ಹಾವಿನ ವಿಷ ಮಾನವನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ವಿಡಿಯೋ ವೈರಲ್​

|

Updated on: Mar 08, 2024 | 9:28 PM

ಈ ವೈರಲ್ ವೀಡಿಯೊದಲ್ಲಿ ಪ್ರಯೋಗವೊಂದನ್ನು ತೋರಿಸಲಾಗಿದೆ. ಈ ಪ್ರಯೋಗವು ಹಾವು ಮಾನವ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತದೆ. ಒಂದು ಹನಿ ವಿಷವು ನಿಮ್ಮ ರಕ್ತದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ವೀಡಿಯೊದಲ್ಲಿ ಕಾಣಬಹುದು.

ಹಾವಿನ ವಿಷ ಮಾನವನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ವಿಡಿಯೋ ವೈರಲ್​
Video Viral
Follow us on

ಹಾವಿನ ವಿಷ ನೇರವಾಗಿ ಮನುಷ್ಯನ ದೇಹ ಪ್ರವೇಶಿಸಿದರೆ ಪ್ರಾಣ ಕಳೆದುಕೊಳ್ಳುವುದಂತೂ ಖಂಡಿತಾ. ಹಾಗಾಗಿ ಸಾಕಷ್ಟು ಜನರಿಗೆ ಹಾವುಗಳೆಂದರೆ ಭಯ. ಹಾವು ಯಾರಿಗಾದರೂ ಕಚ್ಚಿದರೆ ಅವರ ಜೀವ ಉಳಿಸುವುದು ತುಂಬಾ ಕಷ್ಟ. ಹಾವಿನ ವಿಷ ನಮ್ಮ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಹಾವಿನ ವಿಷವು ಮಾನವನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೈರಲ್ ವೀಡಿಯೊದಲ್ಲಿ ತೋರಿಸಲಾಗಿದೆ.ಈ ವಿಡಿಯೋ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.

ಈ ವೈರಲ್ ವೀಡಿಯೊದಲ್ಲಿ ಪ್ರಯೋಗವೊಂದನ್ನು ತೋರಿಸಲಾಗಿದೆ. ಈ ಪ್ರಯೋಗವು ಹಾವು ಮಾನವ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತದೆ. ಈ ವೈರಲ್ ವೀಡಿಯೊದಲ್ಲಿ ತಜ್ಞರು ಹಾವಿನ ವಿಷವನ್ನು ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸುವುದನ್ನು ಕಾಣಬಹುದು. ಬಳಿಕ ಈ ವಿಷವನ್ನು ಇದೀಗಾಗಲೇ ಸಂಗ್ರಹಿಸಿಟ್ಟಿದ್ದ ಮಾನವ ರಕ್ತದೊಂದಿಗೆ ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಹಾವಿನ ವಿಷ ರಕ್ತದೊಂದಿಗೆ ಸೇರುತ್ತಿದ್ದಂತೆ ರಕ್ತ ಹೆಪ್ಪುಗಟ್ಟುವುದನ್ನು ಕಾಣಬಹುದು. ಒಂದು ಹನಿ ವಿಷವು ನಿಮ್ಮ ರಕ್ತದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ವೀಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ

ಈ ವೀಡಿಯೊವನ್ನು @cooltechtipz ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನೇಕ ಬಳಕೆದಾರರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರನು ವಿಡಿಯೋ ವೀಕ್ಷಿಸಲು ಭಯಾನಕವಾಗಿದೆ ಎಂದು ಬರೆದರೆ, ಇನ್ನೊಬ್ಬ ಹಾವು ಕಚ್ಚಿದಾಗ ರಕ್ತ ಹೆಪ್ಪುಗಟ್ಟುತ್ತದೆಯೇ..? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ