Dog Lover: ಸಾಕಿದ ನಾಯಿಗಳ ಹಸಿವು ಹೊತ್ತುಹೊತ್ತಿಗೆ ತಣಿಯುತ್ತದೆ. ಆದರೆ ಬೀದಿನಾಯಿಗಳದ್ದು (Stray Dogs) ? ಎಲ್ಲಿ ನೀರು ಸಿಗುತ್ತದೋ ಅಲ್ಲಿ ಕುಡಿಯಬೇಕು, ರಸ್ತೆಯಲ್ಲಿ ಏನಾದರೂ ಕಣ್ಣಿಗೆ ಬಿದ್ದರೆ ತಿನ್ನಬೇಕು. ಜಾಗ ಸಿಕ್ಕಲ್ಲಿ ಮಲಗಬೇಕು. ಹೇಳಿಕೇಳಿ ಬೀದಿನಾಯಿ, ಕಂಡಲ್ಲೆಲ್ಲ ಓಡಿಸುವವರೇ, ತಿನ್ನಲು, ಕುಡಿಯಲು ಏನಾದರೂ ಸಿಕ್ಕೀತೆಂದು ಸುಮ್ಮನೇ ಅವುಗಳು ಮೂಸಿದರೂ ಸರಿ, ಎಲ್ಲಿಂದಲೋ ಕಲ್ಲುಗಳು ಬಂದು ಬೀಳುತ್ತವೆ. ಇಂಥ ಅನಿಶ್ಚಿತತೆಯ ನಡುವೆಯೇ ಬೀದಿನಾಯಿಗಳು ರೊಚ್ಚಿಗೇಳುವುದು, ಕಚ್ಚುವುದು, ಬೆನ್ನಟ್ಟುವುದು ಇನ್ನೂ ಏನೆಲ್ಲವೂ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ನಾಯಿ ನಲ್ಲಿಯ ಬಳಿ ನೀರು ಕುಡಿಯಲು ಹವಣಿಸುತ್ತಿದೆ. ಇದನ್ನು ಕಂಡ ಮಹಿಳೆಯೊಬ್ಬರು ನಲ್ಲಿಯನ್ನು ತಿರುಗಿಸಿ ನೀರು ಕುಡಿಲು ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ : Viral Video: ಬಿಹಾರ; ವಿದೇಶದಿಂದ ಮರಳಿದ ಗಂಡ ತಲಾಖ್ ನೀಡಿದ, ಹೆಂಡತಿ ಬೀದಿರಂಪಕ್ಕಿಳಿದಳು
ಬೀದಿನಾಯಿಯ ಬಗ್ಗೆ ಅನುಕಂಪ ತೋರಿದ ಈ ಮಹಿಳೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ಅನ್ನು ಗಿವ್ ಇಂಡಿಯಾ ಎಂಬ ಇನ್ಸ್ಟಾ ಪುಟದಿಂದ ಹಂಚಿಕೊಳ್ಳಲಾಗಿದೆ. ಆ. 2ರಂದು ಹಂಚಿಕೊಂಡ ಈ ವಿಡಿಯೋ ಅನ್ನು 16,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ.
ಪ್ರತಿಯೊಬ್ಬರೂ ಉಡುಗೊರೆಯಂತೆ ನೀಡಲು ಸಾಧ್ಯವಾಗುವುದೆಂದರೆ ಕರುಣೆ, ಸಹಾನುಭೂತಿ, ದಯೆ ಎಂದಿದ್ದಾರೆ ಒಬ್ಬರು. ನೀವು ಮಾಡುವ ಕೆಲಸ ಹಣ ಕೊಟ್ಟು ಕಲಿಸಿದರೂ ಬರುವಂಥದ್ದಲ್ಲ, ನಿಮ್ಮಂಥವರ ಸಂತತಿ ಹೆಚ್ಚಲಿ ಎಂದಿದ್ದಾರೆ ಇನ್ನೊಬ್ಬರು. ನಾಯಿಗೆ ಸಹಾಯ ಮಾಡಿದ್ದಕ್ಕಾಗಿ ನಮ್ಮೆಲ್ಲರ ಪರವಾಗಿ ನಿಮಗೆ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್
ಸಹಾನುಭೂತಿ ಎನ್ನುವುದು ಎಳವೆಯಿಂದಲೇ ಬರುವಂಥದ್ದು. ಪೂರಕ ಪರಿಸರವನ್ನು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಕಲ್ಪಿಸಿ ಕೊಡಬೇಕು. ಇಲ್ಲವಾದಲ್ಲಿ ಸ್ವಾರ್ಥತನ ಬಲುಬೇಗನೇ ಮೈಗೂಡಿಬಿಡುತ್ತದೆ. ಇನ್ನೊಬ್ಬರ ನೋವು ದುಃಖ ಕೂಡ ಅರ್ಥ ಮಾಡಿಕೊಳ್ಳದಷ್ಟು ಕಾಠಿಣ್ಯ ಬೆಳೆದುಬಿಡುತ್ತದೆ. ಹಾಗಾಗಿ ನಿತ್ಯವೂ ಮನೆಯಂಗಳದಲ್ಲಿ ಅಥವಾ ಬೀದಿಬಳಿ ಅನ್ನಾಹಾರ ನೀಡುವ ಕ್ರಮವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಅನಾಥರಿಗೆ ಅಥವಾ ಹಸಿವು ಎಂದವರಿಗೆ ಉಪಚರಿಸುವುದನ್ನು ಕಲಿಸಿ ಕೊಡಬೇಕು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:39 pm, Fri, 25 August 23