Bike Accident: ಬೈಕ್ಗೆ ಸೈಡ್ ಮಿರರ್ ಇಲ್ಲ, ಇನ್ನೇನು ನಿರೀಕ್ಷಿಸಲು ಸಾಧ್ಯ? ಸೈಡ್ ಮಿರರ್ ಹೆಣ್ಣುಮಕ್ಕಳಿಗೆ ಮಾತ್ರ, ಗಂಡುಮಕ್ಕಳಿಗಲ್ಲ ಎಂದು ನನ್ನ ಸ್ನೇಹಿತನೊಬ್ಬರ ಹೇಳಿದ್ದು ನೆನಪಾಗುತ್ತಿದೆ. ಇದು ದಂಡನಾರ್ಹ ಅಪರಾಧ. ಹೆದ್ದಾರಿಯಲ್ಲಿ ಬೈಕ್ಗಳನ್ನು ಸಾಮಾನ್ಯವಾಗಿ ಹೀಗೆಯೇ ತಿರುಗಿಸಿಕೊಳ್ಳುತ್ತಾರೆ, ಆದ್ದರಿಂದಲೇ ಹೆಚ್ಚು ಅಪಘಾತಗಳಾಗುತ್ತವೆ. ಹೈಸ್ಪೀಡ್ ಮತ್ತು ಎಕ್ಸ್ಪ್ರೆಸ್ವೇಯಲ್ಲಿ ಈ ಮೂರ್ಖ ಅದು ಹೇಗೆ ಹೀಗೆ ತನ್ನ ದಾರಿಯನ್ನು ಬದಲಾಯಿಸಿದ? ಓವರ್ಟೇಕ್ ಮಾಡಲು ಕೂಡ ನಿಯಮಗಳಿವೆಯಲ್ಲವೆ. ಇದು ಮಹಾಪರಾಧ, ಇವನಿಗೆ ಶಿಕ್ಷೆಯಾಗಬೇಕು. ಎಲ್ಲ ಸರಿ ಆ ಇನ್ನೊಬ್ಬ ಬೈಕ್ ಸವಾರನ (Biker) ಕಥೆ ಏನಾಯಿತು? ಈ ಘಟನೆ ನಡೆದಿದ್ದು ಎಲ್ಲಿ? ಅಂತೆಲ್ಲ ನೆಟ್ಟಿಗರು ರೆಡ್ಡಿಟ್ನ ವಿಡಿಯೋದಡಿ ಚರ್ಚಿಸಿದ್ದಾರೆ.
ಇದನ್ನೂ ಓದಿ : Viral Video: ‘ಆ್ಯಂಬುಲೆನ್ಸ್ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್
6 ಗಂಟೆಗಳ ಹಿಂದೆ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 400 ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಅಪಘಾತ ಭಯಂಕರವಾಗಿದೆ. ಬಹುಶಃ ಆ ಇನ್ನೊಬ್ಬ ಬೈಕ್ ಸವಾರ ನಾನಾಗಿದ್ದರೆ ಖಂಡಿತ ಈ ಭೂಮಿಯ ಮೇಲೆ ಇರುತ್ತಿರಲೇ ಇಲ್ಲ ಎಂದಿದ್ದಾರೆ ಒಬ್ಬರು.
Sad that other guy had to pay the price (might have got injured bad) for this man’s stupidity.
byu/Construction1ne inindianbikes
ದ್ವಿಚಕ್ರವಾಹನಗಳಿಂದ ಎರಡೂ ಕನ್ನಡಿಗಳನ್ನು ತೆಗೆಯುವ ಜನರನ್ನು ನೋಡಿ ನೋಡಿ ನಾನಂತೂ ಸುಸ್ತಾಗಿ ಹೋಗಿದ್ದೇನೆ, ಏನು ಹುಚ್ಚುತನವೋ? ಎಂದಿದ್ದಾರೆ ಒಬ್ಬರು. ಹೀಗೆ ಮಾಡುವ ಜನರು ತಮ್ಮ ಜೀವವನ್ನು ತಾವೇ ಕಳೆದುಕೊಳ್ಳುವುದು ಹೆಚ್ಚು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ
ಈ ವಿಡಿಯೋದಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯ ತಂದಿದ್ದಾನಲ್ಲ ಈ ಬೈಕ್ ಸವಾರ ಇದಕ್ಕೇನು ಹೇಳುತ್ತೀರಿ? ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬ ಬೈಕ್ ಸವಾರ ಖಂಡಿತ ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದಿದ್ಧಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ