ಕರಾವಳಿಯ ಗಂಡು ಕಲೆ ಯಕ್ಷಗಾನವು ನಮ್ಮ ಪುರಾಣದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವುದರ ಜತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಸಜ್ಜನಿಕೆಯ ನಡವಳಿಕೆಗಳಿಗೆ ಪ್ರೇರಣಾದಾಯಕವಾಗಿದೆ. ನಮ್ಮ ಸಂಸ್ಕೃತಿಯ ಧಾರ್ಮಿಕ ಇತಿಹಾಸಗಳು ಉಳಿಯಬೇಕಾದರೆ ಯಕ್ಷಗಾನದಂತಹ ಕಲೆ ಗಳ ಪಾತ್ರ ಅತೀ ಮಹತ್ವದ್ದಾಗಿದೆ. ಇಂದಿನ ಕಾಲಘಟ್ಟದಲ್ಲಿ ಯಕ್ಷಗಾನ ಕಲೆಯತ್ತ ಆಸಕ್ತಿ ತೋರುತ್ತಿಲ್ಲ ಎಂಬ ಬೇಸರವಿದ್ದರೂ ಯಕ್ಷಗಾನದ ಪ್ರಖ್ಯಾತಿ ಎಲ್ಲಿಯೂ ಕಡಿಮೆಯಾಗಿಲ್ಲ. ಇದಕ್ಕೆ ಪೂರಕವೆಂಬ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರೆಲ್ ಆಗುತ್ತಿದೆ. ಯಕ್ಷಗಾನವನ್ನು ಭಾರತ ಮಾತ್ರವಲ್ಲ ಹೊರ ದೇಶದವರೂ ಕೂಡ ಪ್ರೀತಿಸುತ್ತಾರೆ ಎಂಬುದಕ್ಕೆ ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇಕಾಗಿಲ್ಲ. ನಮ್ಮ ದೇಶದವರ ಸಂಸ್ಕೃತಿಯನ್ನು ಬೇರೆಯವರು ಇಷ್ಟಪಡುತ್ತಾರೆ ಎಂಬುದು ಸುಳ್ಳಲ್ಲ. ಈ ವಿಡಿಯೋ ಕೂಡ ನಿಮಗೆ ಅದೇ ರೀತಿಯ ಸಂದೇಶ ರವಾನಿಸುತ್ತದೆ.
ನೀವು ಊರಿನ ಯಕ್ಷಗಾನದಲ್ಲಿ ಮಹಿಷಾಸುರನ ಅಬ್ಬರದ ಪ್ರವೇಶವನ್ನು ನೋಡಿರಬಹುದು ಆದರೆ ಬೇರೆ ದೇಶಗಳಲ್ಲಿ ನೋಡಿದ್ದೀರಾ? ಹಾಗಾದರೆ ಈ ವಿಡಿಯೋ ತಪ್ಪದೆ ನೋಡಿ. ಇದರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ಯಕ್ಷಗಾನ ಬಯಲಾಟ ಆಗುವುದನ್ನು ತೋರಿಸಿದ್ದು, ಮಹಿಷಾಸುರನ ಅಬ್ಬರವನ್ನು ಅಲ್ಲಿನ ಜನ ಕಣ್ಣತುಂಬಿಕೊಂಡಿರುವುದನ್ನು ತೋರಿಸಿದ್ದಾರೆ. ಮಹಿಷಾಸುರ ಪಾತ್ರವನ್ನು ಎಲ್ಲರೂ ಮಾಡುವುದಿಲ್ಲ ಏಕೆಂದರೆ ಅದಕ್ಕೆ ಸಮನಾದ ಗತ್ತಿರಬೇಕು. ಆಗಲೇ ಆ ಪಾತ್ರಕ್ಕೆ ಒಂದು ಹಿರಿಮೆ ಬರುವುದು. ವಿಡಿಯೋದಲ್ಲಿ ಮಹಿಷಾಸುರನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಅಲ್ಲಿನ ಜನ ಆ ಪಾತ್ರದ ಹಾವ- ಭಾವ ನೋಡಿ ನಿಬ್ಬೆರಗಾಗಿದ್ದಾರೆ. ಈ ವಿಡಿಯೋ ನೋಡಿದವರು ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ: ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ ನೀಡಿದ ಪತ್ನಿ; ಕಾರಣ ತಿಳಿದರೆ ನೀವು ಶಾಕ್ ಆಗುದಂತೂ ಖಂಡಿತಾ
ತೆಂಕು ತಿಟ್ಟಿನ ಮಹಿಷಾಸುರನನ್ನು ನೋಡಿದ ಜನ “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಎಂದಿದ್ದಾರೆ. ಇನ್ನು ಕೆಲವರು “ಅಲ್ಲಿನ ಜನ ನಮ್ಮ ಕಲೆಯನ್ನು ಆರಾಧಿಸುವುದನ್ನು ನೋಡಿ ಖುಷಿಯಾಗುತ್ತದೆ” ಎಂದಿದ್ದಾರೆ. ಹಲವರು ಯಕ್ಷಗಾನದ ಖ್ಯಾತಿ ಹೀಗೆ ಮುಂದುವರಿಯಲಿ ನಮ್ಮ ಭಾರತದ ಕೀರ್ತಿ ಕಂಗೊಳಿಸಲಿ ಎಂದಿದ್ದಾರೆ. ಆದರೆ ಪ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಯಕ್ಷಗಾನ ನಡೆಯುತ್ತಿರುವುದು ಇದು ಮೊದಲಲ್ಲ 2017-18 ರಲ್ಲೇ ಶೂರ್ಪನಖ ಮಾನ ಭಂಗ ಮತ್ತು ಜಾಂಬವತಿ ಕಲ್ಯಾಣ ಯಕ್ಷಗಾನ ನಡೆದಿತ್ತು. ಮಹಿಷಾಸುರ ಅಬ್ಬರ, ಅವನ ವಧೆ ನಡೆಯುತ್ತಿರುವುದು ಇದು ಮೊದಲ ಬಾರಿ ಆಗಿರಬಹುದು. ಏನೇ ಇರಲಿ ನಮ್ಮ ಯಕ್ಷಗಾನ ಕಲೆ ಹೊರ ದೇಶದ ಜನರಿಗೆ ಮನರಂಜನೆ ನೀಡುತ್ತಿರುವುದು ಸಾಮಾನ್ಯ ವಿಷಯ ಅಲ್ಲವೇ ಅಲ್ಲ. ಕನ್ನಡಿಗರಾಗಿ ನಾವು ಇಂತಹ ವಿಷಯಗಳಿಗೆ ಹೆಮ್ಮೆ ಪಡಲೇ ಬೇಕು. ಹಾಗೆಯೇ ಅಲ್ಲಿಯವರೆಗೂ ಹೋಗಿ ನಮ್ಮ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಯಕ್ಷಗಾನ ತಂಡಕ್ಕೆ ಧನ್ಯವಾದ ಹೇಳಲೇಬೇಕು. ಈ ವಿಡಿಯೋವನ್ನು yakshagana_fans_ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಅವರಿಗೆ ಪ್ರಶಂಸೆಗಳ ಸುರಿಮಳೆಗೈಯಬಹುದಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: