Viral Optical Illusion: ಬೆಕ್ಕುಗಳ ನಡುವೆ ನಾಯಿಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಹುಡುಕಿರಿ

Puzzle; ಇಷ್ಟೊಂದು ಬೆಕ್ಕುಗಳು ಮಿಸುಕಾಡದೇ ಸಾಲಾಗಿ ಕುಳಿತಿವೆ. ಈ ಸಾಲುಬೆಕ್ಕುಗಳ ಮಧ್ಯೆ ಒಂದು ನಾಯಿಯೂ ಕುಳಿತಿದೆ. ಮೊದಲ ನೋಟಕ್ಕೆ ನಿಮಗೆ ಆ ನಾಯಿ ಸಿಗಬಹುದೆ? ನಿಮಗೆ ಕೊಟ್ಟಿರುವ ಸಮಯ ಕೇವಲ 5 ಸೆಕೆಂಡುಗಳು. ಏಕೆಂದರೆ ನಿಮ್ಮ ಕಣ್ಣುಗಳು ತುಂಬಾ ಚುರುಕು ಎಂಬ ಸಂಗತಿ ನಮಗೆ ಗೊತ್ತು. ಹಾಗಾಗಿಯೇ ಅತ್ಯಂತ ಅಲ್ಪಾವಧಿಯನ್ನು ಕೊಟ್ಟಿದ್ದೇವೆ. ನೋಡಿ ಪ್ರಯತ್ನಿಸಿ.

Viral Optical Illusion: ಬೆಕ್ಕುಗಳ ನಡುವೆ ನಾಯಿಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಹುಡುಕಿರಿ
ಬೆಕ್ಕುಗಳ ರಾಶಿಯಲ್ಲಿ ನಾಯಿಯೊಂದು ಅಡಗಿದೆ, ಹುಡುಕುವಿರಾ?

Updated on: Oct 06, 2023 | 1:01 PM

Optical Illusion: ಈವತ್ತೊಂದು ದಿನ ಕೆಲಸ ಮಾಡಿದರೆ ಮುಗಿಯಿತು, ವಾರಾಂತ್ಯ ನಿಮ್ಮನ್ನು ತೋಳುಚಾಚಿ ಕರೆದುಕೊಳ್ಳುತ್ತದೆ. ಉಳಿದ ಇನ್ನರ್ಧ ದಿನ ಕೆಲಸ ಮಾಡಲು ಆಲಸ್ಯ ಈಗಾಗಲೇ ದಾಂಗುಡಿ ಇಟ್ಟಿದೆ ಹೌದಲ್ಲವೆ? ಹಾಗಿದ್ದರೆ ಇದನ್ನು ಓಡಿಸಲು ನಮ್ಮ ಬಳಿ ಒಂದು ಉಪಾಯವಿದೆ. ನಿಮ್ಮ 5 ಸೆಕೆಂಡುಗಳ ಗಮನವನ್ನು ಇಲ್ಲಿರುವ ಚಿತ್ರಕ್ಕೆ ಕೊಟ್ಟರೆ ಸಾಕು. ಇಲ್ಲಿರುವ ಬೆಕ್ಕುಗಳ ರಾಶಿಯಲ್ಲಿ (Cat) ಒಂದು ನಾಯಿ ಅಡಗಿದೆ. ಅದನ್ನು ನಿಮ್ಮ ಚುರುಕಾದ ಕಣ್ಣುಗಳು ಪತ್ತೆ ಹಚ್ಚುತ್ತವೆ ಎಂಬ ನಿರೀಕ್ಷೆ ನಮ್ಮದು. ಏನಂತೀರಿ?

ಇದನ್ನೂ ಓದಿ : Viral Video: ‘9 ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ’

ನೆಟ್ಟಿಗರನೇಕರು ನಾಯಿಯನ್ನು ಹುಡುಕವಲ್ಲಿ ವಿಫಲರಾಗಿದ್ದಾರೆ. ಇನ್ನೂ ಕೆಲವರು ಹಾಂ! ನನಗೆ ಕಂಡಿತು ಎಂದಿದ್ದಾರೆ. ಇಂಥ ಚಿತ್ರಗಳು ನಿಮ್ಮ ಬುದ್ಧಿ ಮತ್ತು ಮೆದುಳಿನ ನಡುವೆ ಕಸರತ್ತನ್ನು ಹುಟ್ಟುಹಾಕುತ್ತವೆ. ಇದೀಗ ನಿಮಗೆ ಕೊಟ್ಟಿರುವ ಕಾಲಾವಕಾಶ 5 ಸೆಕೆಂಡುಗಳು ಮಾತ್ರ. ಶುರುಮಾಡಿ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬೆಕ್ಕುಗಳ ರಾಶಿಯ ನಡುವೆ ಅಡಿಗಿರುವ ನಾಯಿಯನ್ನು ಪತ್ತೆಹಚ್ಚಿ

5 ಸೆಕೆಂಡುಗಳಲ್ಲಿ ನಾಯಿಯನ್ನ ಹುಡುಕಿ

ನೀವು ನಾಯಿಯನ್ನು ಹುಡುಕಲು ಸಾಧ್ಯವಾಯಿತೆ? ಇಲ್ಲವಾದರೆ ಇನ್ನೂ ಐದು ಸೆಕೆಂಡುಗಳನ್ನು ತೆಗೆದುಕೊಳ್ಳಿ. ಆದರೂ ನಿಮಗೆ ಸಿಗಲಿಲ್ಲವೆ? ಹಾಗಿದ್ದರೆ ನಮ್ಮ ಸಹಾಯ ತೆಗೆದುಕೊಳ್ಳಿ. ಜಾಗರೂಕತೆಯಿಂದ ಈ ಚಿತ್ರವನ್ನು ಗಮನಿಸಿ. ಕಂದು ಬಣ್ಣದ ಕಿವಿಗಳನ್ನು ಹೊಂದಿರುವ ನಾಯಿಯು ಬಲಭಾಗದಲ್ಲಿ ಕೆಳಗೆ ಅಡಗಿಕೊಂಡು ಕುಳಿತಿದೆ. ಕಂಡಿತೇ?

ನಾಯಿ ಇಲ್ಲಿದೆ!

ನಾಯಿ ಇಲ್ಲಿದೆ!
ಈ ನಾಯಿಮರಿ ನಿಮಗೆ ಸಾಕಷ್ಟು ಕಾಡಿಸಿತಲ್ಲ!? ಆದರೆ ಮೇಲಿನ ಚಿತ್ರವನ್ನು ನೋಡಿದ ಮೇಲಷ್ಟೇ ನಿಮಗೆ, ಆಹಾ ಇದು ಇಲ್ಲಿದೆಯೋ, ಯಾಕೆ ಕಾಣಲಿಲ್ಲ ಎಂದು ಅನ್ನಿಸಿರಲು ಸಾಕು.

ನೀವೇನಂತೀರಿ?

(ಸೌಜನ್ಯ: ಹಿಂದೂಸ್ತಾನ್ ಟೈಮ್ಸ್​)

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 12:58 pm, Fri, 6 October 23