
ಆಟೋ ರಿಕ್ಷಾ, ಕಾರು ಹಾಗೂ ವಿವಿಧ ವಾಹನಗಳ ಹಿಂಬದಿಯಲ್ಲಿ ಬರೆದಿರುವ ಸಾಲುಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಸಾಲು ನೆಟ್ಟಿಗರ ಗಮನ ಸೆಳೆದಿದೆ. “ಅಂತರವನ್ನು ಕಾಯ್ದುಕೊಳ್ಳಿ, EMI ಇನ್ನೂ ಬಾಕಿ ಇದೆ” ಎಂದು ಸ್ವಿಫ್ಟ್ ಕಾರೊಂದರ ಹಿಂಭಾಗದಲ್ಲಿ ಬರೆಯಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
@HasnaMatBhai ಎಂಬ ಟ್ವಿಟರ್ ಖಾತೆಯಲ್ಲಿ ಈ ಕಾರಿನ ಫೋಟೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ನವೆಂಬರ್ 04ರಂದು ಹಂಚಿಕೊಂಡಿರುವ ಪೋಸ್ಟ್ ಕೇವಲ ಮೂರು ದಿನದಲ್ಲಿ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಅಮ್ಮನ ಜೊತೆ ಸ್ಕೂಲ್ಗೆ ಹೋಗುವಾಗ ಸ್ಕೂಟಿಯಲ್ಲೇ ಕುಳಿತು ಹೋಮ್ವರ್ಕ್ ಮಾಡಿದ ಬಾಲಕ; ವಿಡಿಯೋ ವೈರಲ್
ಕಾರಿನ ಹಿಂಭಾಗದಲ್ಲಿ ‘Keep Distance EMI is pending!’ ಎಂದು ಬರೆದಿರುವುದನ್ನು ಕಾಣಬಹುದು. ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ನನ್ನ ಕಾರು ಇಎಂಐನಲ್ಲಿ ಓಡುತ್ತಿದೆ ಎಂದು ಬಹಿರಂಗವಾಗಿ ಮಾಲೀಕ ಹೇಳುತ್ತಿರುವುದು ಖಚಿತವಾಗಿದೆ. “ಕಾರಿಗೆ ವಿಮೆ ಮಾಡಿಸಿ, ಯಾವುದೇ ಟೆನ್ಷನ್ ಇರುವುದಿಲ್ಲ” ಎಂದು ಸಾಕಷ್ಟು ನೆಟ್ಟಿಗರು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Thu, 7 November 24