AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಆರ್ ಹೆಡ್​ಸೆಟ್ ಹಾಕಿಕೊಂಡು ಫಿಲ್ಮ್ ನೋಡಿದ ಚಿಂಪಾಂಜಿಗಳು! ನಗು ತರಿಸುವ ವಿಡಿಯೋ ಇಲ್ಲಿದೆ

ಚಿಂಪಾಂಜಿಗಳಿಗೆ ವಿಆರ್ ಹೆಡ್​ಸೆಟ್ ಹಾಕಿ ಫಿಲ್ಮ್ ನೋಡಲು ಬಿಟ್ಟರೆ ಹೇಗೆ ಇರಬಹುದು ಎಂದು ಯೋಚಿಸಿದ್ದೀರಾ? ಅಂತಹ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ನಗಿಸುವಂತೆ ಮಾಡುತ್ತಿದೆ.

Viral Video: ವಿಆರ್ ಹೆಡ್​ಸೆಟ್ ಹಾಕಿಕೊಂಡು ಫಿಲ್ಮ್ ನೋಡಿದ ಚಿಂಪಾಂಜಿಗಳು! ನಗು ತರಿಸುವ ವಿಡಿಯೋ ಇಲ್ಲಿದೆ
ವಿಆರ್ ಹೆಡ್​ಸೆಟ್ ಹಾಕಿಕೊಂಡು ಫಿಲ್ಮ್ ನೋಡಿದ ಚಿಂಪಾಂಜಿಗಳು
TV9 Web
| Edited By: |

Updated on:Sep 18, 2022 | 5:14 PM

Share

ಅತ್ಯಂತ ಮೋಹಕವಾದ ಚಿಂಪಾಂಜಿಗಳು ಮನುಷ್ಯರಂತೆ ವರ್ತಿಸುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಪ್ರಪಂಚದಲ್ಲಿ ಹೆಚ್ಚು ಹೆಚ್ಚು ಜನರು ಚಿಂಪಾಂಜಿಗಳನ್ನು ಸಾಕುತ್ತಿದ್ದಾರೆ ಮತ್ತು ಅವುಗಳನ್ನು ನಿಜವಾದ ಶಿಶುಗಳಂತೆ ಪರಿಗಣಿಸುತ್ತಿದ್ದಾರೆ. ಇಂತಹ ಚಿಂಪಾಂಜಿಗಳು ಹೆಚ್ಚಾಗಿ ಮನುಷ್ಯರಂತೆಯೇ ವರ್ತಿಸುತ್ತವೆ. ಇಂತಹ ಪ್ರಾಣಿಗಳಿಗೆ ವರ್ಚುವಲ್ ರಿಯಾಲಿಟಿ ಹೆಡ್​ಸೆಟ್​ ಅನ್ನು ಹಾಕಿ ಫಿಲ್ಮ್ ನೋಡಲು ಬಿಟ್ಟರೆ ಹೇಗೆ ಇರಬಹುದು ಎಂದು ಒಮ್ಮೆ ಯೋಚಿಸಿ. ವಿಆರ್ ಹೆಡ್​ಸೆಟ್ ಹಾಕಿಕೊಂಡು ಸಿನಿಮಾ ನೋಡಿದ ಎರಡು ಚಿಂಪಾಂಜಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವುಗಳ ವರ್ತನೆಗೆ ನೀವು ನಗದೆ ಇರಲಾರಿರಿ.

ಮೊದಲು ಒಂದು ಚಿಂಪಾಂಜಿ ಹೆಡ್​ಸೆಡ್ ಹಾಕಿಕೊಂಡು ಪ್ರಯಾಣದ ವಿಡಿಯೋವನ್ನು ನೋಡುತ್ತದೆ, ಈ ವೇಳೆ ಆ ಹೆಡ್​ಸೆಟ್​ಗೆ ಅದು ತನ್ನ ಕೈಯಿಂದ ಗುದ್ದುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಇದರ ಬಳಿ ಬಂದ ಮತ್ತೊಂದು ಚಿಂಪಾಂಜಿ, ಅದರ ಕೈಯಿಂದ ವಿಆರ್ ಹೆಡ್​ಸೆಟ್ ಅನ್ನು ಕಿತ್ತುಕೊಂಡು ತಾನು ಹಾಕಿಕೊಂಡಿದೆ. ಈ ವೇಳೆ ಪ್ರಯಾಣದ ದೃಶ್ಯವನ್ನು ವೀಕ್ಷಿಸುವಾಗ ಅದು ಕೂಡ ಅತ್ತಿತ್ತ ತಿರುವುದನ್ನು ನೋಡುವಾಗ ನಿಮ್ಮ ಮುಖದಲ್ಲಿ ನಗು ತರಿಸುವುದರಲ್ಲಿ ಅನುಮಾನವೇ ಇಲ್ಲ.

ಈ ವಿಡಿಯೋವನ್ನು chimpbrothers ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು 2.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 53 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಇರುವ ಚಿಂಪಾಂಜಿಗಳ ಹೆಸರು ವಾಲಿ ಮತ್ತು ಸುಗ್ರೀವ. ಪೋಸ್ಟ್ ಹಂಚಿಕೊಳ್ಳುವಾಗ ಬಳಕೆದಾರರು, “ವಾಲಿ ಮತ್ತು ಸುಗ್ರೀವ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಅನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಅವರು ಕಾಂಬೋಡಿಯಾದ ಕಾಡಿನಲ್ಲಿರುವ ಅಂಕೋರ್ ವಾಟ್ ದೇವಾಲಯದ ಮೂಲಕ ಪ್ರಯಾಣವನ್ನು ವೀಕ್ಷಿಸುತ್ತಿದ್ದಾರೆ” ಎಂದು ಶೀರ್ಷಿಕೆ ಬರೆದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Sun, 18 September 22