America: ಅನೇಕ ಕಾರಣಗಳಿಂದ ವಿಮಾನಗಳು ರದ್ದಾಗುತ್ತವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಮಾಡುತ್ತಾರೆ. ಆದರೆ ಇದೀಗ ಪೈಲಟ್ ಪ್ರಯಾಣಿಕರಿಗಾಗಿ ವಿಮಾನವನ್ನೇ ಯೂಟರ್ನ್ ಮಾಡಿದ ಅಪರೂಪದ ಘಟನೆ ನಡೆದಿದೆ. ವಿಮಾನದಲ್ಲಿರುವ ಪ್ರಯಾಣಿಕರೊಬ್ಬರು ಅತಿಸಾರದಿಂದ (Diarrhea) ಬಳಲುತ್ತಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಡೆಲ್ಟಾ ಏರ್ಲೈನ್ಸ್ನ ಪೈಲಟ್ ವಿಮಾನವನ್ನು ಯೂ ಟರ್ನ್ ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲ, ಇದೊಂದು ಜೈವಿಕ ಅಪಾಯ ಎಂದೂ ಹೇಳಿದ್ದಾರೆ. ಜಾರ್ಜಿಯಾದ ಅಟ್ಲಾಂಟಾದಿಂದ ಸ್ಪೇನ್‌ನ ಬಾರ್ಸಿಲೋನಾ ತಲುಪಲು ಎಂಟು ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಆದರೆ ಮಾರ್ಗಮಧ್ಯೆ ಸಮಸ್ಯೆ ಉದ್ಭವಿಸಿದ್ದರಿಂದ ಪೈಲಟ್ ಈ ನಿರ್ಧಾರ ತೆಗೆದುಕೊಂಡು ಒಟ್ಟಾರೆ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ್ದಾರೆ.
ಇದನ್ನೂ ಓದಿ : Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್ ವೈರಲ್
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಈ ವಿಮಾನವು ಟೇಕ್ಆಫ್ ಆದ ಎರಡು ಗಂಟೆಗಳ ನಂತರ ಯೂಟೂರ್ನ್ ತೆಗೆದುಕೊಂಡಿದೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಪೈಲಟ್ ಫ್ಲೈಟ್ ಡೆಕ್‌ನಿಂದ ಏರ್ ಟ್ರಾಫಿಕ್ ಕಂಟ್ರೋಲ್ಗೆ ತಲುಪಿಸುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
A Delta Airlines Airbus A350 turned around back to Atlanta Friday night because of diarrhea throughout the airplane from a passenger and it’s a biohazard. 👀🥴
The FAA flight strip for DL194 was posted to Reddit (📷xStang05x) Also a passenger posted here asking why her son’s… pic.twitter.com/VWbkB47wF1
— Thenewarea51 (@thenewarea51) September 3, 2023
ವಿಮಾನವು ಅಟ್ಲಾಂಟಾಗೆ ಹಿಂದಿರುಗಿದ ನಂತರ ಎಲ್ಲ ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ಬಾರ್ಸಿಲೋನಾಗೆ ತಲುಪಿಸಲಾಯಿತು. ಅವರೆಲ್ಲರೂ ಸುಮಾರು ಎಂಟು ಗಂಟೆ ತಡವಾಗಿ ಬಾರ್ಸಿಲೋನಾ ತಲುಪಿದರು. ತುರ್ತು ವೈದ್ಯಕೀಯ ಕಾರಣಗಳಿಗಾಗಿ ಈ ತೀರ್ಮಾನ ಕೈಗೊಳ್ಳಬೇಕಾಯಿತೆಂದು ಏರ್ಲೈನ್ಸ್ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಂತರ ವಿಮಾನವನ್ನು ಶುಚಿಗೊಳಿಸಲಾಗಿದೆ. ಆದರೆ, ಅತಿಸಾರದಿಂದ ಬಳಲುತ್ತಿದ್ದ ಪ್ರಯಾಣಿಕರ ವಿವರವನ್ನು ಅವರು ಗೌಪ್ಯವಾಗಿರಿಸಿದ್ದಾರೆ. ಉಳಿದ ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ಕ್ಷಮೆ ಕೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:17 pm, Tue, 5 September 23