Kerala Bride Attends Exam: ಧಾರೆ ಸೀರೆ, ಮೈ ತುಂಬಾ ಆಭರಣ ಧರಿಸಿ ಪರೀಕ್ಷೆ ಬರೆಯಲು ಬಂದ ಮಧುಮಗಳ ವಿಡಿಯೋ ಇಲ್ಲಿದೆ ನೋಡಿ

ವೀಡಿಯೋದಲ್ಲಿ, ಮದುವೆಯ ಸೀರೆಯನ್ನು ಉಟ್ಟು, ಮೈ ತುಂಬಾ ಆಭರಣಗಳು ಮತ್ತು ಸಂಪೂರ್ಣ ಮೇಕ್ಅಪ್‌ನೊಂದಿಗೆ ಪರೀಕ್ಷೆ ಹಾಲ್‌ಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು.

Kerala Bride Attends Exam: ಧಾರೆ ಸೀರೆ, ಮೈ ತುಂಬಾ ಆಭರಣ ಧರಿಸಿ ಪರೀಕ್ಷೆ ಬರೆಯಲು ಬಂದ ಮಧುಮಗಳ ವಿಡಿಯೋ ಇಲ್ಲಿದೆ ನೋಡಿ
ಪರೀಕ್ಷೆ ಬರೆಯಲು ಬಂದ ಮಧುಮಗಳು
Image Credit source: Instagram

Updated on: Feb 12, 2023 | 12:03 PM

ತನ್ನ ಮದುವೆಯ ದಿನ(Wedding Day) ದಂದು ಮದುವೆ ಸೀರೆ ಉಟ್ಟು ಸ್ಟೆತಸ್ಕೋಪ್ ಧರಿಸಿ, ಕೇರಳದ ವಧು ಫಿಸಿಯೋಥೆರಪಿ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media) ದಲ್ಲಿ ಸಕ್ಕತ್ತ್​​ ಆಗಿ ವೈರಲ್​​ ಆಗಿದೆ. ವಧು ಶ್ರೀ ಲಕ್ಷ್ಮಿ ಅನಿಲ್ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿನಿ. ಏಳು ದಿನಗಳ ಹಿಂದೆ ಹಂಚಿಕೊಂಡ ನಂತರ, ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ  1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದೇ ಪೋಸ್ಟ್​​ನ್ನು Instagram ನ grus_girls ಪೇಜ್​​​ನಲ್ಲಿ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ಒಮ್ಮೆ ನೀವೇ ನೋಡಿ.

ಇದನ್ನೂ ಓದಿ: ಬ್ಲಿಂಕ್​ಇಟ್​ನಿಂದ ಡೆಲಿವರಿ ಆದ ಬ್ರೆಡ್ ಪ್ಯಾಕೆಟ್​ನಲ್ಲಿ ಸತ್ತ ಇಲಿ: ಕಸ್ಟಮರ್ ಸಪೋರ್ಟ್ ಕೊಟ್ಟ ಉತ್ತರ ಏನು ಗೊತ್ತಾ?

ವೀಡಿಯೋದಲ್ಲಿ, ಹಳದಿ ಮದುವೆಯ ಸೀರೆಯನ್ನು ಧರಿಸಿ, ಮೈ ತುಂಬಾ ಆಭರಣಗಳು ಮತ್ತು ಸಂಪೂರ್ಣ ಮೇಕ್ಅಪ್‌ನೊಂದಿಗೆ ಪರೀಕ್ಷೆ ಹಾಲ್‌ಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಅವಳು ತನ್ನ ಸ್ನೇಹಿತರ ಕಡೆಗೆ ಕೈ ಬೀಸುತ್ತಿದ್ದರೆ, ಅವಳ ಸ್ನೇಹಿತರು ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಕಾರಿನಿಂದ ಇಳಿದ ತಕ್ಷಣ ಆಕೆಯ ಸೀರೆಯ ನೆರಿಗೆಯನ್ನು ಆಕೆಯ ಸ್ನೇಹಿತೆ ಸರಿಪಡಿಸುತ್ತಿರುವುದು, ಜೊತೆಗೆ ಸ್ಟೆತೊಸ್ಕೋಪ್ ಮತ್ತು ಆಪ್ರೋನ್​​​ ಧರಿಸಿ ಪರೀಕ್ಷಾ ಕೊಠಡಿಗೆ ತೆರಳುವುದನ್ನು ಕಾಣಬಹುದು. ನಂತರ ಪರೀಕ್ಷೆ ಮುಗಿಸಿ ಕೊಠಡಿಯಿಂದ ಹೊರಬಂದು ತಾಯಿಯನ್ನು ಬಿಗಿಯಾಗಿ ಅಪ್ಪಿಕೊಳ್ಳುವುದನ್ನು ಕಾಣಬಹುದು.

ಮೆಡಿಕೋಸ್ ಲೈಫ್ ಎಂಬ ಹ್ಯಾಶ್​​ಟ್ಯಾಗ್​​​ ಬಳಸಿ ಜೊತೆಗೆ ಫಿಸಿಯೋಥೆರಪಿ ಪರೀಕ್ಷೆ ಮತ್ತು ಮದುವೆ, ಎರಡು ಒಂದೇ ದಿನ ಎಂದು ಕ್ಯಾಷ್ಷನ್​​ ಕೂಡ ಹಾಕಲಾಗಿದೆ. ಕೆಲವು ಬಳಕೆದಾರರು ಆಕೆಯನ್ನು ಮೆಚ್ಚಿದರೆ, ಇನ್ನು ಕೆಲವರು ಪರೀಕ್ಷೆಯ ಸಮಯದಲ್ಲಿ ಮದುವೆ ಏಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಆಲ್ ದಿ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:03 pm, Sun, 12 February 23