಈ ವಿಧಾನ ಮೂಲಕವು ನೀರನ್ನು ಮಿತವಾಗಿ ಬಳಕೆ ಮಾಡಬಹುದು ಎಂಬುದನ್ನು ತೋರಿಸುವ ದೃಶ್ಯವನ್ನು ಕಾಣಬಹುದು.

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 63.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.1 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼನಿಮ್ಮ ಪಕ್ಕದ್ಮನೆಯವ್ರು, ನಿಮ್ ಮನೆಗೆ ನೀರಿಗ್ ಬಂದ್ರೆ, ಇದೇ ಐಡಿಯಾವನ್ನು ಬಳಸಿʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀರಿನ ಉಳಿತಾಯಕ್ಕೆ ಒಂದೊಳ್ಳೆ ಉಪಾಯʼ ಅಂತ ಹೇಳಿದ್ದಾರೆ. ಇನ್ನೂ ಅನೇಕರು ಈ ರೀತಿಯೂ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡಬಹುದಾ, ಈ ಐಡಿಯಾ ತುಂಬಾ ಮಜವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Mon, 15 January 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ