Sea: ಅಲಸ್ಕನ್ (Alaskan) ಸಮುದ್ರದಾಳದಲ್ಲಿ ಈ ಬಂಗಾರದ ಮೊಟ್ಟೆ (Golden Egg) ಪತ್ತೆಯಾಗಿದೆ. ಗುಮ್ಮಟದ ಆಕಾರದಲ್ಲಿರುವ ಈ ಚಿನ್ನದ ಮೊಟ್ಟೆಯು 4 ಇಂಚು ವ್ಯಾಸವನ್ನುಹೊಂದಿದೆ. ಈ ನಿಗೂಢ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ NOAA ಸಂಶೋಧಕರು ಗೊಂದಲಕ್ಕೆ ಈಡಾಗಿದ್ದಾರೆ. ಇವರು ಅಲಸ್ಕನ್ ಸಮುದ್ರ ಕೊಲ್ಲಿಯ ಬಳಿ ಡೈವಿಂಗ್ ಮಾಡುತ್ತಿರುವ ಹಳದಿ ವಸ್ತುವೊಂದು ಇವರ ಕಣ್ಣಿಗೆ ಬಿದ್ದಿತು. ಆರಂಭದಲ್ಲಿ ಇದನ್ನು ಹಳದಿ ಟೋಪಿ ಎಂದು ಕರೆದರು. ನಂತರ ಬಂಗಾರದ ಮೊಟ್ಟೆ ಎಂದು ಕರೆದರು. ಸಮುದ್ರದಾಳದಲ್ಲಿ ಸಿಕ್ಕ ಈ ನಿಗೂಢ ವಸ್ತುವಿನ ಬಗ್ಗೆ NOAA ತನ್ನ ಬ್ಲಾಗ್ನಲ್ಲಿ ಫೋಟೋ ಮತ್ತು ವಿವರವನ್ನು ಹಂಚಿಕೊಂಡಿದೆ.
ಇದನ್ನೂ ಓದಿ : Viral Video: 9 ತಿಂಗಳ ನಂತರ ಮಗಳು ವಿದೇಶದಿಂದ ಮನೆಗೆ ಬಂದಾಗ ಅಪ್ಪನ ಸಂತಸ
ಸಮುದ್ರದಾಳದೊಳಗೆ ಪತ್ತೆಯಾದ ಈ ಚಿನ್ನದ ಮೊಟ್ಟೆಯು ಬಿಳಿ ಸ್ಪಂಜುಗಳ ನಡುವೆ ನಯವಾದ ಚಿನ್ನದ ಗುಮ್ಮಟದ ಆಕಾರದಲ್ಲಿ ಇತ್ತು. 10 ಸೆಂ. ಮೀ (4 ಇಂಚುಗಳು) ವ್ಯಾಸ ಹೊಂದಿರುವ ಇದು ಬಂಡೆಯೊಂದಕ್ಕೆ ಬಿಗಿಯಾಗಿ ಅಂಟಿಕೊಂಡಿತ್ತು. ಎಂದು ಬ್ಲಾಗ್ನಲ್ಲಿ ಉಲ್ಲೇಖಿಸಲಾಗಿದೆ.
ಸಂಶೋಧಕ ಸ್ಯಾಮ್ ಕ್ಯಾಂಡಿಯೋ, ‘ಸಾಗರ ನಿಜಕ್ಕೂ ಎಷ್ಟೊಂದು ಕೌತುಕಗಳನ್ನು ಹುದುಗಿಸಿಕೊಂಡಿದೆ. ಈ ಬಂಗಾರದ ಮೊಟ್ಟೆಯನ್ನು ನಾವು ಹಡಗಿನೊಳಗೆ ತಂದೆವು. ಈಗಲೂ ಇದು ಜೈವಿಕ ಮೊಟ್ಟೆ ಹೌದೋ ಅಲ್ಲವೋ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಮತ್ತಷ್ಟು ಪರಿಣತ ವಿಜ್ಞಾನಿಗಳ ಸಮೂಹದೊಂದಿಗೆ ಮತ್ತು ಅವಶ್ಯಕ ಸಾಧನೋಪಕರಣಗಳ ಸಹಾಯದಿಂದ ಸಂಶೋಧನೆ ನಡೆಸಬೇಕಿದೆ’ ಎಂದಿದ್ದಾರೆ.
ಈ ಮೊಟ್ಟೆಯ ಚಿತ್ರವನ್ನು ನೋಡಿದ ನೆಟ್ಟಿಗರು, ಇದು ತುಂಬಾ ಆಸಕ್ತಿದಾಯಕವಾಗಿದೆ, ಇದು ಹೇಗೆ ತಯಾರಾಗಿದೆ? ಇದು ಜೈವಿಕವೇ, ಯಾವ ಪ್ರಾಣಿಯದು? ಎಂದು ಕೇಳಿದ್ದಾರೆ ಅನೇಕರು. ಸಂಶೋಧಕರಿಂದ ಮಾಹಿತಿಯನ್ನು ಪಡೆಯಲು ಉತ್ಸುಕರಾಗಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು
ಈ ಮೊಟ್ಟೆ ತಯಾರಾಗಲು ಯಾವ ರೀತಿ ರಾಸಾಯನಿಕ ಪ್ರಕ್ರಿಯೆ ನಡೆದಿದೆ? ಎಂದು ಕೇಳಿದ್ದಾರೆ ಒಂದಿಷ್ಟು ಜನ. ಇದು ಯಾವ ಜೀವಿಯ ಮೊಟ್ಟೆ? ಎಂದಿದ್ದಾರೆ ಮತ್ತಷ್ಟು ಜನ. ಇದು ಯಾವುದಾದರೂ ಯಂತ್ರದ ಅವಶೇಷವೇ? ಎಂದಿದ್ದಾರೆ ಇನ್ನೂ ಕೆಲವರು.
ಈ ಫೋಟೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ