
ನೀವು ಸಿನಿಮಾದಲ್ಲಿ ಆನೆಗಳು ಕ್ರಿಕೆಟ್ ಆಡಿರುವುದನ್ನು ಕಾಣಬಹುದು, ಆದರೆ ಇಲ್ಲೊಂದು ಇಂತಹದೇ ನೈಜ ವಿಡಿಯೊ ವೈರಲ್ ಆಗಿದೆ. ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿದುಕೊಂಡು ಒಂದಿಷ್ಟು ಹುಡುಗರ ಜೊತೆಗೆ ಕ್ರಿಕೆಟ್ ಆಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆನೆಯ ವಿಡಿಯೊ ವೈರಲ್ ಆಗಿದೆ. ಈ ಮುದ್ದಾದ ವಿಡಿಯೊ ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು. ಪ್ರಾಣಿಗಳು ಮನುಷ್ಯನ ಭಾವನೆಗೆ ಸ್ಪಂದಿಸುತ್ತವೆ, ಮನುಷ್ಯನಿಗೆ ನಿಷ್ಕಲ್ಮಶ ಪ್ರೀತಿಯನ್ನು ತೋರುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಯಾವುದೇ ಮನುಷ್ಯನು ಪ್ರಾಣಿಯ ಜೊತೆಗೆ ಇಂತಹ ವಿಚಾರಗಳನ್ನು ಹಚ್ಚಿಕೊಂಡರೆ, ಆ ಪ್ರಾಣಿಯು ಮನುಷ್ಯನಿಗೆ ಪ್ರೀತಿ ತೋರುತ್ತದೆ. ಅವನ ಜೊತೆ ಆಟವಾಡುತ್ತದೆ. ಪ್ರತಿ ಕ್ಷಣ ತನ್ನ ಒಡೆಯನ ಜೊತೆಯಲ್ಲಿ ಇರಲು ಬಯಸುತ್ತವೆ. ನಿಜವಾಗಿಯೂ ಹೇಳಬೇಕೆಂದರೆ ಮನುಷ್ಯನಿಗಿಂತ ಪ್ರಾಣಿಗಳೇ ಭಾವನೆಗಳಿಗೆ ಸ್ಪಂದಿಸುತ್ತವೆ. ಅದರಲ್ಲೂ ಈ ಪ್ರಾಣಿಗಳು ಮಕ್ಕಳೊಂದಿಗೆ ತಾನು ಮಗುವಾಗಿ ಆಟವಾಡುತ್ತಾ ಕಾಲ ಕಳೆಯುತ್ತದೆ. ಸಂಜೆಯ ಹೊತ್ತಿಗೆ ಕೆಲಸ ಮುಗಿಸಿ, ಹಾಗೂ ಶಾಲೆಯಿಂದ ಬಂದು ಹೆಚ್ಚಿನವರು ಮೈದಾನದಲ್ಲಿ ಕ್ರಿಕೆಟ್ ಆಟವನ್ನು ಆಡುತ್ತಾರೆ. ಆದರೆ ಈ ಹುಡುಗರು ಆನೆಯೊಂದಿಗೆ ಆಟವಾಡಿರುವುದು ವಿಶೇಷವಾಗಿದೆ. ಆನೆಯು ಒಂದಷ್ಟು ಹುಡುಗರೊಂದಿದೆ ಕ್ರಿಕೆಟ್ ಆಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆನೆಯು ಅಲ್ಲಿದ್ದ ಒಂದಷ್ಟು ಹುಡುಗರ ಜೊತೆ ಸೇರಿ ಕ್ರಿಕೆಟ್ ಆಡುವ ಮುದ್ದಾದ ವೀಡಿಯೋ ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆನೆಯು ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿದುಕೊಂಡು ಹುಡುಗರು ಎಸೆಯುತ್ತಿದ್ದ ಚೆಂಡಿಗೆ ಅದ್ಭುತವಾಗಿ ಬ್ಯಾಟಿಂಗ್ ಮಾಡುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಜೊತೆಗೆ ಆನೆಯ ಮುಗ್ಧತೆಯನ್ನು ಇಲ್ಲಿ ಕಾಣಬಹುದು. ಅಲ್ಲೇ ನಿಂತಿದ್ದ ಕೆಲವರು ಈ ಮುಗ್ಧ ಪ್ರಾಣಿಯ ಆಟಕ್ಕೆ ಮನಸೋತು ವಿಡಿಯೊ ಮಾಡುತ್ತಾ ನಿಂತಿದ್ದರು. ಕೆಲವೇ ಸೆಕೆಂಡುಗಳ ವಿಡಿಯೊ ಕ್ಲಿಪ್ ಇದಾದರೂ ನಮ್ಮ ಮುಖದಲ್ಲಿ ಕಿರು ನಗೆಯನ್ನು ತರಿಸುತ್ತದೆ.
ಇದನ್ನೂ ಓದಿ: Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?
ಈ ವೈರಲ್ ವಿಡಿಯೊ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಇದು 21.3 ಸಾವಿರ ವೀಕ್ಷಣೆಯನ್ನು ಪಡೆದುಕೊಂಡು ಮೆಚ್ಚುಗೆಯನ್ನು ಗಳಿಸಿದೆ. ಮನುಷ್ಯ ಮಾತ್ರವಲ್ಲದೆ ಪ್ರಾಣಿಗಳು ಅದ್ಭುತವಾಗಿ ಆಟವಾಡುತ್ತವೆ ಎಂಬುದನ್ನು ಈ ವಿಡಿಯೊದಲ್ಲಿ ನೋಡಬಹುದು.