Viral Video: ಅದೃಷ್ಟವೆಂದರೆ ಇದೇ ಇರಬೇಕು; ಪವಾಡಸದೃಶ್ಯವಾಗಿ ಬಚಾವ್ ಆದ ಮಹಿಳೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತ ಪ್ರಕರಣಗಳು 2020 ರಲ್ಲಿ 3,54,796 ರಿಂದ 2021 ರಲ್ಲಿ 4,03,116 ಕ್ಕೆ ಏರಿದೆ.

ಹೊಸದಿಲ್ಲಿ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋಗೆ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದು ಮಹಿಳೆಯೊಬ್ಬರು ಪವಾಡಸದೃಶ್ಯವೆಂಬಂತೆ ಬಚಾವ್ ಆಗಿರುವಂತಹ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋ ನಜ್ಜುಗುಜ್ಜಾಗಿ ಹೋಗಿದೆ. ಸದ್ಯ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಹಿಳೆ ಖಾಲಿ ರಸ್ತೆಯನ್ನು ದಾಟುತ್ತಿದ್ದು, ಇನ್ನೊಂದು ಬದಿಯಲ್ಲಿ ಚಾಲಕ ಆಟೋವನ್ನು ನಿಲ್ಲಿಸಿದ್ದಾನೆ. ಏಕಾಏಕಿ ವೇಗವಾಗಿ ಬಂದ ಬಿಳಿ ಬಣ್ಣದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದೆ.
ಅಷ್ಟರಲ್ಲಿ ರಸ್ತೆಯಲ್ಲಿ ಮುಂದೆ ಬರುತ್ತಿದ್ದ ಮಹಿಳೆ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಲ್ಪದರಲ್ಲಿಯೇ ಮಹಿಳೆ ಪಾರಾಗಿದ್ದಾರೆ. ಆದರೆ ಅದೃಷ್ಟದ ಮೇಲೆ ಎಷ್ಟು ದಿನ ನಾವು ಅವಲಂಬಿತರಾಗಿದ್ದೇವೆ? ರಸ್ತೆಯಲ್ಲಿ ನಡೆದಾಡುವಾಗ ಸುರಕ್ಷತೆಯೊಂದಿಗೆ ಜವಾಬ್ದಾರರಾಗಿರಿ ಎಂಬ ಬರೆದುಕೊಂಡಿದ್ದಾರೆ.
Narrow escape but how long do we depend on luck?
Be responsible on Roads #RoadSafety pic.twitter.com/JEck2aXIuK
— V.C. Sajjanar, IPS (@SajjanarVC) September 1, 2022
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ರಸ್ತೆ ಅಪಘಾತ ಪ್ರಕರಣಗಳು 2020 ರಲ್ಲಿ 3,54,796 ರಿಂದ 2021 ರಲ್ಲಿ 4,03,116 ಕ್ಕೆ ಏರಿದೆ. 2021 ರಲ್ಲಿ ಭಾರತದಲ್ಲಿ 4,03,116 ರಸ್ತೆ ಅಪಘಾತಗಳಲ್ಲಿ ಸುಮಾರು 1,55,622 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,71,884 ಜನರು ಗಾಯಗೊಂಡಿದ್ದಾರೆ ಎಂದು NCRB ವರದಿ ತಿಳಿಸಿದೆ. ಒಟ್ಟಾರೆಯಾಗಿ ರಸ್ತೆ ಅಪಘಾತಗಳು ಸಾವುಗಳಿಗಿಂತ ಹೆಚ್ಚು ಗಾಯಗಳನ್ನು ಉಂಟುಮಾಡುತ್ತವೆಯಾದರೂ, ಮಿಜೋರಾಂ, ಪಂಜಾಬ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ರಸ್ತೆ ಅಪಘಾತಗಳನ್ನು ಹೊಂದಿದ್ದು, ಗಾಯಗಳಿಗಿಂತ ಹೆಚ್ಚು ಸಾವುಗಳಿಗೆ ಕಾರಣವಾಯಿತು ಎಂದು ವರದಿಯಿಂದ ತಿಳಿದುಬಂದಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.