ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿದ್ದ ಯುವತಿಗೆ ಹೆರಿಗೆ; ಗರ್ಭಿಣಿ ಎಂದೇ ಗೊತ್ತಿರಲಿಲ್ಲ ಎಂದ ತಾಯಿ!
Viral News: ನೈಟೌಟ್ನಲ್ಲಿ ಎಂಜಾಯ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆಯಾಗಿದೆ. ಮಹಿಳೆಗೇ ಒಮ್ಮೆಲೆ ಅಚ್ಚರಿಯಾಗುವಂತಹ ಘಟನೆ ನಡೆದಿದೆ.
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆ ಹೊಟ್ಟೆ ಪಡೆಯುತ್ತಾಳೆ. ಗರ್ಭಿಣಿಯ ಪ್ರತಿ ಹಂತದಲ್ಲೂ, ಪ್ರತೀ ಕ್ಷಣವನ್ನು ಅನುಭವಿಸುತ್ತಾಳೆ. ಮಗುವಿನ ಚಲನವಲನದಿಂದ ಖುಷಿ ಪಡುತ್ತಾಳೆ. ಇದಕ್ಕೆಲ್ಲ ಅಪವಾದ ಎಂಬಂತೆ ಒಂದು ಘಟನೆ ನಡೆದಿದೆ. ನೈಟೌಟ್ನಲ್ಲಿ ಎಂಜಾಯ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹೆರಿಗೆಯಾಗಿದೆ. ಮಹಿಳೆಗೇ ಒಮ್ಮೆಲೆ ಅಚ್ಚರಿಯಾಗುವಂತಹ ಘಟನೆ ನಡೆದಿದೆ.
23 ವರ್ಷದ ಅಮೆರಿಕಾದ ಲವಿನಿಯಾ ಎಂಬ ಯುವತಿ ರಾತ್ರಿ 10 ಗಂಟೆಯ ಹೊತ್ತಿಗೆ ಹೊಟ್ಟೆ ಸೆಳೆಯುತ್ತಿದೆ ಎಂದು ಹೇಳಲಾರಂಭಿಸಿದ್ದಾಳೆ. ಆ ಸಮಯದಲ್ಲಿ ಅವಳು ನೌಟೌಟ್ನಲ್ಲಿ ಪಾರ್ಟಿ ಮಾಡುತ್ತಿದ್ದಳು. ಸ್ನೇಹಿತರ ಜತೆಗಿದ್ದ ಆಕೆ ತನ್ನ ತಾಯಿಯ ಬಳಿ ಹೋದಳು. ತಕ್ಷಣವೇ ವೈದ್ಯರನ್ನು ಕರೆಸಲಾಯಿತು. ಆಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಳೆ ಎಂಬ ಮಾತು ಕೇಳಿ ಮನೆಯವರು ಸೇರಿ ಮಹಿಳೆಯು ಧಂಗಾಗಿದ್ದಾರೆ.
ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಆಕೆ 8 ತಿಂಗಳ ಮಗುವಿನ ಜನ್ಮ ನೀಡಿದ್ದಾಳೆ. ಸಿ-ಸೆಕ್ಷನ್ ಮೂಲಕ ಹೆರಿಗೆ ಆಗಿದೆ. ಈ ಘಟನೆ ಕಳೆದ ತಿಂಗಳು ನಡೆದಿದೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ತಾಯಿಗೆ ಗರ್ಭಾವಸ್ಥೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಹೊಟ್ಟೆ ಕೂಡಾ ಯಾವುದೇ ಆಕಾರ ಪಡೆದುಕೊಂಡಿರಲಿಲ್ಲ. ಆದರೆ ಆಕೆ ಇತ್ತೀಚೆಗೆ ದೇಹದ ತೂಕ ಪಡೆದಿದ್ದಳು. ಲಾಕ್ಡೌನ್ನಿಂದಾಗಿ ದೇಹದ ತೂಕ ಹೆಚ್ಚಾಗಿದೆ ಎಂಬ ಭಾವನೆಯಲ್ಲಿದ್ದಳು.
ನಾನು ಇನ್ನೂ ಆಘಾತದಲ್ಲಿಯೇ ಇದ್ದೇನೆ. ಸಮಯ ಸಾಗುತ್ತಿದ್ದಂತೆಯೇ ನಡೆದ ಘಟನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ದೇಹದ ತೂಕ ಹೆಚ್ಚಾದದ್ದು ಲಾಕ್ಡೌನ್ನಲ್ಲಿ ಮನೆಯಲ್ಲೇ ಇದ್ದುದರಿಂದ ಎಂದು ನಾನು ಭಾವಿಸಿದ್ದೆ ಎಂದು ಲವಿನಿಯಾ ಹೇಳಿದ್ದಾಳೆ.
ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಲಕ್ಷಣಗಳನ್ನು ನಾನೂ ಹೊಂದಲಿಲ್ಲ. ಯಾವುದೇ ಊಹೆಯೂ ಸಹ ಇರಲಿಲ್ಲ ಎಂದು ಲುಮಿನಿಯಾ ಹೇಳಿಕೊಂಡಿದ್ದಾರೆ.
ನನ್ನ ಹೆಂಡತಿ ತೂಕ ಹೆಚ್ಚಾಗಿದೆ ಎಂಬ ಮಾತನ್ನು ಈ ಹಿಂದೆ ಆಡಿದ್ದೆವು. ಅದನ್ನು ಬಿಟ್ಟರೆ ಗರ್ಭಾವಸ್ಥೆಯಲ್ಲಿನ ಯಾವುದೇ ಲಕ್ಷಣ ಅವಳಲ್ಲಿ ಕಂಡು ಬಂದಿರಲಿಲ್ಲ. ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಆಕೆಯ ಗಂಡ ಮಾತನಾಡಿದ್ದಾರೆ.
ಅಚ್ಚರಿ ಮೂಡಿಸುವಂತೆ ಯಾವುದೇ ಊಹೆಯೂ ಇಲ್ಲದೇ ಹೆರಿಗೆಯಾದ ಮಹಿಳೆ ಒಬ್ಬಳೇ ಅಲ್ಲ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಹೆಸರಿನ ಇನ್ನೊಬ್ಬ ಮಹಿಳೆ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ವಿಮಾನ ಹತ್ತಿ ಇಳಿಯುವ ಸ್ಥಳ ತಲುಪುವವರೆಗೆ ಮಹಿಳೆಯ ಮಡಿಲಲ್ಲಿ ಗಂಡು ಮಗುವಿತ್ತು.
ಇದನ್ನೂ ಓದಿ:
Viral Video: ಯುವತಿಯ ಸ್ಟಂಟ್ ನೋಡಿದ್ರೆ ನಿಜವಾಗಿಯೂ ಬೆರಗಾಗ್ತೀರಾ!
Viral News: ನ್ಯೂಜಿಲೆಂಡ್ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
(Viral News 23 years old women delivery in night out party)