ತಾಪಮಾನ ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. ಸುಡು ಬಿಸಿಲಿನಲ್ಲಿ ಜನ ಮನೆಯಿಂದ ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನವರು ಫ್ಯಾನ್, ಕೂಲರ್ ಅಥವಾ ಎಸಿಯಂತಹ ವಸ್ತುಗಳ ಸಹಾಯದಿಂದ ತಮ್ಮ ಮನೆಗಳಲ್ಲಿನ ಶಾಖದಿಂದ ಪರಿಹಾರವನ್ನು ಪಡೆಯುತ್ತಾರೆ. ಈ ಋತುವಿನಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಬಿಸಿಲಿನ ಬೇಗೆ ಎದುರಾಗಿದೆ. ಆದ್ದರಿಂದ ಇಲ್ಲೊಬ್ಬ ರೈತ ತಾನು ಸಾಕಿದ ಎಮ್ಮೆಗಳ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾಕಿದ ಎಮ್ಮೆಗಳನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸದೇ ಅವುಗಳ ಬಗ್ಗೆಯೂ ಕಾಳಜಿ ತೋರಿಸಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಾಕಷ್ಟು ನೆಟ್ಟಿಗರು ಲೈಕ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಒಂದು ಕೋಣೆಯಲ್ಲಿ ಮೂರು ಎಮ್ಮೆಗಳು ಮತ್ತು ಎರಡು ಕರುಗಳು ಇರುವುದನ್ನು ನೋಡಬಹುದು. ಅಚ್ಚರಿಯ ಸಂಗತಿಯೆಂದರೆ ಎಸಿಯ ಜೊತೆಗೆ ಲೈಟ್, ಫ್ಯಾನ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರೂ ಅಚ್ಚರಿಗೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?
manjeetmalik567 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 6 ದಿನಗಳಲ್ಲಿ 10ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ