AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಭಾನುವಾರ ಕಳೆದು ಸೋಮವಾರ ಬಂದಾಗ ನಿಮಗೂ ಹೀಗೆ ಆಗಿರಬಹುದು, ಸೃತಿ ಇರಾನಿ ಹಂಚಿಕೊಂಡ ವಿಡಿಯೊ ವೈರಲ್

ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಅದೊಂದು ಒತ್ತಡದ ದಿನ ಎಂದು ಭಾವಿಸುತ್ತೇವೆ, ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಂದು ಮೀಮ್ ಹಂಚಿಕೊಂಡಿದ್ದಾರೆ.

Video Viral: ಭಾನುವಾರ ಕಳೆದು ಸೋಮವಾರ ಬಂದಾಗ ನಿಮಗೂ ಹೀಗೆ ಆಗಿರಬಹುದು, ಸೃತಿ ಇರಾನಿ ಹಂಚಿಕೊಂಡ ವಿಡಿಯೊ ವೈರಲ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Feb 20, 2023 | 1:31 PM

Share

ಸೋಮವಾರ ಎಂದರೆ ಸಾಕು ತುಂಬಾ ಭಯನಕ ದಿನದಂತೆ ಅನಿಸುತ್ತದೆ, ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಮತ್ತೆ ಅದೇ ನಿಮ್ಮ ಕೆಲಸ, ಅದೇ ಒತ್ತಡ, ಭಾನುವಾರ ಮುಗಿದರೆ ಒಂದು ರೀತಿಯ ಸಂಕಷ್ಟ ದಿನವಾಗಿರುತ್ತದೆ. ಹೀಗೆ ಭಾನುವಾರ ಮುಗಿದು ಸೋಮವಾರ ಬಂದರೆ ಸಾಕು ಅದೊಂದು ಒತ್ತಡದ ದಿನ ಎಂದು ಭಾವಿಸುತ್ತೇವೆ, ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಂದು ಮೀಮ್ ಹಂಚಿಕೊಂಡಿದ್ದಾರೆ. ಭಾನುವಾರ ರಜೆ ಮುಗಿಸಿ ನೀವು ಸೋಮವಾರ ನಿದ್ರೆ, ಅಲಸ್ಯ, ಕೋಪ, ಒತ್ತಡ ಎಲ್ಲವೂ ಕಾಡುವುದು ಸಹಜ. ಅದಕ್ಕಾಗಿಯೆ ಈ ಸೋಮವಾರವನ್ನು ಅನೇಕರು ದ್ವೇಷಿಸುತ್ತಾರೆ, ಅದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಬ್ಬರು. ಅವರು ಸೋಮವಾರದ ಆರಂಭದ ಬಗ್ಗೆ ಅಥವಾ ದಿನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಲು, ಸಚಿವರು ತಮಾಷೆಯ ಶೀರ್ಷಿಕೆಯೊಂದಿಗೆ Instagram ನಲ್ಲಿ ಒಂದು ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ತಮ್ಮ ಸೋಮವಾರದ ಮನಸ್ಥಿತಿಯನ್ನು ಹೇಗಿರುತ್ತದೆ ಎಂಬುದನ್ನು ಹಂಚಿಕೊಂಡರೆ, ಈ ಬಗ್ಗೆ Instagram ಬಳಕೆದಾರರೂ ಕೂಡ ಕಮೆಂಟ್ ಮಾಡಿದ್ದಾರೆ.

ನೀವು ಭಾನುವಾರ ಕಳೆದು ಸೋಮವಾರ ಹೇಳುವಾಗ ಕೊ ಲೆಟ್ ಜಾ ರೇ’ ( ಸೋಮವಾರವನ್ನು ನಿನ್ನ ಜೊತೆಗೆ ತೆಗೆದುಕೊಂಡು ಹೋಗು )” ಎಂದು ಸ್ಮೃತಿ ಇರಾನಿ ಅವರು ಹೆರಿ ಫೇರಿ ಚಿತ್ರದ ತುಣುಕನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ವೀಡಿಯೊದಲ್ಲಿ, ಅಕ್ಷಯ್ ಕುಮಾರ್ ಭಾನುವಾರ, ಪರೇಶ್ ರಾವಲ್ ಸೋಮವಾರದ ಅತ್ಯಂತ ಭಯಾನಕ ದಿನ ಎಂಬಂತೆ ಪ್ರತಿನಿಧಿಸುತ್ತಾರೆ. ಅಕ್ಷಯ್ ಪರೇಶ್‌ಗೆ, “ಮೈ ಚಲಾ ಜೌಂಗಾ (ನಾನು ಹೋಗುತ್ತೇನೆ)” ಎಂದು ಹೇಳುತ್ತಾರೆ. ಇದಕ್ಕೆ ಪರೇಶ್ ರಾವಲ್ ಅವರು, “ಜಾ (ಗೋ)” ಎಂದು ಉತ್ತರಿಸುತ್ತಾರೆ. ಅಕ್ಷಯ್ ತಾನು ಹೋಗುತ್ತೇನೆ ಎಂದು ಪುನರಾವರ್ತಿಸುತ್ತಲೇ ಇರುತ್ತಾರೆ ಮತ್ತು ರಾವಲ್ ಕ್ಲಿಪ್ ಉದ್ದಕ್ಕೂ “ಜಾ (ಗೋ)” ಎಂದು ಹೇಳುತ್ತಾರೆ.

ಇದನ್ನೂ ಓದಿ: Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ

ಕೆಲವು ಗಂಟೆಗಳ ಹಿಂದೆ ಸ್ಮೃತಿ ಇರಾನಿ ಹಂಚಿಕೊಂಡ ಈ ವಿಡಿಯೊ 1.9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 12,800 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದ್ದಾರೆ. ಅಥ್ಲೀಟ್ ರೀಟಾ ಜೈರತ್ ಅವರು ಕಾಮೆಂಟ್ ಮಾಡಿದ್ದು “ಮಿಸ್ಟರ್ ಸೋಮವಾರದ ‘ಕಡ್-ಕಾರ್-ಲೆಸ್’ ಮನೋಭಾವವನ್ನು ಪ್ರೀತಿಸಿ!” ಇದರ ಜೊತೆಗೆ ನಗುವ ಎಮೋಟಿಕಾನ್‌ಗಳನ್ನು ಕೂಡ ಕಮೆಂಟ್ ಮಾಡಿದ್ದಾರೆ. ಇದು ಪ್ರತಿದಿನ ನಮ್ಮ ಮನಸ್ಸಿನಲ್ಲಿಂಟು ಮಾಡುವ ಭಾವನೆ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ನಿಜ ಎಂದು ಹೇಳಿದ್ದಾರೆ. ನಾವು ನಿಜವಾಗಿಯೂ ನಿಮ್ಮ ಹಾಸ್ಯಪ್ರಜ್ಞೆಯನ್ನು ಪ್ರೀತಿಸುತ್ತೇವೆ ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್​ ಮಾಡಿದ್ದಾರೆ.

Published On - 1:31 pm, Mon, 20 February 23

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್