Blinkit: ಬ್ಲಿಂಕ್​ಇಟ್​ನಿಂದ ಡೆಲಿವರಿ ಆದ ಬ್ರೆಡ್ ಪ್ಯಾಕೆಟ್​ನಲ್ಲಿ ಸತ್ತ ಇಲಿ: ಕಸ್ಟಮರ್ ಸಪೋರ್ಟ್ ಕೊಟ್ಟ ಉತ್ತರ ಏನು ಗೊತ್ತಾ?

ನಿತಿನ್ ಅರೋರಾ ತಮಗೆ ಡೆಲಿವರಿ ಆದ ಬ್ರೆಡ್ ಪ್ಯಾಕೆಟ್ ಒಳಗಿನ ಇಲಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದರು. ಬ್ಲಿಂಕ್ ಇಟ್ ಬೆಂಬಲ ಕಾರ್ಯನಿರ್ವಾಹಕ ತಬಿಂದಾ ತಮ್ಮಿಂದಾದ ತಪ್ಪಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರು.

Blinkit: ಬ್ಲಿಂಕ್​ಇಟ್​ನಿಂದ ಡೆಲಿವರಿ ಆದ ಬ್ರೆಡ್ ಪ್ಯಾಕೆಟ್​ನಲ್ಲಿ ಸತ್ತ ಇಲಿ: ಕಸ್ಟಮರ್ ಸಪೋರ್ಟ್ ಕೊಟ್ಟ ಉತ್ತರ ಏನು ಗೊತ್ತಾ?
ಬ್ಲಿಂಕ್​ಇಟ್ ಡೆಲಿವೆರಿಯಲ್ಲಿ ಸತ್ತ ಇಲಿ Image Credit source: Fresh Headline
Follow us
TV9 Web
| Updated By: Digi Tech Desk

Updated on:Feb 12, 2023 | 11:17 AM

ಕೊಚ್ಚಿ: ವೇಗವಾಗಿ ಬೆಳೆಯಿತ್ತಿರುವ ನಗರಗಳಲ್ಲಿ ತ್ವರಿತ ದಿನಸಿ ವಿತರಣಾ ಸಂಸ್ಥೆ (Instant Grocery Delivery App) ಗಳಂತಹ ಬ್ಲಿಂಕ್​ಇಟ್ (Blinkit) ಜನರ ಜೀವನವನ್ನು ಸ್ವಲ್ಪ ಮಟ್ಟಿಗಾದರೂ ಸುಲಭಗೊಳಿಸಿದೆ. ಹಾಗಿರುವಾಗ ಬ್ಲಿಂಕ್​ಇಟ್ ಗ್ರಾಹಕನೊಬ್ಬ ಹೀಗೊಂದು ಭೀಭತ್ಸಕರ ಘಟನೆಯೊಂದನ್ನು ಎದುರಿಸಬೇಕಾಯಿತು. ತಾನು ಬ್ಲಿಂಕ್ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್​ನಲ್ಲಿ ಇಲಿಯನ್ನು ಕಂಡು ಈ ವ್ಯಕ್ತಿ ಆಘಾತಕ್ಕೊಳಗಾಗಿದ್ದರು.

ಕೇರಳದ ಕೊಚ್ಚಿಯಲ್ಲಿ ನಡೆದ ಇಂತಹ ಒಂದು ಅಹಿತಕರ ಘಟೆನಯನ್ನು ನಿತಿನ್ ಅರೋರ (Nitin Arora) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಮೂಲಕ ಹಚ್ಚಿಕೊಂಡಿದ್ದಾರೆ. ನಿತಿನ್ ಟ್ವಿಟ್ಟರ್ (Twitter) ​ನಲ್ಲಿ ತಾವು ಬ್ಲಿಂಕ್​ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್​ನಲ್ಲಿ ಕಂಡ ಸತ್ತ ಇಲಿಯ ಫೋಟೋವನ್ನು ಹಂಚಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರ.

“ಬ್ಲಿಂಕ್ಇಟ್ ನಿಂದ 1/2/23 ರಂದು ಬ್ರೆಡ್ ಪ್ಯಾಕೆಟ್‌ ಆರ್ಡರ್ ಮಾಡಿದಾಗ ಸತ್ತ ಇಲಿ ಇದ್ದ ಪ್ಯಾಕೆಟ್ ಅನ್ನು ನನಗೆ ನೀಡಿದ್ದರು. ಬ್ಲಿಂಕ್​ಇಟ್ ನಿಂದ ನನಗೆ ಅತ್ಯಂತ ಅಹಿತಕರ ಅನುಭವವಾಗಿದೆ. ಇದು ಬಹಳ ಆತಂಕಕಾರಿಯಾಗಿದೆ. 10 ನಿಮಿಷಗಳ ಡೆಲಿವರಿಯಲ್ಲಿ ಇಂತಹ ಸಾಮಾನುಗಳು ಇದ್ದರೆ ನಾನು ನನಗೆ ಬೇಕಾದ ವಸ್ತುಗಳನ್ನು ಕೆಲವು ಗಂಟೆಗಳ ಕಾಲ ಕಾದು ತೆಗೆದುಕೊಳ್ಳುವುದೇ ಒಳ್ಳೆಯದು” ಎಂದು ಟ್ವಿಟ್ಟರ್​ನಲ್ಲಿ ಅರೋರಾ ಇಲಿಯ ಚಿತ್ರದ ಜೊತೆಗೆ ಬರೆದುಕೊಂಡಿದ್ದಾರೆ.

ನಿತಿನ್ ಈ ವೀಡಿಯೊವನ್ನು ಹಂಚಿಕೊಂಡ ಕೆಲವು ಕ್ಷಣಗಳಲ್ಲಿ, ಬ್ಲಿಂಕಿಟ್ ಬೆಂಬಲ ಕಾರ್ಯನಿರ್ವಾಹಕ ತಬಿಂದಾ ಕಾಳಜಿಯನ್ನು ವ್ಯಕ್ತಪಡಿಸಿ ನಿತಿನ್ ಅವರಿಗೆ ಆದ ಸಮಸ್ಯೆಗೆ ಕ್ಷಮೆಯಾಚಿಸಿದರು.

“ನಿಮಗಾದ ಸಮಸ್ಯೆಯನ್ನು ನಾನು ನೋಡಿದ್ದೇನೆ. ನಮ್ಮಿಂದ ನಿಮಗಾದ ಸಮಸ್ಯೆಗಾಗಿ ನಾನು ನಿಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾವು ಇದನ್ನು ಗಮನಿಸಿದ್ದೇವೆ. ಈ ನಿರ್ದಿಷ್ಟ ಘಟನೆಗೆ ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸಿ ಅದನ್ನು ಸುಧಾರಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ”ಎಂದು ತಬಿಂದಾ ಪ್ರತಿಕ್ರಿಯಿಸಿದರು.

ಧನಂಜಯ್ ಶಶಿಧರನ್ ಬ್ಲಿಂಕ್​ಇಟ್ ಕಂಪನಿಯ ಗ್ರಾಹಕರ ಬೆಂಬಲ (Customer Support) ಮುಖ್ಯಸ್ಥ “ಈ ಘಟನೆಗೆ ಸಂಬಂಧಿಸಿದ ನಿರ್ದಿಷ್ಟ ಅಂಗಡಿಯನ್ನು ನಮ್ಮ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಇನ್ನು ಮುಂದೆ ಈ ಅಂಗಡಿಯವರ ಜೊತೆ ಬ್ಲಿಂಕ್​ಇಟ್ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವುದಿಲ್ಲ” ಎಂದು ಅರೋರಾ ಟ್ವೀಟ್‌ಗೆ ಉತ್ತರಿಸಿದರು.

ಇದನ್ನೂ ಓದಿ: ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್​ ಕಲಾವಿದ ದೀಪನ್; ವಿಡಿಯೋ ವೈರಲ್

ಅರೋರಾ ಅವರ ಅನುಭವದಿಂದ ಜನಸಾಮಾನ್ಯರು ಗಾಬರಿಗೊಂಡಿದ್ದಾರೆ ಮತ್ತು ಕಾಮೆಂಟ್‌ ವಿಭಾಗದಲ್ಲಿ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು “ಪರಿಸ್ಥಿತಿ ಕೈ ಮೀರುವ ಮೊದಲು ಪರಿಹಾರ ಕಂಡುಕೊಳ್ಳಿ ಎಂದು ಬ್ಲಿಂಕ್​ಇಟ್ ಗೆ ಕಾಮೆಂಟ್ ಮೂಲಕ ಎಚ್ಚರಿಸಿದರೆ ಮತ್ತೊಬ್ಬರು “ಬ್ಲಿಂಕ್​ಇಟ್ ಈ ಘಟನೆ ಯಾಕಾಯಿತು ಎಂಬುದನ್ನು ವಿವರಿಸಬೇಕು. ನಮ್ಮ ಆಹಾರ ಸುರಕ್ಷತಾ ಪ್ರಾಧಿಕಾರವು ಇಂತಹ ಸ್ಥಳಗಳನ್ನು ಕಾಲಕಾಲಕ್ಕೆ ಸುರಕ್ಷತೆಗಾಗಿ ಪರಿಶೀಲಿಸುತ್ತದೆಯೇ?” ಎಂದು ತಮ್ಮ ಕಳವಳವನ್ನು ಹೊರ ಹಾಕಿದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:16 am, Sun, 12 February 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್