ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಪ್ರಾಣಿ ಪ್ರಿಯರು ಒಬ್ಬರಾದರು ಇದ್ದೇ ಇರುತ್ತಾರೆ. ಅವರು ತಾವು ಸಾಕಿದ ಪ್ರಾಣಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಬಟ್ಟೆ ತೊಡಿಸುವುದು, ವಾಕಿಂಗ್ಗೆ ಕರೆದುಕೊಂಡು ಹೋಗುವುದು. ಹೀಗೆ ಅನೇಕ ರೀತಿಯಲ್ಲಿ ತಮ್ಮ ಸಾಕು ಪ್ರಾಣಿಗಳಿಗಾಗಿ ಸಮಯ ಮೀಸಲಿಡುತ್ತಾರೆ. ಇದಕ್ಕೆ ಪೂರಕವೆಂಬ ಹಾಗೇ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವೈರಲ್ ಕ್ಲಿಪ್ ನಿಮಗೆ ನಾಯಿಗಳಿಗೆ ಹುಟ್ಟುಹಬ್ಬದ ಸಂತೋಷಕೂಟವನ್ನು ಏರ್ಪಡಿಸಿರುವದನ್ನು ತೋರಿಸುತ್ತದೆ! ಅಲ್ಲದೆ ಅವುಗಳ ಹಾವ-ಭಾವ ನಿಮ್ಮನ್ನು ಬೆರಗುಗೊಳಿಸದೇ ಇರಲಾರದು.
ಈ ವಿಡಿಯೋವನ್ನು @buitengebieden ಎನ್ನುವ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ನಲ್ಲಿ ಮೊದಲಿಗೆ ಹುಟ್ಟು ಹಬ್ಬದ ಪಾರ್ಟಿ ನಡೆಯುತ್ತಿರುವುದನ್ನು ಕಾಣಬಹುದು. ಹಾಗೇ ಕಣ್ಣರಳಿಸಿ ನೋಡಿದರೆ ಸುತ್ತಲೂ ಕುಳಿತಿರುವುದು ನಾಯಿಗಳು ಎಂದು ತಿಳಿಯುತ್ತದೆ. ಹಾಗೇ ಇವರೆಲ್ಲ ಒಟ್ಟು ಸೇರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಚರಿಸಿಕೊಳ್ಳುವುದನ್ನು ನೀವು ನೋಡಿ ಕಣ್ಣು ತುಂಬಿಕೊಳ್ಳಬಹುದು. ಇವರ ಮುಂದೆ ಇರುವ ಟೇಬಲ್ ಮೇಲೆ ಬಗೆ ಬಗೆಯ ಆಹಾರ, ಕೇಕ್ ಇಡಲಾಗಿದ್ದು, ದುಂಡು ಮೇಜಿನ ಮುಂದೆ, ನಾಯಿಗಳು ತಮ್ಮ ಕುತ್ತಿಗೆಗೆ ನ್ಯಾಪ್ಕಿನ್ಗಳನ್ನು ಕಟ್ಟಿಕೊಂಡು ಕುರ್ಚಿಗಳ ಮೇಲೆ ಕುಳಿತಿವೆ. ವಿಡಿಯೋದಲ್ಲಿ ಎಲ್ಲಾ ನಾಯಿಗಳು ಖುಷಿಯಿಂದ ಕುಳಿತಿವೆ ಎಂದು ನಿಮಗೆ ವಿಡಿಯೋವನ್ನು ನೋಡುವಾಗಲೇ ತಿಳಿಯುತ್ತದೆ. ಆ ವಿಡಿಯೋ ಮಾಡುವಾಗ ಹಿಂದಿನಿಂದ ಜನರು ಹಾಡುವುದು, ಚಪ್ಪಾಳೆ ತಟ್ಟುತ್ತಾ ತಮ್ಮ ಸಂತೋಷ ವ್ಯಕ್ತ ಪಡಿಸುತ್ತಿರುವುದನ್ನು ನೀವು ಕೇಳಬಹುದು.
ಇದನ್ನೂ ಓದಿ: ನಾಯಿಯ ಈ ಸೊಗಸಾದ ಆಟಕ್ಕೆ ನೀವು ಬೆರಗಾಗದೆ ಏರಲು ಸಾಧ್ಯವೇ ಇಲ್ಲ! ಇಲ್ಲಿದೆ ಆ ವೀಡಿಯೊ!
ಈ ಪೋಸ್ಟ್ಗೆ ಚೆಂದವಾದ ಶೀರ್ಷಿಕೆಯನ್ನೂ ಕೊಟ್ಟಿದ್ದು “ತನ್ನ ಅತ್ಯುತ್ತಮ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂತೋಷಕೂಟ” ಎಂದು ಪೋಸ್ಟ್ ಶೇರ್ ಮಾಡಿದವರು ಬರೆದುಕೊಂಡಿದ್ದಾರೆ. ಈ ಕ್ಲಿಪ್ ಅನ್ನು ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದ್ದು. ಪೋಸ್ಟ್ ಮಾಡಿದಾಗಿನಿಂದ, ಇದನ್ನು ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 3000 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್ಗಳನ್ನು ಪಡೆದಿದೆ. ಅದರಲ್ಲಿ ಕೆಲವರ ಪ್ರತಿಕ್ರಿಯೆಗಳನ್ನು ಹೀಗಿವೆ. “ನಾಯಿ ಮನುಷ್ಯನ ಅತ್ಯಂತ ನಿಷ್ಠಾವಂತ ಸ್ನೇಹಿತ, ಅವರಿಗೆ ಜನ್ಮದಿನದ ಶುಭಾಶಯಗಳು” ಎಂದು ಒಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಇನ್ನೊಬ್ಬ ಬಳಕೆದಾರರು “ಎಂತಹ ಸುಂದರವಾದ ಪಾರ್ಟಿ! ಅವೆಲ್ಲವೂ ತುಂಬಾ ಚೆನ್ನಾಗಿ ವರ್ತಿಸುವ ನಾಯಿಗಳು!” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು “ಎಲ್ಲಾ ಉತ್ತಮ ನಡವಳಿಕೆಯ ನಾಯಿಗಳು” ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: