Gender Reveal Party: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಮ್ಮ ಕುಟುಂಬ ಮತ್ತು ಆಪ್ತೇಷ್ಟರ ಎದುರು ದಂಪತಿ ಬಹಿರಂಗಗೊಳಿಸುವ ಈ ಜೆಂಡರ್ ರಿವೀಲ್ ಪಾರ್ಟಿ ವಿದೇಶಗಳಲ್ಲಿ ದೊಡ್ಡ ಸಂಭ್ರಮಾಚರಣೆಯಲ್ಲಿ ನಡೆಯುತ್ತದೆ. ಅದಕ್ಕಾಗಿ ಥೀಮ್ ಆಧಾರಿತ ವೇದಿಕೆ ಅಲಂಕಾರವಂತೂ ಸಾಮಾನ್ಯ. ಆದರೆ ಈಗೀಗ ಸಾಹಸಮಯವಾಗಿ ಇವುಗಳನ್ನು ಆಚರಿಸುವ ಹುಚ್ಚು ಜನರಿಗೆ ಹೆಚ್ಚುತ್ತಿದೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ. ದಂಪತಿ ಅತಿಥಿಗಳೆದುರು ಜೆಂಡರ್ ರಿವೀಲ್ ಪಾರ್ಟಿ ಆಚರಣೆಗೆ ಸಿದ್ಧವಾಗಿದ್ದಾರೆ. ಈ ಸಂಭ್ರಮಾಚರಣೆಯ ಭಾಗವಾಗಿರುವ ಸ್ಟಂಟ್ ವಿಮಾನವೊಂದು (Stunt Flight) ಪತನಗೊಂಡು ಪೈಲಟ್ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ.
ಇದನ್ನೂ ಓದಿ : Viral Video: ಕ್ಯಾನ್ಸರ್; ಹೆಂಡತಿಯನ್ನು ಬೆಂಬಲಿಸಲು ತಲೆ ಬೋಳಿಸಿಕೊಂಡ ಗಂಡ
ಮೆಕ್ಸಿಕೋದ ಸ್ಯಾನ್ ಪೆಡ್ರೋದಲ್ಲಿ ಈ ದುರ್ಘಟನೆ ನಡೆದಿದೆ. ಪಾರ್ಟಿ ವೇಳೆ ನೆರೆದ ಅತಿಥಿಗಳೆದುರೇ ಸ್ಟಂಟ್ ವಿಮಾನವೊಂದು ಪತನಗೊಂಡ ಪರಿಣಾಮ 32 ವರ್ಷದ ಲೂಯೀಸ್ ಏಂಜೆಲ್ ಎಂಬ ಪೈಲಟ್ ಅಸುನೀಗಿದ್ದಾನೆ. ದುರಂತಕ್ಕೀಡಾದ ವಿಮಾನದ ಅವಶೇಷಗಳಡಿ ಸಿಲುಕಿದ್ದ ಪೈಲಟ್ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ವಿಫಲವಾಗಿ ಸಾವನ್ನಪ್ಪಿದ.
Pilot killed after his Piper PA-25 left wing failed at a gender reveal party in the town of San Pedro, Mexico. pic.twitter.com/6JILK7fsGm
— Breaking Aviation News & Videos (@aviationbrk) September 3, 2023
ಗುಲಾಬಿವರ್ಣವು ಹೆಣ್ಣುಮಗುವಿನ ಆಗಮನವನ್ನು ಸೂಚಿಸುತ್ತದೆ. ನೀಲಿಬಣ್ಣವು ಗಂಡುಮಗುವಿನ ಆಗಮನವನ್ನು ಸೂಚಿಸುತ್ತದೆ. ಆ ಪ್ರಕಾರ Piper PA-25-235 Pawnee ವಿಮಾನವು ಆಕಾಶದಲ್ಲಿ ಗುಲಾಬಿಹೊಗೆಯನ್ನು ಹೊಮ್ಮಿಸುತ್ತ ಹುಟ್ಟುವ ಮಗುವಿನ ಲಿಂಗವನ್ನು ಬಹಿರಂಪಡಿಸಿತು. ಆದರೆ ಕೆಲ ಕ್ಷಣದಲ್ಲಿಯೇ ವಿಮಾನದ ಎಡರೆಕ್ಕೆಯಲ್ಲಿ ಏನೋ ತೊಂದರೆಯುಂಟಾಗಿ ವಿಮಾನವು ಪತನಗೊಂಡಿತು.
ಇದನ್ನೂ ಓದಿ : Viral Video: ನಿಮ್ಮಿಷ್ಟದ ಭಾರತೀಯ ಸಿನೆಮಾ ನೃತ್ಯವನ್ನು ಕಲಿಸುತ್ತೀರಾ? ಬೆಲ್ಜಿಯಮ್ ವ್ಯಕ್ತಿ ಇವರನ್ನೆಲ್ಲಾ ಕೇಳಿದಾಗ
ನೆಟ್ಟಿಗರು ಇಂಥ ಪಾರ್ಟಿಗಳ ವೈಭವ, ಸಾಹಸ, ಸಂಭ್ರಮಾಚರಣೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಇನ್ನಾದರೂ ಜನರು ಇಂಥ ಹುಚ್ಚಾಟಗಳನ್ನು ನಡೆಸುವುದನ್ನು ಬಿಡಬೇಕು ಎಂದು ಹೇಳುತ್ತಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ