ವಿಮಾನ ನಿಲ್ದಾಣದಲ್ಲಿ ಕೋಳಿಯ ಹಸಿ ಮಾಂಸದ ರಾಶಿ; ವಿಡಿಯೋ ವೈರಲ್

| Updated By: shruti hegde

Updated on: Sep 01, 2021 | 2:48 PM

ನಿಮ್ಮ ಪ್ರಯಾಣದಲ್ಲಿ ಮಾಂಸದ ತುಂಡುಗಳನ್ನು ತೆಗೆದೊಯ್ಯುವಾಗ ಸರಿಯಾಗಿ ಪ್ಯಾಕ್ ಮಾಡಬೇಕು ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಕೋಳಿಯ ಹಸಿ ಮಾಂಸದ ರಾಶಿ; ವಿಡಿಯೋ ವೈರಲ್
Follow us on

ಪ್ಯಾಕ್ ಮಾಡದ ಕೋಳಿಯ ಹಸಿ ಮಾಂಸದ ತುಂಡು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಲಗೇಜ್ ಸಾಗುವಾಗ ಅದರಿಂದ ಹೊರಬಿದ್ದ ಮಾಂಸದ ತುಂಡನ್ನು ದೃಶ್ಯದಲ್ಲಿ ನೋಡಬಹುದು.

ನಿಮ್ಮ ಪ್ರಯಾಣದಲ್ಲಿ ಮಾಂಸದ ತುಂಡುಗಳನ್ನು ತೆಗೆದೊಯ್ಯುವಾಗ ಸರಿಯಾಗಿ ಪ್ಯಾಕ್ ಮಾಡಬೇಕು ಎಂಬ ಅಭಿಪ್ರಾಯ ನೆಟ್ಟಿಗರಿಂದ ಕೇಳಿ ಬಂದಿದೆ. ಈ ಜಾಗದಲ್ಲಿ ನನ್ನ ಬ್ಯಾಗ್ಅನ್ನು ಇರಿಸಲು ನಾನು ಇಷ್ಟಪಡುವುದಿಲ್ಲ ಎಂದು ಓರ್ವರು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಲಗೇಜ್​ ಸಾಗಿಸುವಾಗ ಅದರ ಜತೆಗೆ ಕೋಳಿಯ ಹಸಿ ಮಾಂಸದ ರಾಶಿ ಸಾಗುತ್ತಿರುವದನ್ನು ವಿಡಿಯೋದಲ್ಲಿ ಗಮನಿಸಬಹುದು. ಘಟನೆ ಯಾವಾಗ ಸಂಭವಿಸಿದೆ ಎಂಬುದರ ಕುರಿತಾಗಿ ಯಾವುದೇ ಮಾಹಿತಿ ಇಲ್ಲ. ಮಾಲೀಕರು ಕೋಳಿ ಮಾಂಸವನ್ನು ಸರಿಯಾಗಿ ಪ್ಯಾಕ್ ಮಾಡದ ಕಾರಣ ಆಚೆಗೆ ಬಿದ್ದಿದೆ ಎಂದು ಕೆಲವರು ಹೇಳಿದ್ದಾರೆ.

ಕಳೆದ ವಾರ ಅಮೆರಿಕದ ಟ್ರಾನ್ಸ್​ಫರ್​ಮೇಶನ್​ ಸೆಕ್ಯುರಿಟಿ ಅಡ್ಮಿನಿಸ್ಟ್ರೇಶನ್ ವಿಡಿಯೋವನ್ನು ಹಂಚಿಕೊಂಡಿದೆ. ಅಧಿಕೃತ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 42,000ಕ್ಕೂ ಹೆಚ್ಚು ವೀಕ್ಷಣಗಳು ಹಾಗೂ 1,100 ಕ್ಕೂ ಹೆಚ್ಚು ಕಾಮೆಂಟ್ಸ್​ಗಳನ್ನು ವಿಡಿಯೋ ಪಡೆದುಕೊಂಡಿದೆ.

ಇದನ್ನೂ ಓದಿ:

Viral Video: ಹಾರುತ್ತಿರುವ ಡ್ರೋನ್ ಹಿಡಿದು ಜಗಿದ ಮೊಸಳೆ; ವಿಡಿಯೋ ನೋಡಿ

Viral Video: ಅಮೆರಿಕಾ ಪಡೆ ಜಾಗ ಖಾಲಿ ಮಾಡುತ್ತಿದ್ದಂತೆಯೇ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

(Video Viral raw chicken on airport luggage conveyor belt)